ಬೆಂಗಳೂರು –
ರಾಜ್ಯದ ಪೊಲೀಸರಿಗೆ ಗುಡ್ ನ್ಯೂಸ್ ನೀಡಿದ ಗೃಹ ಸಚಿವರು – ಪೊಲೀಸರ ಹಲವು ವರ್ಷಗಳ ಬೇಡಿಕೆಯನ್ನು ಈಡೇರಿಸಿದ ಸಂತೋಷ ಸುದ್ದಿ ಯನ್ನು ನೀಡಿದ ಗೃಹ ಸಚಿವರು ಹೌದು
ರಾಜ್ಯದ ಪೊಲೀಸರಿಗೆ ಗೃಹ ಸಚಿವ ಜಿ ಪರಮೇಶ್ವರ ಕೊನೆಗೂ ಗುಡ್ ನ್ಯೂಸ್ ನೀಡಿದ್ದಾರೆ.ಹೌದು ಕಳೆದ ಹಲವಾರು ವರ್ಷಗಳಿಂದ ರಾಜ್ಯದ ಪೊಲೀಸರಿಗೆ ಪ್ರಮುಖ ಬೇಡಿಕೆಗಳಲ್ಲಿ ಒಂದಾಗಿದ್ದ ಅಂತರ ಜಿಲ್ಲಾ ವರ್ಗಾವಣೆಗೆ ಗ್ರೀನ್ ಸಿಗ್ನಲ್ ನೀಡಲಾಗಿದೆ.
ಇದರೊಂದಿಗೆ ಕಳೆದ ಹಲವು ವರ್ಷಗಳಿಂದ ಪ್ರಮುಖ ಬೇಡಿಕೆಯಾಗಿದ್ದ ಇದನ್ನು ಈಡೇರಿ ಸಲಾಗಿದೆ.ಇದರೊಂದಿಗೆ ರಾಜ್ಯದ ಪೊಲೀಸರಿಗೆ ಗೃಹ ಸಚಿವರು ಗುಡ್ ನ್ಯೂಸ್ ನೀಡಿದ್ದಾರೆ.ಸಧ್ಯ ಅಂತರ ಜಿಲ್ಲಾ ವರ್ಗಾವಣೆಗೆ ಸರ್ಕಾರವು ಗ್ರೀನ್ ಸಿಗ್ನಲ್ ನೀಡಿದೆ.ಪೊಲೀಸರ ಅಂತರ ಜಿಲ್ಲಾ ವರ್ಗಾವಣೆಗೆ ಸರ್ಕಾರ ಅಸ್ತು ಎಂದಿದೆ ಅರ್ಹ ಪತಿ,ಪತ್ನಿ ಪೊಲೀಸ್ ಸಿಬ್ಬಂದಿ ಅಂತರ ಜಿಲ್ಲಾ ವರ್ಗಾವಣೆಗೆ ಸೂಚನೆ ನೀಡಲಾಗಿದೆ.
ವರ್ಗಾವಣೆಗೆ ಸೂಕ್ತ ಕ್ರಮ ಕೈಗೊಳ್ಳಲು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಸೂಚನೆ ನೀಡಿದ್ದಾರೆ.ಅರ್ಹ ಪತಿ,ಪತ್ನಿ ಪೊಲೀಸ್ ಸಿಬ್ಬಂದಿ ಅಂತರಜಿಲ್ಲಾ ವರ್ಗಾವಣೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಡಿಜಿ,ಐಜಿಪಿ ಅಲೋಕ್ ಮೋಹನ್ ಅವರಿಗೆ ಸಚಿವ ಪರಮೇಶ್ವರ್ ಸೂಚನೆ ನೀಡಿದ್ದಾರೆ.
ಹಲವು ತಿಂಗಳಿನಿಂದ ಪತಿ-ಪತ್ನಿ ಪೊಲೀಸರ ವರ್ಗಾವಣೆಗೆ ಒತ್ತಾಯ ಕೇಳಿ ಬಂದಿತ್ತು ಇದರ ಬೆನ್ನಲ್ಲೇ ಸಧ್ಯ ಈ ಒಂದು ಪ್ರಕ್ರಿಯೆಗೆ ರಾಜ್ಯ ಸರ್ಕಾರ ಒಪ್ಪಿಗೆಯನ್ನು ನೀಡಿದ್ದು ಹೀಗಾಗಿ ವರ್ಗಾವಣೆಯ ನಿರೀಕ್ಷೆಯಲ್ಲಿದ್ದ ರಾಜ್ಯದ ಪೊಲೀಸ್ ಅಧಿಕಾರಿಗಳು ಸಿಬ್ಬಂದಿಗಳು ಸಂತೋಷಗೊಂಡಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..