ಶಿಕ್ಷಕರ ನೇಮಕಾತಿಗಾಗಿ ಸಿದ್ದಗೊಂಡಿತು ಹೊಸದೊಂದು ಪ್ರಸ್ತಾವನೆ – ಶೀಘ್ರದಲ್ಲೇ ಹೊರಬೀಳಲಿದೆ ಶಿಕ್ಷಕರ ನೇಮಕಾತಿ ಪ್ರಸ್ತಾವನೆ ಶಿಕ್ಷಕರ ವರ್ಗಾವಣೆ ಸೇರಿದಂತೆ ಹಲವಾರು ಸಮಸ್ಯೆಗಳು ಮತ್ತೆ ನೆನೆಗುದಿಗೆ…..
ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ.ಹೌದು ಈ ಒಂದು ನಿಟ್ಟಿನಲ್ಲಿ ಮತ್ತೆ ಏಳೂವರೆ ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಮುಂದಾಗಿದೆ.ಈ ಒಂದು ಕುರಿತಂತೆ ಪ್ರಸ್ತಾವನೆ ಕೂಡಾ ಸಿದ್ದವಾ ಗಿದ್ದು ರಾಜ್ಯ ಸರ್ಕಾರ ಒಪ್ಪಿಗೆ ನೀಡಿದರೆ ಶಿಕ್ಷಣ ಇಲಾಖೆಯಿಂದ ಈ ಒಂದು ಅಧಿಸೂಚನೆ ಹೊರಬೀಳಲಿದೆ.
7.5 ಸಾವಿರ ಶಿಕ್ಷಕರ ಭರ್ತಿಗೆ ಪ್ರಸ್ತಾವನೆ ಸಿದ್ದ ವಾಗಿದೆ.ಸರ್ಕಾರಿ ಶಾಲೆಗಳಿಗೆ ಅಗತ್ಯವಾದಷ್ಟು ಶಿಕ್ಷಕರನ್ನು ಭರ್ತಿ ಮಾಡುವುದು ಸರ್ಕಾರಕ್ಕೆ ಸಧ್ಯದ ಆರ್ಥಿಕ ಪರಸ್ಥಿತಿಯ ನಡುವೆ ಸವಾಲಿನ ಕೆಲಸವಾಗುತ್ತಿದೆ.ಖಾಲಿಯಾಗುತ್ತಿರುವ ಹುದ್ದೆ ಗಳಿಗೆ ನೇಮಕ ಮಾಡಿಕೊಳ್ಳಲು ಶಿಕ್ಷಣ ಇಲಾಖೆ ಆಸಕ್ತಿ ತೋರಿಸಿದೆ.ಈ ಹಿಂದಿನ ಸರ್ಕಾರದ ಅವಧಿಯಲ್ಲಿ
(2022-23) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇದ್ದ 15 ಸಾವಿರ ಪದವೀಧರ ಪ್ರಾಥಮಿಕ ಶಿಕ್ಷಕರ (6ರಿಂದ 8ನೇ ತರಗತಿ) ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿತ್ತು.ಆ ಪೈಕಿ 13352 ಅರ್ಹ ಅಭ್ಯರ್ಥಿಗಳು ಆಯ್ಕೆಯಾಗಿದ್ದು ನ್ಯಾಯಾಲ ಯದ ಪ್ರಕರಣಗಳನ್ನು ಹೊರತುಪಡಿಸಿ ಒಟ್ಟು 12415 ಶಿಕ್ಷಕರನ್ನು ಕೌನ್ಸೆಲಿಂಗ್ ಮೂಲಕ ಸ್ಥಳ ನಿಯುಕ್ತಿಗೊಳಿಸಲಾಗಿದೆ.
