ಧಾರವಾಡ –
ಧಾರವಾಡ ಜಿಲ್ಲೆಯಲ್ಲಿ ಅರ್ಥಪೂರ್ಣವಾಗಿ ನಡೆಯುತ್ತಿವೆ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮಗಳು – ಹುಬ್ಬಳ್ಳಿ ಕುಂದಗೋಳ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಹಲವಾರು ಕಾರ್ಯಕ್ರಮಗಳ ಮೂಲಕ ಸಂವಿಧಾನ ಕುರಿತಂತೆ ಜಾಗೃತಿ
ಸಂವಿಧಾನ ಜಾಗೃತಿ ಕಾರ್ಯಕ್ರಮಗಳು ಧಾರವಾಡ ಜಿಲ್ಲೆಯಲ್ಲಿ ಮುಂದುವರೆದಿವೆ.ಹೌದು ರಾಜ್ಯ ಸರ್ಕಾರದ ಸೂಚನೆಯಂತೆ ಧಾರವಾಡ ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿನಿಂದ ಈ ಒಂದು ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ. ಪ್ರಮುಖವಾಗಿ ಸಂವಿಧಾನ ದಿನಾಚರಣೆ ಪ್ರಯುಕ್ತವಾದ ರಾಜ್ಯದಲ್ಲಿ ಸಂವಿಧಾನ ಜಾಗೃತಿ ಕಾರ್ಯಕ್ರಮ ನಡೆಯುತ್ತಿವೆ.
ರಾಜ್ಯ ಸರ್ಕಾರ ಸೂಚನೆ ನೀಡುತ್ತಿದ್ದಂತೆ ರಾಜ್ಯದಲ್ಲಿ ಸಂವಿಧಾನ ದಿನಾಚರಣೆಯ ಪ್ರಯುಕ್ತವಾಗಿ ಸಂವಿಧಾನ ಕುರಿತಂತೆ ಅರ್ಥಪೂರ್ಣವಾದ ಕಾರ್ಯಕ್ರಮಗಳು ಕೂಡಾ ಜಿಲ್ಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ನಡೆಯುತ್ತಿವೆ.ಸಮಾಜ ಕಲ್ಯಾಣ ಇಲಾಖೆಯಿಂದ ಈ ಒಂದು ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ
ಈಗಾಗಲೇ ಜಿಲ್ಲೆಯ ತುಂಬೆಲ್ಲಾ ಅರ್ಥಪೂರ್ಣ ವಾದ ಬೇರೆ ಬೇರೆ ಕಾರ್ಯಕ್ರಮಗಳ ಮೂಲಕ ಮಾಡಲಾಗುತ್ತಿದ್ದು ರಾಜ್ಯ ಸರ್ಕಾರದ ಸೂಚನೆ ಯಂತೆ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ .ಧಾರವಾಡ ಜಿಲ್ಲಾ ಆಡಳಿತ,ಜಿಲ್ಲಾ ಪಂಚಾಯತ್ ,ಸಮಾಜ ಕಲ್ಯಾಣ ಇಲಾಖೆಯಿಂದ ಈಗಾಗಲೇ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಸಂವಿಧಾನ ಜಾಗೃತಿಯ ಕಾರ್ಯಕ್ರಮಗಳನ್ನು ಆಯೋಜಿ ಸಲಾಗಿತ್ತು.
ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಅಲ್ಲಾಬಕಾಷ್ ಎಮ್ ಎಸ್ ಇವರ ಮಾರ್ಗದರ್ಶನದಲ್ಲಿ ಜಿಲ್ಲೆಯಲ್ಲಿ ಕಾರ್ಯ ಕ್ರಮಗಳು ನಿರಂತರವಾಗಿ ನಡೆಯುತ್ತಿವೆ.ಆಯಾ ತಾಲ್ಲೂಕಿನ ಇಲಾಖೆಯ ಸಹಾಯಕ ನಿರ್ದೇಶ. ಕರು ಈ ಒಂದು ಕಾರ್ಯಕ್ರಮಗಳನ್ನು ಮಾಡುತ್ತಿ ದ್ದಾರೆ.ಪ್ರಮುಖವಾಗಿ ಮೆರವಣಿಗೆ ಮೂಲಕ ಎಲ್ಲಾ ಬೀದಿ ಬೀದಿಗಳಲ್ಲಿ ಎಲ್ಲಾ ಗ್ರಾಮಗಳಲ್ಲಿ ಸಂವಿಧಾನ ಪ್ರಸ್ತಾವನೆ ವಾಚಿಸುವ ಮೂಲಕ ಅರಿವು ಮೂಡಿಸಲಾಗುತ್ತಿದೆ.
ಅಲ್ಲದೇ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗ ಳೊಂದಿಗೆ ಸಂವಿಧಾನ ಕುರಿತಂತೆ ಜಾಗೃತಿಯನ್ನು ಕೂಡಾ ಮೂಡಿಸಲಾಗುತ್ತಿದ್ದು ಇದರೊಂದಿಗೆ ಸಂವಿಧಾನ ಕುರಿತಂತೆ ಜಾಗೃತಿ ಕಾರ್ಯಕ್ರಮ ಗಳನ್ನು ಯಶಸ್ವಿಗೊಳಿಸಲಾಗುತ್ತಿದ್ದು ಅರ್ಥ ಪೂರ್ಣವಾದ ಈ ಒಂದು ಕಾರ್ಯಕ್ರಮವನ್ನು ಆಯೋಜನೆ ಮಾಡಿರುವ ಕುರಿತಂತೆ ಜಿಲ್ಲೆಯ ಎಲ್ಲಾ ಗ್ರಾಮಸ್ಥರು ಕೂಡಾ ಪ್ರಶಂಸೆಯನ್ನು ವ್ಯಕ್ತಪಡಿಸುತ್ತಿದ್ದಾರೆ.
