ಬೆಂಗಳೂರು –
ಫೆಬ್ರುವರಿ 27 ರಂದು ನಡೆಯಲಿದೆ ರಾಜ್ಯ ಮಟ್ಟದ ಸರ್ಕಾರಿ ನೌಕರರ ಸಮಾವೇಶ ರಾಜ್ಯದ ಮೂಲೆ ಮೂಲೆಗಳಿಂದ ಸಮಾವೇಶಕ್ಕೆ ಆಗ ಮಿಸುವಂತೆ ರಾಜ್ಯಾಧ್ಯಕ್ಷ ಷಡಾಕ್ಷರಿ ಕರೆ ಹೌದು
ಫೆಬ್ರುವರಿ 27ರಂದು ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಸರ್ಕಾರಿ ನೌಕರರ ರಾಜ್ಯ ಮಟ್ಟದ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಯವರು ಹೇಳಿದರು.ತುಮಕೂರಿನಲ್ಲಿ ಮಾತನಾಡಿದ ಅವರು ಬೆಂಗಳೂರಿನ ಅರಮನೆ ಮೈದಾನದಲ್ಲಿ ಈ ಒಂದು ಐತಿಹಾಸಿಕ ಕಾರ್ಯ ಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಇನ್ನೂ ಸಂಘದ ಈ ಒಂದು ವಿಶೇಷವಾದ ಕಾರ್ಯಕ್ರಮದಲ್ಲಿ ರಾಜ್ಯದ ಮೂಲೆ ಮೂಲೆಗ ಳಿಂದ ನೌಕರರು ಆಗಮಿಸಬೇಕು.ಪ್ರತಿಯೊಂದು ತಾಲ್ಲೂಕಿನಿಂದ ಎರಡು ಬಸ್ ಗಳನ್ನು ಮಾಡಲಾ ಗಿದ್ದು ಹೀಗಾಗಿ ಯಾರು ಕೂಡಾ ಖರ್ಚು ಮಾಡಿ ಕೊಂಡು ಬರದೇ ಸಂಘಟನೆಯಿಂದ ಮಾಡಿರುವ ಬಸ್ ಗಳಿಂದ ಸಮಾವೇಶಕ್ಕೆ ಬರುವಂತೆ ಕರೆ ನೀಡಿದರು.
ಇನ್ನೂ ಈ ಒಂದು ಸಮಾವೇಶದಲ್ಲಿ ರಾಜ್ಯದ ಮುಖ್ಯಮಂತ್ರಿ,ಉಪಮುಖ್ಯಮಂತ್ರಿ ಯವರು ಪಾಲ್ಗೊಳ್ಳಲಿದ್ದು ರಾಜ್ಯದ ಸರ್ಕಾರಿ ಪ್ರಮುಖ ಬೇಡಿಕೆಯಾದ 7ನೇ ವೇತನ ಆಯೋಗ ಹಳೆ ಪಿಂಚಣಿ ಯೋಜನೆ ಸೇರಿದಂತೆ ಎಲ್ಲಾ ಬೇಡಿಕೆ ಗಳನ್ನು ಈ ಒಂದು ಸಮಾವೇಶದಲ್ಲಿ ಘೋಷಣೆ ಮಾಡಲಿದ್ದಾರೆ
ಎಂಬ ನಿರೀಕ್ಷೆಯನ್ನು ಹೊಂದಲಾಗಿದೆ ಒಂದು ವೇಳೆ ಘೋಷಣೆ ಮಾಡದಿದ್ದರೆ ಮುಂದೆ ಏನು ಮಾಡಬೇಕು ಎಂಬ ಕುರಿತಂತೆ ಸಭೆಯನ್ನು ಮಾಡಿ ಸಂಘಟನೆ ನಿರ್ಧಾರವನ್ನು ತಗೆದುಕೊಳ್ಳು ತ್ತದೆ ಈವರೆಗೆ ನಾವು ಸರ್ಕಾರಿ ನೌಕರರ ಯಾವುದೇ ಬೇಡಿಕೆಯನ್ನು ಹೋರಾಟವನ್ನು ಮಾಡದೇ ಪಡೆದುಕೊಂಡಿದ್ದೇವೆ
ಸಧ್ಯ ಈ ಬಾರಿಯೂ ಕೂಡಾ 7ನೇ ವೇತನ ಆಯೋಗದ ವಿಚಾರದಲ್ಲೂ ಇದೆ ಇದನ್ನು ಮುಖ್ಯಮಂತ್ರಿಯವರು ಘೋಷಣೆ ಮಾಡುತ್ತಾರೆ ಎಂಬ ದೊಡ್ಡದಾದ ನಿರೀಕ್ಷೆಯನ್ನು ಇಟ್ಟುಕೊಳ್ಳ ಲಾಗಿದೆ ಎಂದರು.
ಹೀಗಾಗಿ ಈ ಒಂದು ನೌಕರರ ಸಮಾವೇಶವನ್ನು ಸಂಪೂರ್ಣವಾಗಿ ಯಶಸ್ವಿಗೊಳಿಸುವ ನಿಟ್ಟಿನಲ್ಲಿ 2 ರಿಂದ 3 ಲಕ್ಷಕ್ಕೂ ಹೆಚ್ಚು ನೌಕರರು ಪಾಲ್ಗೊಳ್ಳು ವಂತೆ ಷಡಾಕ್ಷರಿಯವರು ರಾಜ್ಯದ ಸರ್ಕಾರಿ ನೌಕರರಿಗೆ ಕರೆ ನೀಡಿದ್ದಾರೆ.ಬರಲು ಹೋಗಲು ಮತ್ತು ಊಟದ ವ್ಯವಸ್ಥೆ ಹೀಗೆ ಎಲ್ಲವನ್ನೂ ರಾಜ್ಯ ಸರ್ಕಾರಿ ನೌಕರರ ಸಂಘವು ಮಾಡಿದೆ ಎಂದರು.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..