ಧಾರವಾಡ –
ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ ಜೋಶಿ ಪ್ರೇರಿತ ಕ್ಷಮತಾ ಸೇವಾ ಸಂಸ್ಥೆ ಹುಬ್ಬಳ್ಳಿ ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿಗಳು ಪೂಜ್ಯ ಖಾವಂದರು ಡಾ.ವೀರೇಂದ್ರ ಹೆಗ್ಗಡೆಯವರ ನೇತೃತ್ವದ ಎಸ್‌ಡಿಎಂ ವೈದ್ಯಕೀಯ ಮಹಾ ವಿದ್ಯಾಲಯ ಮತ್ತು ಆಸ್ಪತ್ರೆ ಧಾರವಾಡ, ಎಸ್‌ಡಿಎಂ ನಾರಾಯಣ ಹಾರ್ಟ್ ಸೆಂಟರ್ ಇವರ ಸಂಯುಕ್ತಾಶ್ರಯದಲ್ಲಿ ಧಾರವಾಡದ ತಡಕೋಡ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಸಲಾಯಿತು.
ಶಿಬಿರದಲ್ಲಿ ನೂರಾರು ಗ್ರಾಮಸ್ಥರು ಭಾಗವಹಿಸಿ ತಜ್ಞ ವೈದ್ಯರಿಂದ ತಪಾಸಣೆ ಮಾಡಿಸಿಕೊಂಡು ಉಚಿತವಾಗಿ ವಿತರಿಸಲಾದ ಔಷಧ ಸೌಲಭ್ಯ ವನ್ನು ಪಡೆದುಕೊಂಡರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಯೋಜನೆಯಾದ ಆಯುಷ್ಮಾನ್ ಭಾರತ್ ಯೋಜನೆ ಬಗ್ಗೆ ಮಾಹಿತಿ ನೀಡಿ ನೋಂದಣಿ ಮಾಡಿಕೊಡಲಾಯಿತು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಗರಗ ಮಡಿವಾಳೇಶ್ವರ ಮಠದ ಪ್ರಶಾಂತದೇವರು ಉತ್ತರಾಧಿಕಾರಿಗಳು ವಹಿಸಿದ್ದು ಧಾರವಾಡ ಗ್ರಾಮೀಣದ ಮಾಜಿಶಾಸಕರಾದ ಅಮೃತ ದೇಸಾಯಿ ಶ್ರೀಮತಿ ಸೀಮಾ ಮಸೂತಿ, ಹು-ಧಾ ಮಹಾನಗರ ಪಾಲಿಕೆ ಸದಸ್ಯರಾದ ರಾಜಣ್ಣ ಕೊರವಿ, ಕೆ.ಎಂ.ಎಫ್. ಆಧ್ಯಕ್ಷರಾದ ಶಂಕರ ಮುಗದ, ಬಿಜೆಪಿ ರೈತ ಮುಖಂಡರಾದ ಅಶೋಕ ದೇಸಾಯಿ,
ತಡಕೋಡ ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀಮತಿ ದೊಡ್ಡಮ್ಮ ಕರಿಕಟ್ಟಿ, ಬಿಜೆಪಿ ಮಂಡಳ ಅಧ್ಯಕ್ಷರಾದ ರುದ್ರಪ್ಪ ಅರಿವಾಳದ, ಗ್ರಾಮ ಪಂಚಾಯತ ಹಾಗೂ ಎಸ್‌ಡಿಎಂಸಿ ಸರ್ವಸದ ಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸುದ್ದಿ ಸಂತೆ ನ್ಯೂಸ್ ಧಾರವಾಡ…..