ಈ ನಡುವೆಯೇ ಮುಂದಿನ ಶೈಕ್ಷಣಿಕ ಅವಧಿಗೆ ಹೊಸದಾಗಿ ಐದು ಸಾವಿರ ಶಿಕ್ಷಕರ ಕೊರತೆ ಎದುರಾಗಲಿದೆ.ಇನ್ನೂ ಸರ್ಕಾರಿ ಪ್ರೌಢಶಾಲೆ ಗಳಲ್ಲಿ ಖಾಲಿ ಇರುವ ವಿವಿಧ ವೃಂದದ ಒಟ್ಟು 2500 ಶಿಕ್ಷಕರ ಹುದ್ದೆಗಳನ್ನು 15 ಸಾವಿರ ಪದವೀ ಧರ ಪ್ರಾಥಮಿಕ ಶಾಲಾ ನೇಮಕಾತಿಯಲ್ಲಿ ಭರ್ತಿಯಾಗದೇ ಖಾಲಿ ಉಳಿದ ಹುದ್ದೆಗಳಿಗೆ ಹೊಂದಾಣಿಕೆ ಮಾಡಿಕೊಳ್ಳುವ ಷರತ್ತಿಗೊಳಪ ಟ್ಟು ನೇರ ನೇಮಕ ಮೂಲಕ ಭರ್ತಿ ಮಾಡಲು ಸರ್ಕಾರ ಅನುಮತಿ ನೀಡಿತ್ತು.
ಆದರೆ ಈ 15 ಸಾವಿರ ಹುದ್ದೆಗಳಲ್ಲಿ ಪ್ರೌಢ ಶಾಲಾ ಶಿಕ್ಷಕರ ನೇಮಕಾತಿಗೆ 1648 ಹುದ್ದೆಗಳು ಮಾತ್ರ ಉಳಿದಿರುವ ಕಾರಣ ಪ್ರಸಕ್ತ ಸಾಲಿನಲ್ಲಿ ಒಟ್ಟು 2500 ಹುದ್ದೆಗಳನ್ನು ಭರ್ತಿ ಮಾಡಲು ಅನುಮತಿ ನೀಡುವ ಪ್ರಸ್ತಾವನೆಯ ಬಗ್ಗೆ ಆರ್ಥಿಕ ಇಲಾಖೆ ಯೊಂದಿಗೆ ಸಮಾಲೋಚನೆ ನಡೆದಿದೆ ಎಂದು ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.
ಇದೇಲ್ಲ ಒಂದು ವಿಚಾರವಾದರೆ ಇನ್ನೂ ಪ್ರಮುಖವಾಗಿ ಶಿಕ್ಷಕರ ವರ್ಗಾವಣೆ ಸೇರಿದಂತೆ ಸಾಕಷ್ಟು ಪ್ರಮಾಣದಲ್ಲಿ ಶಿಕ್ಷಕರ ಸಮಸ್ಯೆಗಳು ರಾಜ್ಯದಲ್ಲಿದ್ದು ಹೀಗಾಗಿ ಇವೆಲ್ಲವುಗಳನ್ನು ಮುಂದಿಟ್ಟುಕೊಂಡು ಪರಿಹಾರ ಮಾಡಿದರೆ ಮತ್ತಷ್ಟು ಖಾಲಿಯಾಗುವ ಹುದ್ದೆಗಳ ಅಂಕಿ ಸಂಖ್ಯೆ ರಾಜ್ಯ ಸರ್ಕಾರಕ್ಕೆ ಸಿಗುತ್ತಿತ್ತು
ಆದರೆ ಎಲ್ಲಾ ಸಮಸ್ಯೆಗಳನ್ನು ಹಾಗೇ ಇಟ್ಟು ಸಧ್ಯ ಹೊಸದಾಗಿ ಶಿಕ್ಷಕರ ನೇಮಕಾತಿಯನ್ನು ಮಾಡಿ ಕೊಳ್ಳಲು ಮುಂದಾಗಿದ್ದು ಅಸಮಾಧಾನಕ್ಕೆ ಕಾರಣವಾಗಿದ್ದು ಏನೇನಾಗಲಿದೆ ಎಂಬೊದನ್ನು ಕಾದು ನೋಡಬೇಕಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..