ಬೆಂಗಳೂರು –
ಮಹಾ ಸಮ್ಮೇಳನದಲ್ಲಿ ರಾಜ್ಯ ಸರ್ಕಾರಿ ನೌಕರರ ಮಹಾ ನೀರಿಕ್ಷೆಯನ್ನು ಹುಸಿ ಮಾಡಿದ CM ಸಮಾವೇಶದಲ್ಲಿ ಮತ್ತೆ ಅದನ್ನೇ ಹೇಳಿ ನನ್ನ ಮೇಲೆ ನಂಬಿಕೆ ಭರವಸೆ ಇಡಿ ಎನ್ನುತ್ತಾ ನೌಕರರ ನಿರೀಕ್ಷೆಯನ್ನು ಹುಸಿ ಮಾಡಿದ CM ಹೌದು
ಅಂದುಕೊಂಡಂತೆ ರಾಜ್ಯ ಸರ್ಕಾರಿ ನೌಕರರ ಮಹಾ ಸಮ್ಮೇಳನ ನಿಜಕ್ಕೂ 100 ಕ್ಕೆ 100 ರಷ್ಟು ಯಶಸ್ಸು ಕಂಡಿದೆ.7 ವರ್ಷಗಳ ನಂತರ ಬೆಂಗಳೂ ರಿನ ಅರಮನೆ ಮೈದಾನದಲ್ಲಿ ನಡೆದ ರಾಜ್ಯ ಸರ್ಕಾರಿ ನೌಕರರ ಮಹಾ ಸಮ್ಮೇಳನದಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಾಂತರ ಸರ್ಕಾರಿ ನೌಕರರು ಪಾಲ್ಗೊಂಡು ತಮ್ಮದೆಯಾದ ಕಾರ್ಯಕ್ರಮವನ್ನು ಯಶಸ್ಸುಗೊಳಿಸಿ ಸಾಕ್ಷಿಯಾ ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಾ ಪಾಲ್ಗೊಂಡು ಚಾಲನೆ ನೀಡಿ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾದ್ರು.ಇನ್ನೂ ಒಂದೆಡೆ ಯಾದರೆ ಪ್ರಮುಖವಾಗಿ ಈ ಒಂದು ಸಮಾರಂ ಭದಲ್ಲಿ ರಾಜ್ಯ ಸರ್ಕರಿ ನೌಕರರ ಕೆಲವೊಂದಿಷ್ಟು ಬೇಡಿಕೆಗಳ ಕುರಿತಂತೆ ಅದರಲ್ಲೂ ಪ್ರಮುಖವಾಗಿ 7ನೇ ವೇತನ ಆಯೋಗ,ಹಳೆ ಪಿಂಚಣಿ ಯೋಜನೆ
ಆರೋಗ್ಯ ಭಾಗ್ಯ ಯೋಜನೆ ಹೀಗೆ ರಾಜ್ಯ ಸರ್ಕಾರಿ ನೌಕರರು ಈ ಮೂರು ಪ್ರಮುಖ ಬೇಡಿಕೆಗಳು ಈಡೇರುತ್ತವೆ ಎಂದುಕೊಂಡಿ ದ್ದರು.ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಸರ್ಕಾರಿ ನೌಕರರಿಗೆ ಮತ್ತೆ ಅದೇ ಭರವಸೆಯ ಮಾತುಗಳನ್ನು ಹೇಳಿದ್ದಾರೆ.ವರದಿ ಬಂದ ಕೂಡಲೇ ಪರಿಶೀಲನೆ ಮಾಡಿ 7ನೇ ವೇತನ ಆಯೋಗವನ್ನು ಜಾರಿಗೆ ಮಾಡುತ್ತೇನೆ.ಹಳೆ ಪಿಂಚಣಿ ವಿಚಾರದಲ್ಲಿ ಈಗಾಗಲೇ ಇದನ್ನು ಜಾರಿ ಮಾಡಿರುವ 6 ರಾಜ್ಯಗಳಿಂದ ವರದಿಯನ್ನು ತರಿಸಿಕೊಂಡು ಅಧ್ಯಯನ ಮಾಡುತ್ತೇನೆ ಇನ್ನೂ ರಾಜ್ಯ ಸರ್ಕಾರಿ ನೌಕರರಿಗೆ ಆರೋಗ್ಯ ಭಾಗ್ಯ ಯೋಜನೆ ಕುರಿತಂತೆ ಕಡತವನ್ನು ತರಿಸಿಕೊಂಡು ಜಾರಿಗೆ ತರುವ ಪ್ರಯತ್ನವನ್ನು ಮಾಡುತ್ತೇನೆ ಎಂದು ಹೇಳಿದರು.
ಈ ಒಂದು ಮಾತುಗಳನ್ನು ಕೇಳುತ್ತಿದ್ದಂತೆ ಸಮಾರಂಭದಲ್ಲಿದ್ದ ನೌಕರರು ಜೋರಾಗಿ ಮಾತನಾಡಲು ಆರಂಭ ಮಾಡಿದರು ಇದನ್ನು ಅರಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇ ತಾಳಿ ನನಗೂ ಗೊತ್ತಿದೆ ಅರ್ಥ ಮಾಡಿಕೊಳ್ಳಿ ಎನ್ನುತ್ತಾ ನನ್ನ ಮೇಲೆ ