ಹುಬ್ಬಳ್ಳಿ –
ಲೈಂಗಿಕ ದೌರ್ಜನ್ಯ ಪ್ರಕರಣ ಆರೋಪಿಗೆ ಜೈಲು ಶಿಕ್ಷೆ – ಇನ್ಸ್ಪೇಕ್ಟರ್ ಜೆ ಎಮ್ ಕಾಲಿಮಿರ್ಚಿ ತನಿಖೆ ಕೈಗೊಂಡ ಪ್ರಕರಣ ತನಿಖೆ
ಬಾಲಕಿಯೊಬ್ಬಳಿಗೆ ಲೈಂಗಿಕ ದೌರ್ಜನ್ಯ ನಡೆದ ಪ್ರಕರಣವೊಂದರಲ್ಲಿ ಆರೋಪಿಗೆ 3 ವರ್ಷ ಜೈಲು ಶಿಕ್ಷೆಯನ್ನು ಧಾರವಾಡ ಜಿಲ್ಲಾ ನ್ಯಾಯಾಲಯ ನೀಡಿದೆ.ಹೌದು ಲೈಂಗಿಕ ದೌರ್ಜನ್ಯ ಪ್ರಕರಣವೊಂ ದರಲ್ಲಿ 3 ವರ್ಷ ಜೈಲು ಶಿಕ್ಷೆಯೊಂದಿಗೆ 10 ಸಾವಿರ ರೂಪಾಯಿ ಪರಿಹಾರವನ್ನು ನೀಡುವಂತೆ ಕೂಡಾ ಆದೇಶ ಮಾಡಲಾಗಿದೆ.ಲಕ್ಷ್ಮಣ ದುರ್ಗಪ್ಪ ಅರಸನಾಳ ಆರೋಪಿಗೆ ಮೂರು ವರ್ಷ ಜೈಲು ಶಿಕ್ಷೆಯನ್ನು ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಹಾಗೂ ಪೊಕ್ಸೊ ವಿಶೇಷ ಸೆಷನ್ಸ್ ಕೋರ್ಟ್ ವಿಧಿಸಿದೆ.
ಬಾಲಕಿಗೆ ₹ 10 ಸಾವಿರ ಪರಿಹಾರವನ್ನು ಕೂಡಾ ನೀಡಲು ಆದೇಶಿಸಿದೆ. ನ್ಯಾಯಾಧೀಶ ಜೆರಾಲ್ಡ್ ರೊಡೋಲ್ಫ್ ಮೆಂಡೊನ್ಸಾ ಈ ಒಂದು ಆದೇಶ ವನ್ನು ನೀಡಿದ್ದಾರೆ.2022 ಮೇ 30ರಂದು ಹುಬ್ಬಳ್ಳಿಯ ರಾಮೇಶ್ವರ ನಗರದಲ್ಲಿ ಮನೆಯ ಮುಂದೆ ಮಲಗಿಕೊಂಡಿದ್ದ ಏಳು ವರ್ಷದ ಬಾಲಕಿ ಮೇಲೆ ಲಕ್ಷ್ಮಣ ಅರಸನಾಳ ಲೈಂಗಿಕ ದೌರ್ಜನ್ಯ ಎಸಗಿದ್ದನು.ಈ ಒಂದು ಕುರಿತಂತೆ ಬಾಲಕಿಯ ತಾಯಿ ಗೋಕುಲ ರಸ್ತೆ ಠಾಣೆಯಲ್ಲಿ ದೂರನ್ನು ನೀಡಿದ್ದರು.
ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಇನ್ಸ್ಪೇಕ್ಟರ್ ಜೆ.ಎಂ.ಕಾಲಿಮಿರ್ಜಿ ತನಿಖೆ ನಡೆಸಿ ಕೋರ್ಟ್‌ಗೆ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿದ್ದರು.ಪಬ್ಲಿಕ್ ಪ್ರಾಸಿಕ್ಯೂಟರ್ ಶೈಲಾ ಅಂಗಡಿ ವಾದ ಮಂಡಿದ್ದರು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..