ಹೀಗಾಗಿ ಈ ಒಂದು ಕಾರ್ಯಕ್ರಮಗಳು ಜಿಲ್ಲೆ ಯಲ್ಲಿ ಮುಂದುವರೆದಿದ್ದು ಹುಬ್ಬಳ್ಳಿ ಮತ್ತು ಕುಂದಗೋಳ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಸಂವಿಧಾನ ಕುರಿತಂತೆ ಜಾಗೃತಿಯನ್ನು ಮೂಡಿ ಸಲಾಗುತ್ತಿದೆ.ಪಂಚಾಯತದಲ್ಲಿ ಸಂವಿಧಾನ ಜಾಗೃತಿ ಜಾಥವನ್ನು ಸೈಕಲ್ ಜಾಥಾದ ಮೂಲಕ ಮಾಡಲಾಗುತ್ತಿದೆ.ಶರೇವಾಡ ಗ್ರಾಮ ಪಂಚಾ ಯತಿಯಲ್ಲಿ ಸಂವಿಧಾನ ದಿನಾಚಾರಣೆ ಅಂಗ ವಾಗಿ ಗ್ರಾಮದಲ್ಲಿ “ಸಂವಿಧಾನ ಜಾಗೃತಿ ಜಾಥಾ ” ಕೈಗೊಂಡು ಮಕ್ಕಳಿಂದ ಲೇಝೀಮ್ ಕುಣಿತ, ಕೋಲಾಟ ಹಾಗೂ ಕಲಾವಿದರಿಂದ ಝಾಂಜ , ಬೈಕ್ ರ್ಯಾಲಿ, ಟ್ರ್ಯಾಕ್ಟರ್ ರ್ಯಾಲಿ ಮತ್ತು ಕುಂಭಮೇಳದೊಂದಿಗೆ ಆತ್ಮೀಯವಾಗಿ ಸ್ವಾಗತಿಸಿ,
ಸಂವಿಧಾನದ ಪ್ರಸ್ತಾವನೆಯನ್ನು ಪ್ರಮಾಣ ವಚನದ ರೀತಿಯಲ್ಲಿ ಬೋಧಿಸುವುದರ ಮೂಲಕ ಮತ್ತು ವಿವಿಧ ಸ್ಪರ್ಧೆಗಳಲ್ಲಿ ವಿಜೇತ ರಾದಂತಹ ಮಕ್ಕಳಿಗೆ ಬಹುಮಾನವನ್ನು ವಿತರಣೆ ಮಾಡುವುದರ ಮೂಲಕ ಹಾಗೂ ವಿವಿಧ ಕ್ಷೇತ್ರಗ ಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಸನ್ಮಾನ ಮಾಡು ವುದರ ಮೂಲಕ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಲಾಯಿತು.ಇನ್ನೂ ಇತ್ತ ಬು.ಅರಳೀಕಟ್ಟಿ ಯಲ್ಲಿ ಸಂವಿಧಾನ ಜಾಗೃತಿ ಜಾಥಾ ನಿಮಿತ್ತ ಟ್ರ್ಯಾಕ್ಟರ್, ಬೈಕ್ ರ್ಯಾಲಿ, ಸೈಕಲ್ ರ್ಯಾಲಿ ,
ಶಾಲಾ ವಿದ್ಯಾರ್ಥಿಗಳ ರ್ಯಾಲಿ ಮಾಡಲಾ ಯಿತ ಅಗಡಿ ಗ್ರಾಮದಲ್ಲೂ ಕೂಡಾ ಸಂವಿಧಾನ ಜಾಗೃತಿ ಜಾಥಾ ಬೈಕ್ ರ್ಯಾಲಿಯನ್ನು ಅದ್ದೂರಿ ಯಾಗಿ ಮೆರವಣಿಗೆ ಮಾಡಲಾಯಿತು.ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಪ ಪಂ ಮತ್ತು ಪ ಜಾ ಮುಖಂಡರು ಗ್ರಾಮ ಪಂಚಾಯತ್ ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಸರ್ವ ಸದ್ಯಸರು ಮತ್ತು ಗ್ರಾಮಸ್ಥರು ಮತ್ತು ಸಹಾಯಕ ನಿರ್ದೇಶ ಕರು ಹುಬ್ಬಳ್ಳಿ ಮತ್ತು ಕುಂದಗೋಳ ಇವರೊಂ ದಿಗೆ ಗ್ರಾಮಸ್ಥರು ಕೂಡಾ ಉತ್ಸಾಹದಿಂದ ಪಾಲ್ಗೊಂಡು ಪಥ ಸಂಚಲನ ಮಾಡಿದರು.
ಈ ಒಂದು ಕಾರ್ಯಕ್ರಮದಲ್ಲಿ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಧಾರವಾಡ…..