ಬೆಂಗಳೂರು –
ಶಿಕ್ಷಕರ ವರ್ಗಾವಣೆ ಕುರಿತು ಇಲಾಖೆಯ ನಿರ್ದೇಶಕ ರನ್ನು ಭೇಟಿಯಾದ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ – ರಾಜ್ಯಾಧ್ಯಕ್ಷ ಸಿದ್ದಬಸಪ್ಪ ನೇತೃತ್ವದಲ್ಲಿ ನಿಯೋಗ ಭೇಟಿಯಾಗಿ ಒತ್ತಾಯಿಸಿದ್ದೇನು ಗೊತ್ತಾ ಹೌದು ರಾಜ್ಯದಲ್ಲಿ ಸಧ್ಯ ತಾಂತ್ರಿಕ ಕಾರಣಗಳಿಂದಾಗಿ ಶಿಕ್ಷಕರ ವರ್ಗಾವಣೆ ಸಂಪೂರ್ಣವಾಗಿ ನಿಂತುಕೊಂಡಿದೆ ಹೀಗಾಗಿ ಈ ಒಂದು ವರ್ಗಾವಣೆ ಯನ್ನು ಆರಂಭ ಮಾಡುವಂತೆ ಒತ್ತಡ ಕೇಳಿ ಬರುತ್ತಿದೆ
ಈ ಕೂಡಲೇ ಶಿಕ್ಷಕರ ವರ್ಗಾವಣೆ ಆರಂಭ ಮಾಡುವಂತೆ ಒತ್ತಾಯ ಮಾಡಿ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಇಲಾಖೆಯ ನಿರ್ದೇಶಕ ರನ್ನು ಭೇಟಿಯಾದರು ರಾಜ್ಯಾಧ್ಯಕ್ಷ ಸಿದ್ದಬಸಪ್ಪ ನೇತೃತ್ವದಲ್ಲಿ ನ ನಿಯೋಗ ವು ಬೆಂಗಳೂರಿನಲ್ಲಿ ಭೇಟಿ ಯಾಗಿ ಚರ್ಚೆಯನ್ನು ಮಾಡಿದರು
ಪ್ರೌಢ ಶಿಕ್ಷಣ ನಿರ್ದೇಶಕರಾದ ಕರಿಚನ್ನಣ್ಣವರ ರವರ ಅಧ್ಯಕ್ಷತೆಯಲ್ಲಿ ಶಿಕ್ಷಕರ ವರ್ಗಾವಣೆಗೆ ಸಂಬಂಧಿಸಿದಂತೆ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳ ಸಭೆ ಆಯೋಜಿ ಸಲಾಯಿತು. ಸದರಿ ಸಭೆಯಲ್ಲಿ ಚರ್ಚಿಸಿ ಈ ಒಂದು ಕೂಡಲೇ ವರ್ಗಾವಣೆ ಯನ್ನು ಆರಂಭ ಮಾಡುವಂತೆ ಮನವಿಯನ್ನು ಅರ್ಪಿಸಲಾಯಿತು
ಸಿದ್ದಬಸಪ್ಪ ಬಿ ರಾಜ್ಯಾಧ್ಯಕ್ಷರು ರಾಮು ಅ ಗುಗವಾಡ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..