ಧಾರವಾಡ –
2A ಸಾಕು ST ಬೇಕು ಧಾರವಾಡದಲ್ಲಿ ವಿಶ್ವಕರ್ಮ ಸಮಾಜದಿಂದ ಪ್ರತಿಭಟನೆ – ಸಮಾಜದ ಅಭಿವೃದ್ದಿಗಾಗಿ ಬರುವ ಬಜೆಟ್ ನಲ್ಲಿ 100 ಕೋಟಿ ರೂಪಾಯಿ ಮೀಸಲಿಡಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಗೆ ಮನವಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಶಕ್ತಿ ಪ್ರದರ್ಶನ ಹೌದು
ವಿಶ್ವಕರ್ಮ ಸಮಾಜಕ್ಕೆ ಎಸ್‌ಟಿ ಮೀಸಲಾತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಧಾರವಾಡದಲ್ಲಿ ವಿಶ್ವಕರ್ಮ ಸಮಾಜ ದಿಂದ ಬೃಹತ್ ಪ್ರಮಾಣದಲ್ಲಿ ಪ್ರತಿಭಟನೆಯನ್ನು ಮಾಡಲಾಯಿತು.ನಗರದ ಕಲಾಭವನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಪ್ರಮಾಣದ ಪ್ರತಿಭಟನಾ ಜಾಥಾದ ಮೂಲಕ ಆಗಮಿಸಿದ ವಿಶ್ವಕರ್ಮ ಸಮಾಜದವರು ಬೇಡಿಕೆಗಳಿಗಾಗಿ ಹೋರಾಟವನ್ನು ಮಾಡಿದರು.
ಇದರೊಂದಿಗೆ ಧಾರವಾಡದಲ್ಲಿ ವಿಶ್ವಕರ್ಮ ಸಮಾಜದ ವತಿಯಿಂದ ಪ್ರತಿಭಟನೆ ನಡೆಯಿತು ವಿಶ್ವಕರ್ಮ ಸಮಾಜಕ್ಕೆ ಮೀಸಲಾತಿ ಸಮಾಜದ ಅಭಿವೃದ್ದಿಗಾಗಿ ಬರುವ ಬಜೆಟ್ ನಲ್ಲಿ 100 ಕೋಟಿ ರೂಪಾಯಿ ಸೇರಿದಂತೆ ಪ್ರಮುಖ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಈ ಒಂದು ಪ್ರತಿಭಟನೆಯನ್ನು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಮಾಡಲಾಯಿತು.
ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ನೇತೃತ್ವದಲ್ಲಿ ಈ ಒಂದು ಪ್ರತಿಭಟನೆ ನಡೆಯಿತು ವಿಶ್ವಕರ್ಮ ಸಮಾಜದ ಸಾಕಷ್ಟು ಹಿಂದುಳಿದ ಸಮಾಜದವರಿದ್ದು ಈ ಹಿನ್ನೆಲೆಯಲ್ಲಿ ಎಸ್‌ಟಿ ಮೀಸಲಾತಿಗೆ ಸೇರಿಸಬೇಕು ಕುಲಶಾಸ್ತ್ರ ಅಧ್ಯಯನ ವರದಿ ಶೀಘ್ರ ಕೇಂದ್ರಕ್ಕೆ ಸಲ್ಲಿಸಬೇಕು
ಅಲ್ಲದೇ ಪ್ರಸಕ್ತ ಬಜೆಟ್ ನಲ್ಲಿ ವಿಶ್ವಕರ್ಮ ನಿಗಮಕ್ಕೆ 100 ಕೋಟಿ ರೂ. ಮೀಸಲಿಡುವಂತೆ ಆಗ್ರಹವನ್ನು ಮಾಡಲಾಯಿತು.ಜಿಲ್ಲಾಧಿಕಾರಿ ಮೂಲಕ ಸಿಎಂಗೆ ಮನವಿ ಪತ್ರವನ್ನು ರವಾನೆ ಮಾಡಲಾಯಿತು.ಈ ಒಂದು ಪ್ರತಿಭಟನೆಯಲ್ಲಿ ವಿಶ್ವಕರ್ಮ ಸಮಾಜದ ಹಿರಿಯರು ಮಹಿಳೆ ಯರು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಧಾರವಾಡ…..