ಹುಬ್ಬಳ್ಳಿ –
ಮೂರು ಬಾರಿ ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನ ಸಭಾ ಕ್ಷೇತ್ರದಲ್ಲಿ ಶಾಸಕರಾಗಿ ಆಯ್ಕೆ ಯಾಗುವ ಮೂಲಕ ಹ್ಯಾಟ್ರಿಕ್ ಬಾರಿಸಿರುವ ಹು-ಧಾ ಪೂರ್ವ ಕ್ಷೇತ್ರದ ಶಾಸಕ ಪ್ರಸಾದ ಅಬ್ಬಯ್ಯ ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗಣರಾಜ್ಯೋತ್ಸ ವದ ಗಿಫ್ಟ್ ನೀಡಿದ್ದಾರೆ ಹೌದು
ರಾಜ್ಯದಲ್ಲಿ ಹೊಸದಾಗಿ ಸರ್ಕಾರ ರಚನೆ ಗೊಂಡ ನಂತರ ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನ ಸಭಾ ಕ್ಷೇತ್ರದ ಶಾಸಕ ಪ್ರಸಾದ್ ಅಬ್ಬಯ್ಯ ಮೂರನೇ ಬಾರಿಗೆ ಶಾಸಕ ರಾಗಿದ್ದು ಸಚಿವರು ಆಗುತ್ತಾರೆ ಅಂದುಕೊಳ್ಳಲಾಗಿತ್ತು ಆದರೆ ಕೈ ಹೈ ಕಮಾಂಡ್ ಅವಕಾಶ ನೀಡಲಿಲ್ಲ ಸಧ್ಯ ಪ್ರಸಾದ್ ಅಬ್ಬಯ್ಯ ಅವರಿಗೆ ಕೊನೆಗೂ ನಿಗಮ ಮಂಡಳಿ ಯಲ್ಲಿ ಅವಕಾಶ ನೀಡಿದೆ
ಹೌದು ಸಿದ್ದರಾಮಯ್ಯ ಸರ್ಕಾರ ಗಣರಾಜ್ಯೋತ್ಸ ವದ ಬಂಪರ್ ಗಿಫ್ಟ್ ನೀಡಿದೆ.ಶಾಸಕ ಪ್ರಸಾದ ಅಬ್ಬಯ್ಯ ಅವರನ್ನು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಾಕ್ಷರನ್ನಾಗಿ ಆಯ್ಕೆ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಸಂಪುಟ ದರ್ಜೆಯ ಸ್ಥಾನ ಮಾನ ನೀಡಿ ಆದೇಶ ಹೊರಡಿಸಿದೆ.
ಕಾಂಗ್ರೆಸ್ ಶುಕ್ರವಾರ ಬಿಡುಗಡೆ ಮಾಡಿರುವ ಮೊದಲ ನಿಗಮ ಮಂಡಳಿಗಳ ಪಟ್ಟಿಯಲ್ಲಿ ಕೇವಲ ಶಾಸಕರು ಸ್ಥಾನ ಗಿಟ್ಟಿಸಿಕೊಂಡಿದ್ದು, ಅನೇಕ ಕಾರ್ಯಕರ್ತರು ಎರಡನೇ ಪಟ್ಟಿಯ ನಿರೀಕ್ಷೆಯಲ್ಲಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..