ಧಾರವಾಡ –
ಫೆಬ್ರುವರಿ 18 ರಂದು ಹುಬ್ಬಳ್ಳಿಯಲ್ಲಿ ಶ್ವಾನ ಪ್ರದರ್ಶನ – ಪಶುಪಾಲನಾ ಮತ್ತು ಪಶುವೈದ್ಯ ಕೀಯ ಸೇವಾ ಇಲಾಖೆಯಿಂದ ಪ್ರದರ್ಶನ ಆಯೋಜನೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊ ಳ್ಳುವಂತೆ ಉಪನಿರ್ದೇಶಕ ಡಾ ರವಿ ಸಾಲಿಗೌಡರ ಕರೆ
ಪಶುಪಾಲನಾ ಮತ್ತು ಪಶುವೈಧ್ಯಕೀಯ ಸೇವಾ ಇಲಾಖೆಯಿಂದ ಫೆಬ್ರುವರಿ 18 ರಂದು ಹುಬ್ಬಳ್ಳಿ ಯಲ್ಲಿ ಜಿಲ್ಲಾ ಮಟ್ಟದ ಶ್ವಾನ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಇಲಾಖೆಯ ಉಪ ನಿರ್ದೇಶಕ ಡಾ ರವಿ ಸಾಲಿಗೌಡರ ತಿಳಿಸಿದ್ದಾರೆ.
ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ,ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್ ಹಾಗೂ ಕರ್ನಾಟಕ ಪಶುವೈದ್ಯಕೀಯ ಸಂಘ ಜಿಲ್ಲಾ ಘಟಕ ಧಾರವಾಡ ಇವರ ಸಂಯುಕ್ತ ಆಶ್ರಯದಲ್ಲಿ.2023-24 ನೇ ಸಾಲಿನ ಪ್ರಾಣಿ ಕಲ್ಯಾಣ ಅರಿವು ಮೂಡಿಸುವ ಶಿಬಿರ ಹಾಗೂ ಜಿಲ್ಲಾ ಮಟ್ಟದ ಶ್ವಾನ ಪ್ರದರ್ಶನ ಕಾರ್ಯಕ್ರಮ ವನ್ನು ಫೆಬ್ರವರಿ 18, 2024 ರಂದು ಬೆಳಗ್ಗೆ 9
ಗಂಟೆಗೆ ಹುಬ್ಬಳ್ಳಿಯ ಇಂದಿರಾ ಗಾಜಿನ ಮನೆ ಆವರಣದಲ್ಲಿ ಆಯೋಜಿಸಲಾಗಿದೆ ಎಂದರು. ಶ್ವಾನ ಪ್ರದರ್ಶನಕ್ಕೆ ಶ್ವಾನ ಪ್ರಿಯರು, ಸಾರ್ವಜ ನಿಕರು ಭಾಗವಹಿಸಬಹುದು.ಹೆಚ್ಚಿನ ಮಾಹಿತಿ ಗಾಗಿ: ಹುಬ್ಬಳ್ಳಿ- 9448692656, 8147009699 ಧಾರವಾಡ- 8722891640, 9900470554 ಸಂಪರ್ಕಿಸಲು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ. ರವಿ ಸಾಲಿಗೌಡರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಧಾರವಾಡ…..