ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವರ ಕಚೇರಿ ಮುಂದೆ ಬಿಜೆಪಿ ಕಾಂಗ್ರೇಸ್ ಜಟಾಪಟಿ – ಕೇಂದ್ರ ಸರ್ಕಾರದ ವಿರುದ್ದ NSUI ಪ್ರತಿಭಟನೆ BJP ಟೀಮ್ ನಿಂದ ಮೋದಿ ಮೋದಿ ಜಯಘೋಷ ಹೌದು ರಾಜ್ಯಕ್ಕೆ ಅನುದಾನ ತಾರತಮ್ಯ ನೀಡುವ ವಿಚಾರ ಕುರಿತಂತೆ ಹುಬ್ಬಳ್ಳಿಯಲ್ಲಿ NSUI ಕಾಂಗ್ರೇಸ್ ಘಟಕದಿಂದ ಪ್ರತಿಭಟನೆಯನ್ನು ಮಾಡಲಾಯಿತು.
ಹೌದು ರಾಜ್ಯಕ್ಕೆ ಸೂಕ್ತವಾದ ಅನುದಾನ ನೀಡುವಂತೆ ಆಗ್ರಹಿಸಿ ನಗರದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರ ಕಚೇರಿ ಮುಂದೆ ಎನ್.ಎಸ್.ಯು.ಐಯಿಂದ ಪ್ರತಿಭಟನೆಯನ್ನು ಮಾಡಲಾಯಿತು.
ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಚೇರಿ ಎದುರು ಈ ಒಂದು ಪ್ರತಿಭಟನೆ ನಡೆಯಿತು ಪ್ರತಿಭಟನೆ ವೇಳೆ ಹೈಡ್ರಾಮಾ ಕೂಡಾ ನಡೆದಿದ್ದು ಕಂಡು ಬಂದಿತು.ಜೋಶಿ ಕಚೇರಿ ಎದುರು ಮೋದಿ ವಿರುದ್ಧ ಘೋಷಣೆಗಳನ್ನು ಕೂಗಿದ NSUI ಸಂಘಟನೆಯ ಕಾರ್ಯಕರ್ತರು ಮುಖಂಡರು ಆಕ್ರೋಶವನ್ನು ವ್ಯಕ್ತಪಡಿಸಿದ್ದು ಕಂಡು ಬಂದಿತು.
ಇನ್ನೋಂದು ಕಡೆ ಬಿಜೆಪಿ ಕಾರ್ಯಕರ್ತರಿಂದಲೂ ಮೋದಿ ಮೋದಿ ಜಯಘೋಷ ಗಳು ಕಂಡು ಬಂದಿತು.ಎನ್.ಎಸ್.ಯು.ಐ ಒಂದೇ ಭಾರತಂ ಎಂದು ಘೋಷಣೆಗಳನ್ನು ಕೂಗಿ ವಿಶೇಷವಾಗಿ ಪ್ರತಿಭಟನೆಯನ್ನು ಮಾಡಲಾಯಿತು.ಇತ್ತ ಬಿಜೆಪಿ ಕಾರ್ಯಕರಿಂದ ಜೈ ಶ್ರೀರಾಮ ಜೈ ಜೈ ಶ್ರೀರಾಮ ಎಂದು ಘೋಷಣೆಗಳನ್ನು ಕೂಗಲಾಯಿತು.
ಎನ್.ಎಸ್.ಯು.ಐ ನಿಂದ ಮೋದಿ ವಿರುದ್ಧ ದಿಕ್ಕಾರ್ ದ ಘೋಷಣೆಗಳು ಕೇಳಿ ಬಂದವು. ಬಿಜೆಪಿ ಕಾರ್ಯಕರ್ತರಿಂದ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ ಅವರಿಗೆ ಧಿಕ್ಕಾರದ ಘೋಷಣೆಗಳು ಕೇಳಿ ಬಂದವು ಇದೇ ವೇಳೆ ಸಚಿವರ ಕಚೇರಿಗೆ ಮುತ್ತಿಗೆ ಹಾಕಲು ಯತ್ನವನ್ನು ಮಾಡಲಾಯಿತು
ಪೊಲೀಸರು ಪರಸ್ಥಿತಿಯನ್ನು ತಿಳಿಗೊಳಿಸಿ ಶಾಂತಗೊಳಿಸಿದರು.ಎರಡೂ ಕಡೆ ಪ್ರತಿಭಟನಾ ಕಾರರನ್ನು ನಿಯಂತ್ರಿಸಲು ಪೊಲೀಸರ ಹರಸಾಹಸವನ್ನು ಮಾಡಿದ್ದು ಕಂಡು ಬಂದಿತು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..