ಬೆಂಗಳೂರು –
ಹೌದು ಕಳೆದ ಕೆಲ ದಿನಗಳಿಂದ ತೀವ್ರ ಕುತೂಹಲ ಕೆರಳಿಸಿರುವ ನಿಗಮ ಮಂಡಳಿ ನೇಮಕ ವಿಚಾರ ಕುರಿತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕೊನೆಗೂ ಗುಡ್ ನ್ಯೂಸ್ ನೀಡಿದ್ದು ಈ ಒಂದು ವಾರದಲ್ಲಿ ನಿಗಮ ಮಂಡಳಿಯ ಪಟ್ಟಿ ಈ ಒಂದು ವಾರದಲ್ಲಿ ಪ್ರಕಟಿಸಿದಾಗಿ ಹೇಳಿದರು
ಆಡಳಿತರೂಢ ಕಾಂಗ್ರೆಸ್ ಪಕ್ಷದ ಪ್ರಮುಖರಿಗೆ ಈ ವಾರದೊಳಗೇ ಅಧಿಕಾರ,ಸ್ಥಾನಮಾನ ಸಿಗುವ ನಿರೀಕ್ಷೆ ಮತ್ತೆ ಗರಿಗೆದರಿದೆ.ಈ ವಾರದಲ್ಲಿ ನಿಗಮ ಮಂಡಳಿಗಳ ನೇಮಕವಾಗುವುದು ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು ನಿಗಮ ಮಂಡಳಿಗಳಿಗೆ ಶಾಸಕರ ನಾಮನಿರ್ದೇಶ ನದ ಜತೆಗೆ, ಕೆಲವು ಪ್ರಮುಖ ಕಾರ್ಯಕರ್ತರಿಗೂ ಅವಕಾಶ ಸಿಗಲಿದೆ.
ಜೊತೆಗೆ, ರಾಜ್ಯ, ಜಿಲ್ಲೆ ಮತ್ತು ತಾಲೂಕು ಈ 3 ಹಂತದಲ್ಲಿ ‘ಗ್ಯಾರಂಟಿಗಳ ಅನುಷ್ಠಾನ ಸಮಿತಿ ಗಳಿಗೂ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯ ಕರ್ತರ ನೇಮಕ ನಡೆಯಲಿದೆ.ಲೋಕಸಭೆ ಚುನಾವಣೆಗೆ ಅಖಾಡ ಫೈನಲ್ ಆಗುವ ಮುನ್ನ ಪಕ್ಷದ ಶಾಸಕರು ಹಾಗೂ ಪ್ರಮುಖರಿಗೆ ಅಧಿಕಾರ ಹಂಚಿ,ಸ್ಥಾನಮಾನದೊಂದಿಗೆ ಉತ್ಸಾಹ ತುಂಬಲು ನಿರ್ಧರಿಸಲಾಗಿದೆ.
ಈಗಾಗಲೇ ಅಂತಿಮಗೊಂಡಿರುವ ಶಾಸಕರ ಪಟ್ಟಿ ಜೊತೆಗೆ, ಮುಖಂಡರ ಪಟ್ಟಿಯನ್ನೂ ಆಖೈರು ಗೊಳಿಸ ಲಾಗಿದೆ. ಗ್ಯಾರಂಟಿ ಸಮಿತಿಗಳಿಗೂ ಪಟ್ಟಿ ಸಿದ್ದಪಡಿಸಲಾಗುತ್ತಿದೆ.ಈ ವಾರದೊಳಗೆ ಶಾಸಕರ ನಾಮನಿರ್ದೆಶನ ಪ್ರಕ್ರಿಯೆ ನಡೆಯಲಿದ್ದು, ಅದರ ಜೊತೆ ಜೊತೆಗೆ, ಗ್ಯಾರಂಟಿ ಸಮಿತಿಗಳ ನೇಮ ಕಕ್ಕೂ ಸಿದ್ದತೆಯಾಗಿದೆ ಎಂದರು.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..