ಬೆಂಗಳೂರು –
ರಾಜ್ಯಾಧ್ಯಂತ ಆರಂಭಗೊಂಡಿತು ರಾಜ್ಯ ಸರ್ಕಾರಿ ನೌಕರರ ಮಹಾ ಸಮ್ಮೇಳನದ ಪ್ರಚಾರ ರಾಜ್ಯದ ತುಂಬೆಲ್ಲಾ ಜೋರಾಗಿ ಕಂಡು ಬರುತ್ತಿದೆ ಸಮ್ಮೇಳನದ ಪ್ರಚಾರದ ಅಲೆ…..ಪ್ರಚಾರ ಕಾರ್ಯದಲ್ಲಿ ನೌಕರರು ಹೌದು
ಹೌದು ಫೆಬ್ರುವರಿ 27 ರಂದು ಬೆಂಗಳೂರಿನಲ್ಲಿ ರಾಜ್ಯ ಸರ್ಕಾರಿ ನೌಕರರ ಮಹಾ ಸಮ್ಮೇಳನ ನಡೆಯಲಿದೆ.ನಗರದ ಅರಮನೆ ಮೈದಾನದಲ್ಲಿ ಈ ಒಂದು ಐತಿಹಾಸಿಕ ಕಾರ್ಯಕ್ರಮ ನಡೆಯ ಲಿದೆ ಇನ್ನೂ ಈ ಒಂದು ಸಮಾರಂಭದಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ,
ಉಪಮುಖ್ಯಮಂತ್ರಿ ಡಿಕೆಶಿ ಸೇರಿದಂತೆ ಗಣ್ಯಾತಿ ಗಣ್ಯರು ಪಾಲ್ಗೊಳ್ಳಲಿದ್ದಾರೆ.ಈ ಮಧ್ಯೆ ಕಾರ್ಯಕ್ರ ಮಕ್ಕಾಗಿ ಈಗಾಗಲೇ ಎಲ್ಲಾ ಸಿದ್ದತೆಗಳು ಆರಂಭ ಗೊಂಡಿದ್ದು ಇತ್ತ ರಾಜ್ಯದಲ್ಲಿ ಸಮಾಂಭದ ಕುರಿತಂತೆ ಪ್ರಚಾರ ಕಾರ್ಯವೂ ಕೂಡಾ ಆರಂಭ ಗೊಂಡಿದೆ.
ರಾಜ್ಯ ಸಂಘಟನೆಯಿಂದ ಎಲ್ಲಾ ತಾಲ್ಲೂಕು ಜಿಲ್ಲಾ ಕೇಂದ್ರಗಳಿಗೆ ಭಿತ್ತಿ ಪತ್ರ ಸೇರಿದಂತೆ ಪ್ರಚಾರಕ್ಕೆ ಬೇಕಾದ ಎಲ್ಲಾ ವಸ್ತುಗಳನ್ನು ಕಳಿಸಿಕೊಡಲಾಗಿದ್ದು ಹೀಗಾಗಿ ಪ್ರಚಾರದ ಕಾರ್ಯದಲ್ಲಿ ನೌಕರರು ತೊಡಗಿಕೊಂಡಿದ್ದಾರೆ.
ರಾಜ್ಯಾದ್ಯಂತ ಈ ಒಂದು ಪ್ರಚಾರದ ಅಲೆ ಆರಂಭಗೊಂಡಿದ್ದು ಪ್ರತಿಯೊಬ್ಬ ನೌಕರರು ಕೂಡಾ ಸರ್ಕಾರಿ ಕಚೇರಿ ಕಚೇರಿಗಳಿಗೆ ತೆರಳಿ ನೌಕರರಿಗೆ ಕಾರ್ಯಕ್ರಮ ಕುರಿತಂತೆ ಮಾಹಿತಿ ಯನ್ನು ನೀಡುತ್ತಾ ಪ್ರಚಾರ ಕಾರ್ಯವನ್ನು ಮಾಡುತ್ತಿರುವುದು ಕಂಡು ಬರುತ್ತಿದೆ.
ಇದೊಂದು ರಾಜ್ಯ ಸರ್ಕಾರಿ ನೌಕರರಿಗೆ ದೊಡ್ಡ ಪ್ರಮಾಣದಲ್ಲಿ ಹಬ್ಬದ ವಾತಾವರಣದ ಹಾಗೆ ಸಮಾರಂಭವಾಗಿದ್ದು ಅಬ್ಬರದ ಪ್ರಚಾರದ ಅಲೆ ರಾಜ್ಯದಲ್ಲಿ ಕಂಡು ಬರುತ್ತಿದೆ.ಎಲ್ಲಿ ನೋಡಿದಲ್ಲಿ ಅದ್ದೂರಿಯಾದ ಪ್ರಚಾರದ ಅಲೆ ಕಂಡು ಬರುತ್ತಿದ್ದು
ತಮ್ಮದೇಯಾದ ಮಹಾ ಸಮ್ಮೇಳದ ಕುರಿತಂತೆ ಕಚೇರಿಗಳಿಗೆ ತೆರಳಿ ನೌಕರರಿಗೆ ಆಮಂತ್ರಣವನ್ನು ನೀಡುತ್ತಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸು ವಂತೆ ಕರೆ ನೀಡುತ್ತಿರುವುದು ರಾಜ್ಯದಲ್ಲಿ ಕಂಡು ಬರುತ್ತಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು……