ಹುಬ್ಬಳ್ಳಿ –
ಹುಬ್ಬಳ್ಳಿಯಲ್ಲಿ ಸಂಚಾರಿ ಪೊಲೀಸರಿಂದ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮ DCP ಯವರೊಂದಿಗೆ ಮೂರು ಠಾಣೆಗಳ ಚಾರ್ಲಿಗಳು ಸಿಬ್ಬಂದಿಗಳಿಂದ ರಸ್ತೆ ಸುರಕ್ಷತಾ ಕುರಿತಂತೆ ನಡೆಯಿತು ಜಾಗೃತಿ ಹೌದು
ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಕುರಿತಂತೆ ಹುಬ್ಬಳ್ಳಿಯಲ್ಲಿ ಕಾರ್ಯಕ್ರಮ ನಡೆಯಿತು.ಹೌದು ಸಂಚಾರಿ ಪೊಲೀಸ್ ರಿಂದ ನಗರದಲ್ಲಿ ಹಮ್ಮಿ ಕೊಂಡಿದ್ದ ಈ ಒಂದು ಕಾರ್ಯಕ್ರಮವನ್ನು ಅಪರಾಧ ವಿಭಾಗದ ಡಿಸಿಪಿ ಪಿ ಆರ್ ರವೀಶ್ ಅವರು ಚಾಲನೆ ನೀಡಿದರು.
ನಗರದ ತೋಳನಕೇರಿಯಲ್ಲಿ ಹಮ್ಮಿಕೊಂಡಿದ್ದ ಈ ಒಂದು ವಿಶೇಷವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ನಂತರ ಶಾಲಾ ಮಕ್ಕಳೊಂದಿಗೆ ರಸ್ತೆ ಸುರಕ್ಷತೆ ಕುರಿತಂತೆ ಹೆಜ್ಜೆಯನ್ನು ಹಾಕಿದರು. ನಗರದ ವಿವಿಧ ಶಾಲೆಗಳಿಂದ ಆಗಮಿಸಿದ ಮಕ್ಕ ಳೊಂದಿಗೆ ಪೊಲೀಸ್ ಅಧಿಕಾರಿಗಳು ಸಿಬ್ಬಂದಿ ಗಳು ಸಂಚಾರಿ ಪೊಲೀಸರು ತೋಳನಕೇರಿ ಯಿಂದ ಶಿರೂರ ಪಾರ್ಕ್ ವರೆಗೆ ರಸ್ತೆ ಸುರಕ್ಷತೆ ಕುರಿತಂತೆ ಹೆಜ್ಜೆಯನ್ನು ಹಾಕಿ ಸಾರ್ವಜನಿಕರಿಗೆ ಜಾಗೃತಿಯನ್ನು ಮೂಡಿಸಿದರು.
ಇದರೊಂದಿಗೆ ನಗರದಲ್ಲಿ ಅರ್ಥಪೂರ್ಣವಾಗಿ ನಗರದಲ್ಲಿ ಸಂಚಾರಿ ಪೊಲೀಸರಿಂದ ರಸ್ತೆ ಸುರಕ್ಷತೆ ಕುರಿತಂತೆ ಜಾಗೃತಿ ಕಾರ್ಯಕ್ರಮ ನಡೆಯಿತು.ಇನ್ನೂ ಈ ಒಂದು ಕಾರ್ಯಕ್ರಮದಲ್ಲಿ ಪೊಲೀಸ್ ಅಧಿಕಾರಿಗಳಾದ ಡಿಸಿಪಿ ಪಿ ಆರ್ ರವೀಶ್,ಸಂಚಾರಿ ವಿಭಾಗದ ಎಸಿಪಿ ಅಧಿಕಾರಿ ಗಳಾದ ವಿನೋದ ಮುಕ್ತೇದಾರ,ಉತ್ತರ ಸಂಚಾರಿ ಪೊಲೀಸ್ ಠಾಣೆಯ ಡಾ ರಮೇಶ್ ಗೋಕಾಕ,
ದಕ್ಷಿಣ ಪೊಲೀಸ್ ಠಾಣೆಯ ಮರಳುಸಿದ್ದಪ್ಪ, ಪೂರ್ವ ಸಂಚಾರಿ ಪೊಲೀಸ್ ಠಾಣೆಯ ಜಾಕ್ಸನ್ ಡಿಸೋಜಾ,ಇನ್ನೂ ಸಂಚಾರಿ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಮಲ್ಲಿಕಾರ್ಜುನ ನಿಡವಣಿ, ಸೇರಿದಂತೆ ಹಲವರು ವಿವಿಧ ಶಾಲೆಗಳ ಮಕ್ಕಳು ಈ ಒಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..