ಧಾರವಾಡ –
ಬಂಧಿತ ಹಿಂದೂ ಕಾರ್ಯಕರ್ತರನ್ನು ಭೇಟಿ ಯಾಗಿ ಆತ್ಮಸ್ಥೈರ್ಯ ತುಂಬಿ ಮಾಜಿ ಶಾಸಕ ಅಮೃತ ದೇಸಾಯಿ – ಬಂಧಿತರಿಗೆ ಜಾಮೀನು ಜವಾಬ್ದಾರಿ ತಗೆದುಕೊಂಡ ಧಣಿ ಅರ್ಜಿ ಸಲ್ಲಿಸಿದ ಬೆಳ್ಳಕ್ಕಿ ನ್ಯಾಯವಾದಿಗಳ ಟೀಮ್…..
ಈದ್ಗಾ ಮೈದಾನದಲ್ಲಿನ ಗುಂಬಜ್ ದ್ವಂಸ ಮಾಡಿದ ಪ್ರಕರಣ ಕುರಿತಂತೆ ಬಂಧನಕ್ಕೊಳಗಾಗಿ ರುವ ಧಾರವಾಡದ ತಡಕೋಡ ಗ್ರಾಮದ ಯುವಕರನ್ನು ಮಾಜಿ ಶಾಸಕ ಅಮೃತ ದೇಸಾಯಿ ಭೇಟಿಯಾದರು.ಹೌದು ಈಗಾಗಲೇ ಬಂಧನ ಕ್ಕೊಳಗಾಗಿ ಧಾರವಾಡ ಕಾರಾಗೃಹದಲ್ಲಿರುವ ಯುವಕರನ್ನು ಮಾಜಿ ಶಾಸಕ ಅಮೃತ ದೇಸಾಯಿ ಬಿಜೆಪಿ ಕಾರ್ಯಕರ್ತರು ಮುಖಂಡರೊಂದಿಗೆ ಭೇಟಿಯಾದರು.
ಬಂಧಿತ ತಡಕೋಡದ ಹಿಂದೂ ಕಾರ್ಯಕರ್ತ ರನ್ನು ಭೇಟಿ ಮಾಡಿದ ಅಮೃತ ದೇಸಾಯಿಯ ವರು ಧೈರ್ಯ ತುಂಬಿ ಆತ್ಮಸ್ಥೈರ್ಯವನ್ನು ನೀಡಿದರು.ಇನ್ನೂ ಇತ್ತ ನ್ಯಾಯಾಂಗ ಬಂಧನದ ಲ್ಲಿರುವ ಯುವಕರಿಗೆ ಜಾಮೀನು ನೀಡಿಸುವ ಜವಾಬ್ದಾರಿಯನ್ನು ಮಾಜಿ ಶಾಸಕ ಅಮೃತ ದೇಸಾಯಿ ಹೊತ್ತುಕೊಂಡಿದ್ದಾರೆ.
ಏನೇ ಎಷ್ಟೇ ಖರ್ಚು ಬಂದರು ಕೂಡಾ ಬಂಧನದಲ್ಲಿರುವ ಹಿಂದೂ ಕಾರ್ಯಕರ್ತರ ಯುವಕರ ಬಿಡುಗಡೆಗೆ ಧಣಿ ಪಣ ತೊಟ್ಟಿ ದ್ದಾರೆ.ಇನ್ನೂ ತಡಕೋಡ ಗ್ರಾಮದ ಸದ್ದಾಂ ಹುಸೇನ್ ಎಂಬ ಯುವಕ ಅಯೋಧ್ಯೆ ರಾಮ ಮಂದಿರದ ಮೇಲೆ ಹಸಿರು ಬಾವುಟ ಹಾಕಿ ಎಡಿಟ್ ಮಾಡಿದಕ್ಕೆ ಆಕ್ರೋಶಗೊಂಡು ಗುಂಬಜ್ ಕೆಡವಿದ್ದ ಯುವಕರ
ಹೀಗಾಗಿ ಸಧ್ಯ ಈ ಒಂದು ಪ್ರಕರಣದಲ್ಲಿ ಯುವ ಕರನ್ನು ಬಂಧನ ಮಾಡಲಾಗಿದೆ.ಬಂಧನದ ಹಿನ್ನಲೆಯಲ್ಲಿ ಕಾರಾಗೃಹಕ್ಕೆ ಮಾಜಿ ಶಾಸಕ ಅಮೃತ ದೇಸಾಯಿ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರೊಂದಿಗೆ ಭೇಟಿ ಮಾಡಿ ಧೈರ್ಯವನ್ನು ತುಂಬಿದರು.ಮಾಜಿ ಶಾಸಕ ರೊಂದಿಗೆ ತಾಲ್ಲೂಕು ಅಧ್ಯಕ್ಷರು ಮುಖಂಡರು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಧಾರವಾಡ…..