2 ಕೋಟಿ ರೂಪಾಯಿ ಬೆಲೆ ಬಾಳುವ ಆಸ್ತಿಗೆ 2.86 ಕೋಟಿ ಹಣವನ್ನ ಸ್ಟಾಂಪ್ ಡ್ಯೂಟಿ ಮಾಡಲು ಕಟ್ಟಿದ್ದು ಏಕೆ……ದಿಂಗಾಲೇಶ್ವರ ಸ್ವಾಮಿಜಿ ಪ್ರಶ್ನೆ……

Suddi Sante Desk

ಹುಬ್ಬಳ್ಳಿ –

2 ಕೋಟಿ ರೂಪಾಯಿ ಬೆಲೆ ಬಾಳುವ ಆಸ್ತಿಗೆ 2.86 ಕೋಟಿ ಹಣವನ್ನ ಸ್ಟಾಂಪ್ ಡ್ಯೂಟಿ ಮಾಡಲು ಕಟ್ಟಿದ್ದು ಏಕೆ…….ಹೀಗೆಂದು ಹುಬ್ಬಳ್ಳಿಯಲ್ಲಿ ಬಾಲೆಹೊಸರು ಮಠದ ದಿಂಗಾಲೇಶ್ವರ ಸ್ವಾಮಿಜಿ ಪ್ರಶ್ನೆ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮೂರು ಸಾವಿರ ಮಠದ ಸರ್ವನಾಶಕ್ಕೆ ಉನ್ನತ ಮಟ್ಟದ ಸಮಿತಿ ಸಿದ್ದವಾಗಿದೆ ಎಂದರು.


ದಿಂಗಾಲೇಶ್ವರ ಶ್ರೀಗಳಿಗೆ ಯಾವತ್ತು ತೊಂದ್ರೆ ಆಗುವುದಿಲ್ಲ.ಮೂರು ಸಾವಿರ ಮಠಕ್ಕೆ ತೊಂದ್ರೆ ಆಗಿದೆ.ನಾನು ಈಗ ಮಠದ ಆಸ್ತಿ ಉಳಿಸಬೇಕು ಎಂದು ಹೋರಾಟ ಮಾಡ್ತಾ ಇದೇನಿ.ಆದರೆ
ನಾನು ಉತ್ತರಾಧಿಕಾರಕ್ಕಾಗಿ ಹೋರಾಟ ನಡೆಸಿಲ್ಲ.
ನಾನು ಮಠದ ಆಸ್ತಿ ಉಳಿಸಲು ಹೋರಾಟ ನಡೆಸಿದಾಗ ಈ‌ ಮೋಹನ್ ‌ಲಿಂಬಿಕಾಯಿ ಯಾರು ಎಂದು ರಾಜ್ಯದ ಜನರಿಗೆ ಗೋತ್ತೆ ಇರಲಿಲ್ಲ.
ನಾನು ಉತ್ತರಾಧಿಕಾರಿ ಆಗಲು ಅಡ್ಡಗಾಲು ಹಾಕಿದ್ದಾರೆ ಎಂದರು.

ಸಿ.ಎಮ್ ಉದಾಸಿ, ಮೋಹನ ಲಿಂಬಿಕಾಯಿ, ಶಂಕರಣ್ಣ ಮುನವಳ್ಳಿ ಈ ಮೂವರ ಕುತಂತ್ರದಿಂದ ನಾನು ಉತ್ತರಾಧಿಕಾರಿಯಾಗಲು ಹಿನ್ನಡೆಯಾಗಿದೆ.
ದಿಂಗಾಲೇಶ್ವರ ಶ್ರೀ ಹೋರಾಟ ವ್ಯರ್ಥ ಪ್ರಯತ್ನ ಎಂದು ಹೇಳಿದ್ದಾರೆ.ಒಂದು ವೇಳೆ ಪ್ರಯತ್ನ ವ್ಯರ್ಥವಾದ್ರೆ 36 ವರ್ಷದಿಂದ ತೊಟ್ಟ ಕಾವಿ ಬಟ್ಟೆಯನ್ನ ಮಠದ ದ್ವಾರ ಬಾಗಿಲಿಗೆ ಹಾಕಿ ನಾನು ವಾಪಸ್ಸು ಹೋಗ್ತೆನಿ ಎಂದರು.

