ಬೆಂಗಳೂರು –
ಆಯೋಗದ ಮುಂದೆ 7ನೇ ವೇತನ ಆಯೋಗದ ಆತಂಕವನ್ನು ಬಿಚ್ಚಿಟ್ಟ ರಾಜ್ಯ ಸರ್ಕಾರಿ ನೌಕರರ ಟೀಮ್ – 7ನೇ ವೇತನ ಆಯೋಗದ ಅಧ್ಯಕ್ಷರನ್ನು ಮತ್ತೊಮ್ಮೆ ಭೇಟಿಯಾದ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರ ನೇತ್ರತ್ವದಲ್ಲಿ ನಿಯೋಗ
ಹೌದು ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕ್ರ. ರಣೆ ಕುರಿತಂತೆ ಈಗಾಗಲೇ ರಾಜ್ಯ ಸರ್ಕಾರ 7ನೇ ವೇತನ ಆಯೋಗವನ್ನು ರಚನೆ ಮಾಡಿ ವರದಿ ನೀಡಲು ಸಮಯಾವಕಾಶ ಕೂಡಾ ಮುಗಿದಿದೆ.
ಹೀಗಿರುವಾಗ ಮತ್ತೆ ಎರಡು ಬಾರಿ ಆಯೋಗದ ಅವಧಿಯನ್ನು ವಿಸ್ತರಣೆ ಮಾಡಲಾಗಿದ್ದು ಸಧ್ಯ 7ನೇ ವೇತನ ಆಯೋಗ ಎಲ್ಲಾ ವರದಿಯನ್ನು ಸಿದ್ದ ಮಾಡಿದ್ದರು ಕೂಡಾ ರಾಜ್ಯ ಸರ್ಕಾರ ಮಾತ್ರ ವರದಿಯನ್ನು ಸ್ವೀಕಾರ ಮಾಡುತ್ತಿಲ್ಲ ಹೀಗಾಗಿ ಸಧ್ಯ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಅವರ ನೇತ್ರತ್ವದಲ್ಲಿನ ನಿಯೋಗವು ಮತ್ತೊಮ್ಮೆ
7ನೇ ವೇತನ ಆಯೋಗದ ಅಧ್ಯಕ್ಷರನ್ನು ಭೇಟಿ ಯಾಗಿ ನೌಕರರ ಆತಂಕವನ್ನು ಬಿಚ್ಚಿಟ್ಟರು. ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಮುಂದೆ ಸರ್ಕಾರಿ ನೌಕರರು 7ನೇ ರಾಜ್ಯ ವೇತನ ಆಯೋಗದ ವರದಿ ಜಾರಿಗೊಳಿಸಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.ಕೆ.ಸುಧಾಕರ್ ನೇತೃತ್ವದ ವೇತನ ಆಯೋಗದ ಅವಧಿಯನ್ನು ಮಾರ್ಚ್ ತನಕ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ. ಎಸ್. ಷಡಾಕ್ಷರಿ ನೇತೃತ್ವದ ನಿಯೋಗವು ಮತ್ತೊಮ್ಮೆ 7ನೇ ವೇತನ ಆಯೋಗದ ಅಧ್ಯಕ್ಷ ಸದಸ್ಯರನ್ನು ಭೇಟಿ ಮಾಡಿತು.ಹಲವಾರು ವಿಚಾರಗಳ ಕುರಿತು ವಿವರವಾದ ಚರ್ಚೆಯನ್ನು ನಡೆಸಿತು.ಸರ್ಕಾರಿ ನೌಕರರ ಆತಂಕವನ್ನು ಸಹ ವಿವರಿಸಿತು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರು, ಪದಾಧಿಕಾರಿಗಳಿಂದ ರಾಜ್ಯ 7ನೇ ವೇತನ ಆಯೋಗದ ಅಧ್ಯಕ್ಷರ ಭೇಟಿಯ ಸಂದರ್ಭದಲ್ಲಿ ಎಲ್ಲಾ ಕಂಪ್ಲೀಟ್ ಆತಂಕದ ವಿಚಾರವನ್ನು ಹೇಳಿಕೊಂಡಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..