ಬೆಂಗಳೂರು –
ಬಜೆಟ್ ನಲ್ಲಿ ಘೋಷಣೆಯಾಗುತ್ತಾ 7ನೇ ವೇತನ ಆಯೋಗ ವರದಿ – ಫೆಬ್ರುವರಿ 12 ರಿಂದ ಆರಂಭ ವಾಗಲಿದೆ ಅಧಿವೇಶನ ಎಲ್ಲರ ಚಿತ್ತ ಅಧಿವೇಶನ ದತ್ತ ಹೌದು
ಫೆಬ್ರುವರಿ 12 ರಿಂದ ಬಜೆಟ್ ಅಧಿವೇಶನ ನಡೆಯಲಿದ್ದು 16 ರಂದು ರಾಜ್ಯ ಬಜೆಟ್ ಮಂಡನೆಯಾಗಲಿದೆ.ಹೌದು ಈ ಒಂದು ಮಾಹಿತಿಯನ್ನು ವಿಧಾನಸಭೆಯ ಸಭಾಪತಿ ಯು ಟಿ ಖಾದರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತಾನಾಡಿದ ಅವರು ಫೆ.12 ರಿಂದ ಬಜೆಟ್ ಅಧಿವೇಶನ ಆರಂಭವಾಗಲಿದ್ದ ಫೆ.16 ರಂದು ಆಯವ್ಯಯ ಮಂಡನೆಯಾಗಲಿದೆ ಎಂದರು.ಫೆಬ್ರವರಿ 12 ರಂದು ಬಜೆಟ್ ಅಧಿವೇ ಶನ ಪ್ರಾರಂಭವಾಗಲಿದ್ದು ಅಂದು ರಾಜ್ಯಪಾಲರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡ ಲಿದ್ದಾರೆ.
ಕಲಾಪಕ್ಕೆ ಯಾವುದೇ ಶಾಸಕರು ಗೈರಾಗಬಾರದು ಎಂದು ತಿಳಿಸಿದರು.12 ರಂದು ರಾಜ್ಯಪಾಲರು ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದು ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ನಡೆದು ತದನಂತರ ನಿರ್ಣಯ ವನ್ನು ಅಂಗೀಕಾರವಾಗಲಿದೆ
ರಾಜ್ಯಪಾಲರ ಭಾಷಣದ ನಂತರ 16ನೇ ವಿಧಾನಸಭೆಯ 02ನೇ ಅಧಿವೇಶನ ಮುಕ್ತಾ ಯವಾದ ನಂತರ ಇಲ್ಲಿಯವರೆಗೆ ನಿಧನ ಹೊಂದಿದ ಗಣ್ಯ ವ್ಯಕ್ತಿಗಳ ಕುರಿತು ಸಂತಾಪ ಸೂಚನಾ ನಿರ್ಣಯಗಳನ್ನು ಮಂಡಿಸಲಾಗು ವುದು ಎಂದರು.
ಈ ಅಧಿವೇಶನದಲ್ಲಿ ಸರಕಾರದಿಂದ ಸ್ವೀಕರಿಸಲಾ ಗುವ ವಿಧೇಯಕಗಳನ್ನು ಪರ್ಯಾಲೋಚನೆಗೆ ಹಾಗೂ ಅಂಗೀಕಾರಕ್ಕೆ ತೆಗೆದುಕೊಳ್ಳಲಾಗುವುದು 10 ದಿನಗಳ ಕಾಲ ನಡೆಯುವ ಈ ಅಧಿವೇಶ ನದಲ್ಲಿ 8 ದಿನಗಳ ಕಾಲ ಪ್ರಶ್ನೋತ್ತರ ಕಲಾಪಗ ಳನ್ನ ನಿಗದಿಪಡಿಸಲಾಗಿದೆ.ಇದರ ಜೊತೆಗೆ ಗಮನಸೆಳೆಯುವ ಸೂಚನೆಗಳು,
ಶೂನ್ಯವೇಳೆ, ನಿಲುವಳಿ ಸೂಚನೆ, ನಿಯಮ 69ರ ಸೂಚನೆಗಳು, ಖಾಸಗಿ ಸದಸ್ಯರುಗಳ ಕಾರ್ಯ ಕಲಾಪಗಳನ್ನು ನಡೆಸಲಾಗುವುದು ಎಂದರು. ಇನ್ನೂ ಪ್ರಮುಖವಾಗಿ ಈ ಒಂದು ಬಜೆಟ್ ನಲ್ಲಾದರೂ ರಾಜ್ಯ ಸರ್ಕಾರಿ ನೌಕರರು ಕಾಯು ತ್ತಿರುವ 7ನೇ ವೇತನ ಆಯೋಗ ವರದಿ ಜಾರಿ ಯಾಗುತ್ತಾ
ಬಜೆಟ್ ನಲ್ಲಿ ಮುಖ್ಯಮಂತ್ರಿ ಘೋಷಣೆ ಮಾಡ್ತಾರೆ ಎಂಬ ದೊಡ್ಡ ನಿರೀಕ್ಷೆಯಲ್ಲಿ ರಾಜ್ಯದ ಸಮಸ್ತ ಸರ್ಕಾರಿ ನೌಕರರು ಇದ್ದಾರೆ ಹೀಗಾಗಿ ಫೆಬ್ರುವರಿ 27 ರಂದು ಬೆಂಗಳೂರಿನಲ್ಲಿ ರಾಜ್ಯ ಸರ್ಕಾರಿ ರಾಜ್ಯ ಮಟ್ಟದ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದ್ದು
ಮುಖ್ಯಮಂತ್ರಿ ಬಜೆಟ್ ನಲ್ಲಿ ಘೋಷಣೆ ಮಾಡದಿದ್ದರೆ ಬರುವ ಸಮಾವೇಶದಲ್ಲಿ ನೌಕರರು ದೊಡ್ಡದಾದ ತೀರ್ಮಾನವನ್ನು ಕೈಗೊಳ್ಳಲಿದ್ದು ಇದರ ನಡುವೆ ಬಜೆಟ್ ನಲ್ಲಿ ಏನೇನು ಸಿಗಲಿದೆ ಎಂಬೊದನ್ನು ಕಾದು ನೋಡಬೇಕಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..