ಧಾರವಾಡ ಜಿಲ್ಲೆಯಲ್ಲಿ ಮುಂದುವರೆದ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮಗಳು – ಮಡಕಿಹೊನ್ನಿಹಳ್ಳಿ,ದಾಸ್ತಿಕೊಪ್ಪ ಗ್ರಾಮದಲ್ಲಿ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮಗಳು
ರಾಜ್ಯ ಸರ್ಕಾರದ ಸೂಚನೆಯಂತೆ ಧಾರವಾಡ ಜಿಲ್ಲೆಯಲ್ಲಿ ಸಂವಿಧಾನ ದಿನಾಚರಣೆ ಪ್ರಯುಕ್ತ ವಾದ ರಾಜ್ಯದಲ್ಲಿ ಸಂವಿಧಾನ ಜಾಗೃತಿ ಕಾರ್ಯ ಕ್ರಮ ನಡೆಯುತ್ತಿವೆ.ರಾಜ್ಯ ಸರ್ಕಾರ ಸೂಚನೆ ನೀಡುತ್ತಿದ್ದಂತೆ ರಾಜ್ಯದಲ್ಲಿ ಸಂವಿಧಾನ ದಿನಾ ಚರಣೆಯ ಪ್ರಯುಕ್ತವಾಗಿ ಸಂವಿಧಾನ ಕುರಿತಂತೆ ಅರ್ಥಪೂರ್ಣವಾದ ಕಾರ್ಯಕ್ರಮಗಳು ಕೂಡಾ ಜಿಲ್ಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ನಡೆಯುತ್ತಿದ್ದು
ಸಮಾಜ ಕಲ್ಯಾಣ ಇಲಾಖೆಯಿಂದ ಈ ಒಂದು ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ.ಜಿಲ್ಲೆಯ ಹಲವೆಡೆ ರಾಜ್ಯ ಸರ್ಕಾರದ ಸೂಚನೆಯಂತೆ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ. ಧಾರವಾಡ ಜಿಲ್ಲಾ ಆಡಳಿತ,ಜಿಲ್ಲಾ ಪಂಚಾಯತ್ ,ಸಮಾಜ ಕಲ್ಯಾಣ ಇಲಾಖೆಯಿಂದ ಈಗಾಗಲೇ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಸಂವಿಧಾನ ಜಾಗೃತಿಯ ಕಾರ್ಯಕ್ರಮಗಳನ್ನು ಆಯೋ ಜಿಸಲಾಗಿತ್ತು.
ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಅಲ್ಲಾಬಕಾಷ್ ಎಮ್ ಎಸ್ ಇವರ ಮಾರ್ಗದರ್ಶನದಲ್ಲಿ ಆಯಾ ತಾಲ್ಲೂಕಿನ ಇಲಾಖೆಯ ಸಹಾಯಕ ನಿರ್ದೇಶಕರು ಈ ಒಂದು ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ಪ್ರಮುಖ ವಾಗಿ ಮೆರವಣಿಗೆ ಮೂಲಕ ಎಲ್ಲಾ ಬೀದಿ ಬೀದಿಗ ಳಲ್ಲಿ ಎಲ್ಲಾ ಗ್ರಾಮಗಳಲ್ಲಿ ಸಂವಿಧಾನ ಪ್ರಸ್ತಾವನೆ ವಾಚಿಸುವ ಮೂಲಕ ಅರಿವು ಮೂಡಿಸಲಾಗು ತ್ತಿದೆ
ಅಲ್ಲದೇ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗ ಳೊಂದಿಗೆ ಸಂವಿಧಾನ ಕುರಿತಂತೆ ಜಾಗೃತಿಯನ್ನು ಕೂಡಾ ಮೂಡಿಸಲಾಗುತ್ತಿದ್ದು ಇದರೊಂದಿಗೆ ಸಂವಿಧಾನ ಕುರಿತಂತೆ ಜಾಗೃತಿ ಕಾರ್ಯಕ್ರಮ ಗಳನ್ನು ಯಶಸ್ವಿಗೊಳಿಸಲಾಗುತ್ತಿದ್ದು ಅರ್ಥ ಪೂರ್ಣವಾದ ಈ ಒಂದು ಕಾರ್ಯಕ್ರಮವನ್ನು ಆಯೋಜನೆ ಮಾಡಿರುವ ಕುರಿತಂತೆ ಜಿಲ್ಲೆಯ ಎಲ್ಲಾ ಗ್ರಾಮಸ್ಥರು ಕೂಡಾ ಪ್ರಶಂಸೆಯನ್ನು ವ್ಯಕ್ತಪಡಿಸುತ್ತಿದ್ದಾರೆ.
ಹೀಗಾಗಿ ಈ ಒಂದು ಕಾರ್ಯಕ್ರಮಗಳು ಜಿಲ್ಲೆಯಲ್ಲಿ ಮುಂದುವರೆದಿದ್ದು ಕಲಘಟಗಿ ತಾಲೂಕಿನ ಮಾಡಕಿಹೊನ್ನಳ್ಳಿ ಗ್ರಾಮ ಪಂಚಾ ಯತದಲ್ಲಿ ಸಂವಿಧಾನ ಜಾಗೃತಿ ಜಾಥವನ್ನು ಸೈಕಲ್ ಜಾಥಾದ ಮೂಲಕ ಮಾಡಲಾಯಿತು. ಪ ಪಂ ಮತ್ತು ಪ ಜಾ ಮುಖಂಡರು ಗ್ರಾಮ ಪಂಚಾ ಯತ್ ದಾಸ್ತಿಕೊಪ್ಪ ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಸರ್ವ ಸದ್ಯಸರು ಮತ್ತು ಗ್ರಾಮಸ್ಥರು ಮತ್ತು ಸಹಾಯಕ ನಿರ್ದೇಶಕರು ಕಲಘಟಗಿ ಇವರು ಸೈಕಲ್ ಜಾಥಾದ ಮೂಲಕ ಚಾಲನೆ ಕೊಟ್ಟರು
ಮತ್ತು ಶಾಲಾ ವಿದ್ಯಾರ್ಥಿಗಳು ಭವ್ಯವಾಗಿ ಸ್ವಾಗತಿಸಿದ್ದು ಕಂಡು ಬಂದಿತು.ಇದರೊಂದಿಗೆ ಕಲಘಟಗಿ ಪಟ್ಟಣದಲ್ಲೂ ಕೂಡಾ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮಗಳು ಕಂಡು ಬಂದವು.ಮುಖ್ಯ ನ್ಯಾಯಧೀಶರು, ಸ ನಿ ಸ ಕ ಇ ಕಲಘಟಗಿ ಯವರು ಉತ್ಸಾಹದಿಂದ ಪಾಲ್ಗೊಂಡು ಪಥ ಸಂಚಲನ ಮಾಡಿದರು.
ಈ ಒಂದು ಕಾರ್ಯಕ್ರಮದಲ್ಲಿ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಕಲಘಟಗಿ…..