ಹುಬ್ಬಳ್ಳಿ –
ರಜತ್ ಸಂಭ್ರಮಕ್ಕೆ ವೇದಿಕೆ ಸಜ್ಜು ಅಂತಿಮ ಸಿದ್ಧತೆ ವೀಕ್ಷಿಸಿದ ಕೈ ಯುವ ನಾಯಕ ರಜತ್ ಉಳ್ಳಾಗಡ್ಡಿಮಠ ನಾಳೆ ಸಂಜೆ ನಡೆಯಲಿದೆ ಐತಿಹಾಸಿಕ ಸಮಾರಂಭ ಹೌದು
ಅದ್ದೂರಿಯಾಗಿ ನಾಳೆ ನಡೆಯಲಿರುವ ರಜತ್ ಸಂಭ್ರಮ ಕಾರ್ಯಕ್ರಮದ ವೇದಿಕೆ ಸಜ್ಜಾಗಿದ್ದು ಸಿದ್ಧತೆಯನ್ನು ಖುದ್ದು ರಜತ್ ಉಳ್ಳಾಗಡ್ಡಿಮಠ ತಮ್ಮ ಸಂಗಡಿಗರೊಂದಿಗೆ ವೀಕ್ಷಣೆ ಮಾಡಿದರ ಅಲ್ಲದೆ ಸೂಕ್ತ ಸಲಹೆ ನೀಡಿದ್ದಾರೆ.
ಕಾರ್ಯಕ್ರಮದಲ್ಲಿ ಸ್ಯಾಂಡಲ್ ವುಟ್ ನಟ ಡಾಲಿ ಧನಂಜಯ,ಹಾಸ್ಯ ಕಲಾವಿದ ಪ್ರಾಣೇಶ್ ಹಾಗೂ ತಂಡದ ಸದಸ್ಯರು ಹಾಗೂ 45ಕ್ಕು ಹೆಚ್ಚು ಮಠಾಧೀಶರು ಭಾಗವಹಿಸಲಿದ್ದು ಅಲ್ಲದೆ ಸಚಿವ. ರಾದ ಸತೀಶ್ ಜಾರಕಿಹೊಳಿ ಹಾಗೂ ಸಂತೋಷ್ ಲಾಡ್ ಕೂಡ ಮುಖ್ಯ ಅತಿಥಿಗಳಾಗಿ ಆಗಮಿಸಲಿ ದ್ದಾರೆ.
ಇನ್ನು ಕಾರ್ಯಕ್ರಮಕ್ಕೆ ಬೇಕಾದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು ನಾಳೆ ಸಂಜೆ 5 ಗಂಟೆಗೆ ಶುರುವಾಗಲಿದೆ ಎಂದು ರಜತ್ ಉಳ್ಳಾಗಡ್ಡಿಮಠ ಮಾಹಿತಿಯನ್ನು ನೀಡಿದರು
ಇನ್ನು ಭದ್ರತೆ ದೃಷ್ಟಿಯಿಂದ ಇಬ್ಬರು ಎಸಿಪಿ ನಾಲ್ವರು ಇನ್ಸಪೆಕ್ಟರ್ ಸೇರಿದಂತೆ 200 ಜನ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗುತ್ತಿದೆ. ಅಲ್ಲದೆ ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜ ನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ವಾಹನ ಗಳನ್ನು ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು
ಚಾನಕ್ ಪುರಿ ಮೈದಾನ,ವಲಯ ಕಚೇರಿ 9 ರ ಮೈದಾನ ಹಾಗೂ ಭಾರತ ಮಿಲ್ ಮೈದಾನಗಳಲ್ಲಿ ವ್ಯವಸ್ಥೆ ಮಾಡಲಾಗಿದ್ದು.ಬದಲಾವಣೆಗಳು ಇದ್ದಲ್ಲಿ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಲಿದ್ದಾರೆ ಎಂದು ತಿಳಿದು ಬಂದಿದೆ
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..