ಹುಬ್ಬಳ್ಳಿ –
ಅಕ್ರಮ ಜಿಲೆಟಿನ್ ಸ್ಫೋಟಕವನ್ನು ಸಾಗಣೆ ಮಾಡುತ್ತಿದ್ದ ಓರ್ವ ಆರೋಪಿಯನ್ನು ಬಂಧಿಸಲಾಗಿದೆ.ಧಾರವಾಡದ ಆಂತರಿಕ ಭದ್ರತಾ ವಿಭಾಗದ ಹುಬ್ಬಳ್ಳಿ-ಧಾರವಾಡ ಘಟಕದ ಅಧಿಕಾರಿಗಳು ಕಾರ್ಯಾಚರಣೆ ಮಾಡಿ ಒರ್ವ ಆರೋಪಿಯನ್ನು ಬಂಧಿಸಿದ್ದಾರೆ.

ಹುಬ್ಬಳ್ಳಿಯ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಚವರಗುಡ್ಡದಲ್ಲಿ ಈ ಒಂದು ಆರೋಪಿಯನ್ನು ಬಂಧಿಸಲಾಗಿದೆ .ಬಾಲಾಜಿ ಸ್ಟೋನ್ ಮತ್ತು ಕ್ರಷರ್ ಕ್ವಾರಿಗೆ ಬಳಸಲು ಒಯ್ಯುತ್ತಿದ್ದ ಜಿಲೆಟಿನ್ ಕಡ್ಡಿಗಳು.ಅಣ್ಣಿಗೇರಿ ತಾಲೂಕ ಹಳ್ಳಿಕೇರಿಯ ಹನುಮಂತಗೌಡ ವೀರನಗೌಡ ಪಾಟೀಲ ರನ್ನು ಬಂಧಿಸಲಾಗಿದೆ.41 ಜಿಲೆಟಿನ್ ಕಡ್ಡಿಗಳು, 23 ಇಲೆಕ್ಟ್ರಾನಿಕ್ ಡಿವೈಸ್ ಹಾಗೂ ಬೈಕ್ ನ್ನು ವಶಕ್ಕೆ ಪಡೆದು ತನಿಖೆ ಮಾಡತಾ ಇದ್ದಾರೆ ಪೊಲೀಸರು.