ಮಠದ ಆಸ್ತಿಯನ್ಬ ಉಳಿಸಿಕೊಳ್ಳಲು ಆಗದಿದ್ದರೆ ತೊಟ್ಟ ಖಾವಿ ಕಳಚಿ ಹಾಕುತ್ತೆನೆಂದು ಸವಾಲ್ ಹಾಕಿದ ದಿಂಗಾಲೇಶ್ವರ ಶ್ರೀ ಮೋಹನ್ ಲಿಂಬಿಕಾಯಿಗೆ ಸವಾಲ ಹಾಕಿದ ದಿಂಗಾಲೇಶ್ವರ ಶ್ರೀ.
ಮಠದದಲ್ಲಿ ಎಷ್ಟು ಅವ್ಯವಹಾರ ಆಗಿದೆ ಎಂಬುದರ ಬಗ್ಗೆ ನನ್ನ ಬಳಿ ದಾಖಲಿಗಳಿವೆ.ಅವ್ಯವಹಾರ ಆಗಿಲ್ಲಾ ಎನ್ನುವದಾದರೆ ಮಠದ ಕತೃ ಗದ್ದುಗೆಗೆ ಬರಲಿ, ನಾನು ಬರ್ತೆನಿ. ಮಠದಲ್ಲಿಯೆ ಮುಂದಿನ ದಿನಗಳಲ್ಲಿ ದಾಖಲೆ ಬಿಡುಗಡೆ ಮಾಡುತ್ತೆನೆ ನನ್ನ ಹೋರಾಟಕ್ಕೆ ಮೂನ್ನೂರು ಸ್ವಾಮಿಜಿಗಳು ಬೆಂಬಲ ಕೊಟ್ಟಿದ್ದಾರೆ ಎಂದರು.


ಬಾಳೆಹೊಸರಿನ ಮಠ ಅಭಿವೃದ್ಧಿಗೆ ಆಗಿದೆ, ಮೋಹನ ಲಿಂಬಿಕಾಯಿಯನ್ನು ನನ್ನ ಮಠದ ಕಾರಕೂನ ಆಗಿ ಇಟ್ಟುಕೊಳ್ಳುವ ಮಟ್ಟಕ್ಕೆ ಬೆಳೆದಿದೆ.
ಮೋಹನ್ ಲಿಂಬಿಕಾಯಿ ನನ್ನ ‌ಮಠದ ಕಾರಕೂನ ಆಗಲಿ ಅವರಿಗೆ ಮಠವನ್ನ ನೋಡಿಕೊಳ್ಳಲು ಬಿಡ್ತೆನಿ.ಬಹಳ ದಿನಗಳ ಬಳಿಕ ಮೂರು ಸಾವಿರ ಮಠದ ಉನ್ನತ ಮಟ್ಟದ ಸಮಿತಿ ಸದಸ್ಯರು ಮಾತನಾಡಿದ್ದಾರೆ.ಮೋಹನ್ ಲಿಂಬಿಕಾಯಿ ಮುಖ್ಯಮಂತ್ರಿಗಳಿಗೆ ಕಾನೂನು ಸಲಹೆಗಾರರು,
ಮೋಹನ ಲಿಂಬಿಕಾಯಿ ದಿಂಗಾಲೇಶ್ವರ ಶ್ರೀಗಳು ‌ಮೂರು ಸಾವಿರ ಮಠಕ್ಕೆ ‌ಏನೂ ಸಂಬಂಧ ಎಂದು ಹೇಳಿದ್ದಾರೆ.ಇದೆ ಮೋಹನ್ ಲಿಂಬಿಕಾಯಿ ಒಂದು ಕಾಗದ ಮೇಲೆ ಸಹಿ ಹಾಕಿದ್ದಾರೆ.ಈ ಕಾಗದ ನನಗೂ ಮತ್ತು ಮೂರು ಸಾವಿರ ಮಠಕ್ಕೆ ಸಂಬಂಧ ಏನೂ ಎಂಬುದು ಹೇಳುತ್ತದೆ.ನನಗೂ ಮೂರು ಸಾವಿರ ಮಠಕ್ಕೆ ಏನೂ ಸಂಬಂಧ ಎಂಬುದಕ್ಕೆ ಈ ದಾಖಲೆಗಳನ್ನ ಬಿಡುಗಡೆ ಮಾಡ್ತಾ ಇದೇನಿ.
ಈ ಕುರಿತು ದಾಖಲೆಗಳನ್ನ ಬಿಡುಗಡೆ ಮಾಡಿದರು.

