ಮಂಗಳೂರು –
DDPI ತಲೆದಂಡ – ಅಸಮಾಧಾನದ ಬೆನ್ನಲ್ಲೇ ಡಿಡಿಪಿಐ ರನ್ನು ಎತ್ತಂಗಡಿ ಮಾಡಿದ ಶಿಕ್ಷಣ ಇಲಾಖೆ ಹೌದು ಜೊರೆಸಾ ಶಾಲೆಯಲ್ಲಿ ಹಿಂದೂ ದರ್ಮಕ್ಕೆ ಶಿಕ್ಷಕಿಯಿಂದ ಧರ್ಮ ಅವಹೇಳನ ಪಾಠ ವಿಚಾರ ಕುರಿತಂತೆ ಈಗಾಗಲೇ ಶಿಕ್ಷಕಿಯನ್ನು ಅಮಾನತು ಮಾಡಿದ ಬೆನ್ನಲ್ಲೇ ಡಿಡಿಪಿಐ ರನ್ನು ಕೂಡಾ ತಲೆದಂಡ ಮಾಡಲಾಗಿದೆ.ಹೌದು ಜೊರೆಸಾ ಶಾಲೆ ಶಿಕ್ಷಕಿಯಿಂದ ಧರ್ಮ ಅವಹೇ ಳನ ಪಾಠ ವಿಚಾರಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲಾ ಡಿಡಿಪಿಐ ದಯಾನಂದ್ ನಾಯ್ಕ್ ಅವರನ್ನು ದಿಢೀರ್ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಿಡಿಸಿದೆ.
ದಯಾನಂದ್ ನಾಯ್ಕ್ ಅವರನ್ನು ಬೆಳಗಾವಿ ಸರ್ಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯಕ್ಕೆ ಪ್ರವಾಚಕರನ್ನಾಗಿ ನೇಮಸಿ ವರ್ಗಾವಣೆ ಮಾಡ ಲಾಗಿದೆ. ವೆಂಕಟೇಶ್ ಸುಬ್ರಾಯ ಪಟಗಾರ ಅವರನ್ನು ನೂತನ ಡಿಡಿಪಿಐ ರನ್ನಾಗಿ ನೇಮಕ ಮಾಡಲಾಗಿದೆ.ವೆಂಕಟೇಶ್ ಸುಬ್ರಾಯ ಪಟಗಾರ ಕಲಬುರಗಿಯ ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತರ ಕಚೇರಿಯಲ್ಲಿ ಉಪನಿರ್ದೇಶಕ (ಯೋಜನೆ)ರಾಗಿದ್ದ ಆಗಿದ್ದರು. ಜೆರೋಸಾ ಶಾಲೆಯ ವಿವಾದವನ್ನು ಸರಿಯಾಗಿ ನಿರ್ವಹಣೆ ಮಾಡುವಲ್ಲಿ ವಿಫಲರಾಗಿದ್ದು ಹೀಗಾಗಿ ಇದನ್ನು ಗಂಭೀರವಾಗಿ ತಗೆದುಕೊಂಡ ರಾಜ್ಯ ಸರ್ಕಾರ ಈ ಒಂದು ಸರ್ಜರಿಯನ್ನು ಮಾಡಿದೆ
ಇನ್ನೂ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಅವಹೇಳನ ಮಾಡಿದ್ದಾರೆ ಅನ್ನೋದಕ್ಕೆ ಆಧಾರ ಸಿಗುತ್ತಿಲ್ಲ ಶಿಕ್ಷಕಿ ಠಾಗೂರ್ ಅವರ ಪಠ್ಯವನ್ನು ಇಂಗ್ಲಿಷ್ನಲ್ಲಿ ಪಾಠ ಮಾಡುತ್ತಿದ್ದರು. ಅವರು ಎಲ್ಲೂ ಕನ್ನಡ ಬಳಸಿಲ್ಲ ಪಠ್ಯಕ್ಕೆ ಸಂಬಂಧಿಸಿದ ವಿಷಯ ಮಾತ್ರ ಮಾತನಾಡಿದ್ದಾರೆ. ಧಾರ್ಮಿಕ ವಿದ್ಯಮಾನ ಕುರಿತು ಮಾತನಾಡಿಲ್ಲ. ಇದು ಶಾಲೆಯ ಆಡಳಿತ ಮಂಡಳಿ ನೀಡಿದ ವಿವರಣೆ ಎಂದು ಹೇಳಿದರು.
ಹೀಗಾಗಿ ಈ ಒಂದು ಪ್ರಕರಣ ಕುರಿತಂತೆ ಸಮಗ್ರ ತನಿಖೆಯನ್ನು ಮಾಡುವಂತೆ ಒತ್ತಾಯ ಕೂಡಾ ಕೇಳಿ ಬರುತ್ತಿದ್ದು ನಾವು ಕೂಡ ಆಗ್ರಹಿಸುತ್ತಿದ್ದೇವೆ ಎಂದಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಮಂಗಳೂರು…..