ಬೆಂಗಳೂರು –
ಬನ್ನಿ ರಾಜ್ಯ ಸರ್ಕಾರಿ ನೌಕರರ ಮಹಾ ಸಮ್ಮೇಳನ ಯಶಸ್ವಿಗೊಳಿಸಿ ಧಾರವಾಡ ಜಿಲ್ಲಾ ನೌಕರರ ಸಂಘ ಕರೆ – ಸಮ್ಮೇಳನಕ್ಕೆ ಬರುತ್ತಿರುವ ರಾಜ್ಯದ ಸರ್ಕಾರಿ ನೌಕರರಿಗೆ ಸ್ವಾಗತ ಕೋರಿದ ಜಿಲ್ಲಾಧ್ಯಕ್ಷ ಎಸ್ ಎಫ್ ಸಿದ್ದನಗೌಡರ ನೇತ್ರತ್ವ ದಲ್ಲಿನ ಧಾರವಾಡ ಜಿಲ್ಲಾ ಸರ್ಕಾರಿ ನೌಕರರ ಟೀಮ್ ಹೌದು
ನಾಳೆ ಬೆಂಗಳೂರಿನಲ್ಲಿ ರಾಜ್ಯ ಸರ್ಕಾರಿ ನೌಕರರ ಮಹಾ ಸಮ್ಮೇಳನ ನಡೆಯಲಿದೆ.ಐತಿಹಾಸಿಕ ಈ ಒಂದು ಕಾರ್ಯಕ್ರಮಕ್ಕಾಗಿ ಅರಮನೆ ಮೈದಾನ ಮಧುವಣಗಿತ್ತಿಯಂತೆ ಸಿದ್ದಗೊಂಡಿದೆ.ಈ ನಡುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಾಂತರ ಸರ್ಕಾರಿ ನೌಕರರು ಅಪಾರ ಸಂಖ್ಯೆಯಲ್ಲಿ ಬೆಂಗಳೂರಿನತ್ತ ಪ್ರಯಾಣವನ್ನು ಬೆಳೆಸಿದ್ದಾರೆ.
ಇನ್ನೂ ಈ ಒಂದು ಸಮ್ಮೇಳನಕ್ಕೆ ಬರುತ್ತಿರುವ ರಾಜ್ಯದ ಸರ್ಕಾರಿ ನೌಕರರಿಗೆ ಮತ್ತು ಸಮ್ಮೇಳ ನಕ್ಕೆ ಧಾರವಾಡ ಜಿಲ್ಲಾ ಸರ್ಕಾರಿ ನೌಕರರ ಸಂಘವು ಶುಭವನ್ನು ಕೋರಿದೆ.ಹೌದು ಮಹಾ ಸಮ್ಮೇಳನಕ್ಕೆ ಬರುತ್ತಿರುವ ಸಮಸ್ತ ಸರ್ಕಾರಿ ನೌಕರರಿಗೆ ಧಾರವಾಡ ಜಿಲ್ಲೆಯ ಸರ್ಕಾರಿ ನೌಕರರ ಸಂಘಟನೆಯ ಪರವಾಗಿ ಜಿಲ್ಲಾಧ್ಯಕ್ಷ ಎಸ್ ಎಫ್ ಸಿದ್ದನಗೌಡರ ನೇತ್ರತ್ವದಲ್ಲಿನ ಟೀಮ್ ಶುಭವನ್ನು ಕೋರಿ ನೌಕರರಿಗೆ ಸ್ವಾಗತವನ್ನು ಕೋರಿದ್ದಾರೆ.
ಜಿಲ್ಲಾಧ್ಯಕ್ಷ ಎಸ್ ಎಫ್ ಸಿದ್ದನಗೌಡರ, ಗೌರವಾಧ್ಯಕ್ಷ ಆರ್ ಬಿ ಲಿಂಗದಾಳ,ಗಿರೀಶ್ ಚೌಡಕಿ,ರಾಜ್ಯ ಪರಿಷತ್ ಸದಸ್ಯರಾದ ದೇವಿದಾಸ ಶಾಂತಿಕರ,ಹಿರಿಯ ಉಪಾಧ್ಯಕ್ಷರಾದ ಮಲ್ಲಿಕಾರ್ಜುನ ಸೊಲಗಿ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ ಯಡಳ್ಳಿ,ರಾಜ್ಯ ಖಜಾಂಚಿ ರಾಜಶೇಖರ ಬಾಣದ,ಸೇರಿದಂತೆ ಸಂಘಟನೆಯ ಸರ್ವ ಸದಸ್ಯರ ಪರವಾಗಿ ಟೀಮ್ ಸಮ್ಮೇಳನಕ್ಕೆ ಶುಭವನ್ನು ಕೋರಿ ಸಮಸ್ತ ಸರ್ಕಾರಿ ನೌಕರರಿಗೆ ಸ್ವಾಗತವನ್ನು ಕೋರಿ ಧಾರವಾಡ ಜಿಲ್ಲೆಯಿಂದ ಜಿಲ್ಲಾಧ್ಯಕ್ಷ ಎಸ್ ಎಫ್ ಸಿದ್ದನಗೌಡರ ನೇತ್ರತ್ವದಲ್ಲಿ ಪ್ರಯಾಣವನ್ನ ಬೆಂಗಳೂರಿನತ್ತ ಬೆಳೆಸಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಧಾರವಾಡ…..