ಬೆಂಗಳೂರು –
ಸರ್ಕಾರಿ ನೌಕರರಿಗೆ ನೀತಿ ಸಂಹಿತೆಯ ಚಿಂತೆ – ರಾಜಕಾರಣಿಗಳಿಗೆ ರಾಜಕಾರಣ ಚಿಂತೆ ಯಾರಿಗೂ ಅರ್ಥವಾಗದ 7ನೇ ವೇತನ ಆಯೋಗದ ಜಾರಿಗೆ ಚಿಂತೆ ಹೌದು
ಹೌದು ಸಧ್ಯ ಎಲ್ಲಿ ನೋಡಿದಲ್ಲಿ ಕೇಳಿದಲ್ಲಿ ಲೋಕಸಭಾ ಚುನಾವಣೆಯ ಮಾತುಗಳು ಕೇಳಿ ಬರುತ್ತಿವೆ.ಪ್ರತಿಯೊಬ್ಬರು ಕೂಡಾ ಈ ಬಾರಿ ಮತ್ತೆ ಕೇಂದ್ರದಲ್ಲಿ ಯಾರು ಅಧಿಕಾರಕ್ಕೆ ಬರುತ್ತಾರೆ ಯಾರು ಪ್ರಧಾನಿಯಾಗುತ್ತಾರೆ ಎಂಬ ಚಿಂತೆ ಮಾಡ್ತಾ ಇದ್ದರೆ ಇದರ ನಡುವೆ ರಾಜಕೀಯ ಪಕ್ಷದವರು ಕೂಡಾ ಅಧಿಕಾರ ಗದ್ದುಗೆ ಹಿಡಿ ಯಲು ಏನೇಲ್ಲಾ ಕಸರತ್ತು ಮಾಡುತ್ತಿದ್ದರೆ
ಇತ್ತ ರಾಜ್ಯ ಸರ್ಕಾರಿ ನೌಕರರಿಗೆ ವೇತನ ಪರಿಷ್ಕ್ರ್ರರಣೆ ಕುರಿತಂತೆ ಈಗಾಗಲೇ ರಚನೆ ಮಾಡಿರುವ 7ನೇ ವೇತನ ಆಯೋಗದ ಅವಧಿ ಮುಗಿದರು ಕೂಡಾ ಮತ್ತೆರೆಡು ಬಾರಿ ಅವಧಿ ಯನ್ನು ವಿಸ್ತರಣೆ ಮಾಡಿದ್ರು ಕೂಡಾ ಈವರೆಗೆ ಇದನ್ನು ಜಾರಿಗೆ ತರುವ ಕುರಿತಂತೆ ಯಾರು ಕೂಡಾ ತಲೆಕೆಡಿಸಿಕೊಳ್ಳುತ್ತಿಲ್ಲ
ಹೀಗಾಗಿ ಅತ್ತ ರಾಜಕಾರಣಿಗಳಿಗೆ ರಾಜಕಾರಣದ ಚಿಂತೆಯಾದ್ರೆ ಇತ್ತ ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗ ಯಾವಾಗ ಜಾರಿಗೆ ಬರುತ್ತದೆ ನಮ್ಮ ಕೈಗೆ ಯಾವಾಗ 7ನೇ ವೇತನ ಆಯೋಗದಂತೆ ಸಂಬಳ ಕೈ ಸೇರುತ್ತದೆ ಎಂಬ ಚಿಂತೆ ಕಾಡುತ್ತಿದೆ.ಕರ್ನಾಟಕದ ಸರ್ಕಾರಿ ನೌಕರರು 7ನೇ ರಾಜ್ಯ ವೇತನ ಆಯೋಗದ ವರದಿ ಯಾವಾಗ ಜಾರಿಯಾಗಲಿದೆ ಎಂದು ವರದಿ ಜಾರಿಯಾದಾಗಿನಿಂದ ಈವರೆಗೆ ಕಾಯು ತ್ತಿದ್ದಾರೆ.
ಈ ಹಿಂದೆ ವಿಧಾನ ಸಭಾ ಚುನಾವಣೆ ಮುಂಚೆಯೇ ಇದು ಜಾರಿಗೆ ಬರುತ್ತದೆ ಎಂದುಕೊಳ್ಳಲಾಗಿತ್ತು ಆದರೆ ಆಗಲಿಲ್ಲ ನಂತರ ರಾಜ್ಯದಲ್ಲಿ ಹೊಸದಾಗಿ ಕಾಂಗ್ರೇಸ್ ಪಕ್ಷದ ಸರ್ಕಾರ ರಚನೆಗೊಂಡ ನಂತರ ಮತ್ತೆ ವೇತನ ಆಯೋಗದ ಅವಧಿಯನ್ನು ವಿಸ್ತರಣೆ ಮಾಡಿದ್ದು ಈವರೆಗೆ ಕೂಡಾ ಜಾರಿಗೆ ಬರುತ್ತಿಲ್ಲ ಹೀಗಿರು ವಾಗ ಮತ್ತೊಂದು ಆತಂಕ ರಾಜ್ಯ ಸರ್ಕಾರಿ ನೌಕರರಿಗೆ ಎದುರಾಗಿದ್ದು
ಸಧ್ಯ ಲೋಕಸಭಾ ಚುನಾವಣೆ ಬರಲಿದ್ದು ನಂತರ ತಾಲ್ಲೂಕು ಜಿಲ್ಲಾ ಪಂಚಾಯತ ಸೇರಿದಂತೆ ಸಾಲು ಸಾಲು ಚುನಾವಣೆಗಳು ಎದುರಾಗಲಿದ್ದು ನೌಕರರಿಗೆ ಚುನಾವಣಾ ಮಾದರಿ ನೀತಿ ಸಂಹಿತೆ ಯ ಚಿಂತೆ ಎದುರಾಗಿದೆ.ಹೀಗಾಗಿ ಈಗಾಗಲೇ ಈ ಕುರಿತಂತೆ ಜಾರಿಗೆ ಒತ್ತಾಯಿಸಿ ರಾಜ್ಯದಲ್ಲಿ ಸರ್ಕಾರಿ ನೌಕರರು ಎಲ್ಲಾ ಪಕ್ಷಗಳ ಶಾಸಕರಿಗೆ ಸಚಿವರಿಗೆ ಸೇರಿದಂತೆ ಪ್ರತಿಯೊಬ್ಬರಿಗೂ ಮನವಿ ಯನ್ನು ನೀಡಿದ್ದಾರೆ
ಆದ್ರೂ ಕೂಡಾ ಈ ಒಂದು ಕುರಿತಂತೆ ಮುಖ್ಯಮಂತ್ರಿ ಉಪಮುಖ್ಯಮಂತ್ರಿ ಸೇರಿದಂತೆ ಯಾರೂ ಕೂಡಾ ತಲೆಕೆಡಿಸಿಕೊಳ್ಳುತ್ಲಿಲ್ಲ ಹೀಗಾಗಿ ರಾಜ್ಯ ಸರ್ಕಾರಿ ನೌಕರರಿಗೆ ಆತಂಕ ಮನೆ ಮಾಡಿದ್ದು ಏನೇನಾಗಲಿದೆ ಎಂಬೊದನ್ನು ಕಾದು ನೋಡಬೇಕಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..