ಮೂರು ಸಾವಿರ ಮಠದ ಇತಿಹಾಸವನ್ನ ಯಾರು ತಿಳಿದುಕೊಳ್ಳುತ್ತಾರೋ ಅವರಿಗೆ ನನ್ನ ಬಗ್ಗೆ ತಿಳಿಯುತ್ತದೆ.ಆದ್ರೆ ಮೂರು ಸಾವಿರ ಮಠದ ಆಸ್ತಿಯ ಮೇಲೆ ಕಣ್ಣು ಹಾಕಿದವರಿಗೆ ನಾನು ಯಾರು ಎಂಬುದು ತಿಳಿಯುವುದಿಲ್ಲ.ನನ್ನ ಮಠಕ್ಕೆ ಆಯ್ಕೆ ಮಾಡಿಕೊಳ್ಳುವಾಗ ಅವರು ಸಹ ಸಮಿತಿಯಲ್ಲಿ ದ್ದವರು.ಮೂರು ಸಾವಿರ ಮಠದ ಆಸ್ತಿಯನ್ನ ಕಾನೂನು ‌ಬಾಹಿರವಾಗಿ ಆಸ್ತಿ ಮಾರಾಟ ಮಾಡಿಲ್ಲ ಎಂದು ಲಿಂಬಿಕಾಯಿ ಹೇಳ್ತಾರೆ.ಆಸ್ತಿಯನ್ನ ಕಾನೂನಿನ ಪ್ರಕಾರ ಮಾರಾಟ ಮಾಡುವ ಅಧಿಕಾರವನ್ನ ನಿಮಗೆ ಯಾರು ಕೊಟ್ಟರು.ಈ ಮಠದ ಸ್ಥಿರಾಸ್ತಿ ಆಸ್ತಿಗಳನ್ನ ಮಾರಾಟ ಮಾಡಬಾರದು ಎಂದು ಸುಪ್ರೀಂ ಕೋರ್ಟ್ ಆದೇಶವಿದೆ.ಇದಕ್ಕೆ ‌ಈಗಿರುವ ಶ್ರೀಗಳು ಸಹಿ ಹಾಕಿದ್ದಾರೆ‌. ಮೂರು ಸಾವಿರ ಮಠದ ಜೊತೆಗೆ ಹಾನಗಲ್ ಕುಮಾರ ಸ್ವಾಮಿ ಮಠದವನ್ನ ನಾಶ ಮಾಡಿದ್ದು ಸಿಎಂ ಉದಾಸಿ, ಹಾನಗಲ್ ಮಠವನ್ನ ನಾಶ ಮಾಡಿದ್ದರ ಕುರಿತು ಮುಂದಿನ ದಿನಗಳಲ್ಲಿ ದಾಖಲೆ ಬಿಡುಗಡೆ ಮಾಡುತ್ತೆನೆ ಎಂದರು.ಶಂಕರಣ್ಣ ಮುನವಳ್ಳಿಯವರು 24 ಎಕರೆಯ ಆಸ್ತಿಯ ಬೆಲೆ 2 ಕೋಟಿ ರೂಪಾಯಿ ಎಂದು ಹೇಳ್ತಾರೆ.ಆದ್ರೆ ನಾನು 2 ಕೋಟಿ ರೂಪಾಯಿ ಭಿಕ್ಷೆ ಬೇಡಿ ನಿಮಗೆ ಕೊಡ್ತೆನಿ, ಮೂರು ಸಾವಿರ ಮಠದ ಆಸ್ತಿ ಮಠಕ್ಕೆ ಬಿಟ್ಟ ಕೊಡಿ.
2.86 ಕೋಟಿ ರೂಪಾಯಿ ಹಣವನ್ನ ಸ್ಟಾಂಪ್ ಡ್ಯೂಟಿ ‌ಮಾಡಲು ಕಟ್ಟಿದ್ದಾರೆ.ದಾನಪತ್ರ ನೋಂದ ಮಾಡಲು ಇಷ್ಟು ಹಣವನ್ನ ಕೊಟ್ಟಿದ್ದಾರೆ. 2 ಕೋಟಿ ರೂಪಾಯಿ ಬೆಲೆ ಬಾಳುವ ಆಸ್ತಿಗೆ 2.86 ಕೋಟಿ ಹಣವನ್ನ ಸ್ಟಾಂಪ್ ಡ್ಯೂಟಿ ಮಾಡಲು ಕಟ್ಟಿದ್ದು ಏಕೆ……ಶಂಕರಣ್ಣ ಮುನವಳ್ಳಿ ಸುಳ್ಳಿನ ಸಂಘವನ್ನ ಕಟ್ಟಿಕೊಂಡು, ಸುಳ್ಳಿನ ಸಂತೆ ನಡೆಸುತ್ತಿದ್ದಾರೆ.
ಮೂರು ಸಾವಿರ ಮಠ ಪೂರ್ಣ ಖಾಲಿಯಾಗಿದೆ.
ಬಸವರಾಜ ಹೊರಟ್ಟಿಯವರಿಗೆ ಮಠದ ಬಗ್ಗೆ ಕಾಳಜಿ ಇದ್ದರೆ ಮಠದ ಆಸ್ತಿ ಮಠಕ್ಕೆ ಮರಳಿಸಲು‌ ಮುಂದಾಗಬೇಕೆಂದು ಒತ್ತಾಯ ಮಾಡಿದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.