ಬೆಂಗಳೂರು –
ಸರ್ಕಾರಿ ನೌಕರರ ಮಹಾ ಸಮ್ಮೇಳನಕ್ಕೆ CM ಗೆ ಆಮಂತ್ರಣ ನೀಡಿದ ಸಂಘಟನೆ – ರಾಜ್ಯಾಧ್ಯಕ್ಷ ಷಡಾಕ್ಷರಿ ಅವರ ನೇತ್ರತ್ವದಲ್ಲಿನ ನಿಯೋಗದಿಂದ ನಾಡದೊರೆ ಗೆ ಆಮಂತ್ರಣ ಹೌದು
ಫೆಬ್ರುವರಿ 27 ರಂದು ಬೆಂಗಳೂರಿನಲ್ಲಿ ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಸರ್ಕಾರಿ ನೌಕರರ ಮಹಾ ಸಮ್ಮೇಳನ ಕಾರ್ಯಕ್ರಮ ನಡೆಯಲಿದೆ.ಹೌದು ಬೆಂಗಳೂರಿನ ಅರಮನೆ ಯಲ್ಲಿ ಈ ಒಂದು ಸಮಾರಂಭ ನಡೆಯಲಿದ್ದು ಮುಖ್ಯಮಂತ್ರಿ ಉಪ ಮುಖ್ಯಮಂತ್ರಿ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಇನ್ನೂ ಈ ಒಂದು ಐತಿಹಾಸಿಕ ಸಮಾರಂಭಕ್ಕೆ ರಾಜ್ಯ ಸರ್ಕಾರಿ ನೌಕರರ ಸಂಘಟನೆಯಿಂದ ಅಧಿಕೃತವಾಗಿ ಮುಖ್ಯಮಂತ್ರಿಯವರಿಗೆ ಆಮಂತ್ರಣ ನೀಡಲಾಯಿತು.ರಾಜ್ಯ ಸರ್ಕಾರಿ ನೌಕರರ ರಾಜ್ಯಾಧ್ಯಕ್ಷ ಷಡಾಕ್ಷರಿ ಅವರ ನೇತ್ರತ್ವ ದಲ್ಲಿನ ನಿಯೋಗವು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಆಮಂತ್ರಣ ಪತ್ರಿಕೆಯನ್ನು ನೀಡಿ ಆಹ್ವಾನವನ್ನು ನೀಡಲಾಯಿತು.
ವಿಧಾನಸೌಧ ದಲ್ಲಿ ಭೇಟಿಯಾದ ಸಂಘಟನೆಯ ನಾಯಕರು ಸಿಎಮ್ ಗೆ ಅಧಿಕೃತವಾಗಿ ಕಾರ್ಯ ಕ್ರಮಕ್ಕೆ ಆಮಂತ್ರಿಸಿದರು.ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ.ಎಸ್.ಷಡಾಕ್ಷರಿ ರವರ ನೇತ್ರತ್ವದಲ್ಲಿನ ನಿಯೋಗವು ಇದೇ ತಿಂಗಳು 27ನೇ ತಾರೀಖು ಅರಮನೆ ಮೈದಾನದಲ್ಲಿ ನಡೆಯಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಮಹಾ ಸಮ್ಮೇಳನಕ್ಕೆ ಮುಖ್ಯಮಂತ್ರಿಗಳಾದ ಸಿದ್ದರಾ ಮಯ್ಯ ರವರನ್ನು ಆಹ್ವಾನಿಸಿದರು,
ಮುಖ್ಯಮಂತ್ರಿಗಳು ಕೂಡಾ ಬರಲು ಒಪ್ಪಿ ಕೊಂಡು ಸಕಾರಾತ್ಮಕವಾಗಿ ಸ್ಪಂದಿಸಿ ಒಪ್ಪಿಗೆ ಸೂಚಿಸಿದರು.ಇದೇ ಸಂದರ್ಭದಲ್ಲಿ ರಾಜ್ಯಾ ಧ್ಯಕ್ಷರಾದ ಷಡಾಕ್ಷರಿಯವರೊಂದಿಗೆ ರಾಜ್ಯ ಖಜಾಂಚಿಗಳಾದ ಸಿದ್ದರಾಮಣ್ಣ ,ಕಾರ್ಯಾ ದ್ಯಕ್ಷರಾದ ಮಲ್ಲಿಕಾರ್ಜುನ ಬಳ್ಳಾರಿ , ಹಿರಿಯ ಉಪಾಧ್ಯಕ್ಷರಾದ ಬಸವರಾಜು ಹಾಗೂ ಉಪಾ ಧ್ಯಕ್ಷರಾದ ಅರ್.ಮೋಹನ್ ಕುಮಾರ್ ಮತ್ತು ಹರ್ಷ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು……