ಶಿರಸಿ –
ಈಡೇಯಿತು ಸರ್ಕಾರಿ ನೌಕರರ ಆ ಒಂದು ಬೇಡಿಕೆ – ರಾಜ್ಯಾಧ್ಯಕ್ಷರಿಗೆ ಬೇಡಿಕೆ ಇಟ್ಟಿದ್ದ ನೌಕರರಿಗೆ ಆದೇಶ ಪತ್ರ ನೀಡಿದ ಷಡಾಕ್ಷರಿ ಯವರು ಹೌದು ಪ್ರತ್ಯೇಕ ಜಿಲ್ಲಾ ಶಾಖೆ ಘೋಷಣೆ ವಿಚಾರ ಕುರಿತು ಶಿರಸಿಯ ಸರ್ಕಾರಿ ನೌಕರರು ಇಟ್ಟಿದ್ದ ಬೇಡಿಕೆ ಗೆ ಕೊನೆಗೂ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಯವರು ಸ್ಪಂದಿಸಿದ್ದಾರೆ.
ಹೌದು ಕಳೆದ ಆರೇಳು ವರ್ಷಗಳಿಂದ ಉತ್ತರ ಕನ್ನಡದ ಘಟ್ಟದ ಮೇಲಿನ ತಾಲೂಕುಗಳಿಗೆ ಸಂಬಂಧಿಸಿ ಪ್ರತ್ಯೇಕ ಜಿಲ್ಲಾ ಶಾಖೆ ಘೋಷಿಸು ವಂತೆ ಒತ್ತಾಯಿಸಿದ್ದ ಸರಕಾರಿ ನೌಕರರ ಬೇಡಿಕೆಯು ಅಂತೂ ಈಡೇರಿದೆ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಶಿರಸಿ ತಾಲೂಕಿನ ಶಾಖೆ ಸಧ್ಯ ಜಿಲ್ಲಾ ಶಾಖೆಯಾಗಿ ಪರಿವರ್ತನೆಗೊಂಡಿದೆ.
ಈ ಕುರಿತು ಸಂಘದ ರಾಜ್ಯ ಅಧ್ಯಕ್ಷ ಸಿ.ಎಸ್. ಷಡಕ್ಷರಿ ಆದೇಶ ಪತ್ರವನ್ನು ನೂತನ ಶಿರಸಿ ಜಿಲ್ಲಾ ಘಟ್ಟಕದ ಪ್ರಥಮ ಅಧ್ಯಕ್ಷ ಕಿರಣಕುಮಾರ ನಾಯ್ಕ ಅವರಿಗೆ ಹಸ್ತಾಂತರಿಸಿದರು. ಶಿರಸಿ, ಸಿದ್ದಾಪುರ,ಯಲ್ಲಾಪುರ, ಮುಂಡಗೋಡ, ಹಳಿಯಾಳ, ಜೋಯಿಡಾ,ದಾಂಡೇಲಿ ಒಳ ಗೊಂಡ ಶಿರಸಿ ಜಿಲ್ಲಾ ಘಟಕದ ನೂತನ ಜಿಲ್ಲಾ ಖಜಾಂಚಿಯಾಗಿ ಜಯದೇವ ಮತ್ತೂರು, ಕಾರ್ಯದರ್ಶಿಯಾಗಿ ವಸಂತ್ ನಾಯ್ಕ,ರಾಜ್ಯ ಪರಿಷತ್‌ಗೆ ಅಶೋಕ್ ಪಡುವಳ್ಳಿ ಆಯ್ಕೆ ಆದೇಶ ನೀಡಲಾಯಿತು.
ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಜುಜೆ ಫರ್ನಾಂಡಿಸ್, ಸಂಘಟನಾ ಕಾರ್ಯದರ್ಶಿ ಹರೀಶ್ ನಾಯಕ್ ಉಪಸ್ಥಿತರಿದ್ದರು. ನಮ್ಮ ಬೇಡಿಕೆಗೆ ರಾಜ್ಯ ಸಂಘ ಬಲ ನೀಡಿದ್ದು ಇದಕ್ಕೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸುವದಾಗಿ ನೂತನ ಜಿಲ್ಲಾ ಘಟಕದ ಸರ್ವ ಸದಸ್ಯರು ಹೇಳಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..