ಬೆಂಗಳೂರು –
7ನೇ ವೇತನ ಆಯೋಗ ಸೇರಿದಂತೆ ನೌಕರರ ಬೇಡಿಕೆಗಳ ಘೋಷಣೆ ಮಾಡ್ತಾರಾ ಮುಖ್ಯಮಂತ್ರಿ ಸಮಸ್ತ ಸರ್ಕಾರಿ ನೌಕರರ ಚಿತ್ತ ಫೆಬ್ರುವರಿ 27 ರ ರಾಜ್ಯ ಸರ್ಕಾರಿ ನೌಕರರ ಸಮಾವೇಶದತ್ತ ಹೌದು
ಹೌದು ಫೆಬ್ರುವರಿ 27 ರಂದು ಬೆಂಗಳೂರಿನಲ್ಲಿ ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಸರ್ಕಾರಿ ನೌಕರರ ಸಮಾವೇಶ ನಡೆಯಲಿದೆ.ಈ ಒಂದು ಕುರಿತಂತೆ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿಯವರು ಮಾಹಿ ತಿಯನ್ನು ನೀಡಿದ್ದು ಇನ್ನು ಪ್ರಮುಖವಾಗಿ
ಈ ಒಂದು ಸಮಾವೇಶದಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಾಂತರ ನೌಕರರು ಪಾಲ್ಗೊಳ್ಳಲಿದ್ದು ಇತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಆಗಮಿಸಲಿದ್ದಾರೆ.
ಇನ್ನೂ ರಾಜ್ಯದ ಸರ್ಕಾರಿ ನೌಕರರ ಪ್ರಮುಖ ವಾದ ಬೇಡಿಕೆಯಾಗಿರುವ 7ನೇ ವೇತನ ಆಯೋಗ ಜಾರಿಗೆ ಹಳೆ ಪಿಂಚಣಿ ಯೋಜನೆ ಮರು ಜಾರಿಗೆ ಸೇರಿದಂತೆ ನೌಕರರ ಎಲ್ಲಾ ಬೇಡಿಕೆಗಳನ್ನು ಈ ಒಂದು ಸಮಾವೇಶದಲ್ಲಿ ಮುಖ್ಯಮಂತ್ರಿ ಘೋಷಣೆ ಮಾಡಲಿದ್ದಾರೆ ಎಂಬ ನಿರೀಕ್ಷೆಯ ಮಾತುಗಳು ಸಧ್ಯ ನೌಕರರ ವಲಯ. ದಲ್ಲಿ ಕೇಳಿ ಬರುತ್ತಿವೆ. ರಾಜ್ಯ ಮಟ್ಟದ ಸರ್ಕಾರಿ ನೌಕರರ ಸಮಾವೇಶದಲ್ಲಿ ಘೋಷಣೆ ಮಾಡಲಿ ದ್ದಾರೆ.
ರಾಜ್ಯದ ಮೂಲೆ ಮೂಲೆಗಳಿಂದ ಸಮಾವೇಶಕ್ಕೆ ಆಗಮಿಸುವ ಲಕ್ಷಾಂತರ ನೌಕರರಿಗೆ ಗುಡ್ ನ್ಯೂಸ್ ಸಿಗಲಿದೆ ಎಂಬ ನಿರೀಕ್ಷೆಯಲ್ಲಿ ನೌಕರ ರಿದ್ದಾರೆ.ಫೆಬ್ರುವರಿ 27ರಂದು ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಸರ್ಕಾರಿ ನೌಕರರ ರಾಜ್ಯ ಮಟ್ಟದ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಈ ಒಂದು ಐತಿಹಾಸಿಕ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಗಿದೆ .ಇನ್ನೂ ಸಂಘದ ಈ ಒಂದು ವಿಶೇಷವಾದ ಕಾರ್ಯಕ್ರಮದಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ನೌಕರರು ಆಗಮಿ ಸಬೇಕು.ಪ್ರತಿಯೊಂದು ತಾಲ್ಲೂಕಿನಿಂದ ಎರಡು ಬಸ್ ಗಳನ್ನು ಮಾಡಲಾಗಿದ್ದು ಹೀಗಾಗಿ ಯಾರು ಕೂಡಾ ಖರ್ಚು ಮಾಡಿಕೊಂಡು ಬರದೇ ಸಂಘಟನೆಯಿಂದ ಮಾಡಿರುವ ಬಸ್ ಗಳಿಂದ ಸಮಾವೇಶಕ್ಕೆ ಬರುವಂತೆ ರಾಜ್ಯಾಧ್ಯಕ್ಷರು ಕೂಡಾ ಈಗಾಗಲೇ ಕರೆ ನೀಡಿದ್ದಾರೆ.
ಹೀಗಾಗಿ ಸಮಾವೇಶದಲ್ಲಿ ರಾಜ್ಯದ ಮುಖ್ಯಮಂತ್ರಿ,ಉಪಮುಖ್ಯಮಂತ್ರಿ ಯವರು ಪಾಲ್ಗೊಳ್ಳಲಿದ್ದು ರಾಜ್ಯದ ಸರ್ಕಾರಿ ಪ್ರಮುಖ ಬೇಡಿಕೆಯಾದ 7ನೇ ವೇತನ ಆಯೋಗ ಹಳೆ ಪಿಂಚಣಿ ಯೋಜನೆ ಸೇರಿದಂತೆ ಎಲ್ಲಾ ಬೇಡಿಕೆ ಗಳನ್ನು ಈ ಒಂದು ಸಮಾವೇಶದಲ್ಲಿ ಘೋಷಣೆ ಮಾಡಲಿದ್ದಾರೆ ಎಂಬ ನಿರೀಕ್ಷೆಯನ್ನು ಹೊಂದ ಲಾಗಿದೆ.
ಹೀಗಾಗಿ ನಾಡದೊರೆ ಸಮಸ್ತ ಸರ್ಕಾರಿ ನೌಕರರಿಗೆ ಯಾವ ಸುದ್ದಿಯನ್ನು ನೀಡುತ್ತಾರೆ ಎಂಬೊದನ್ನು ಕಾದು ನೋಡಬೇಕಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು……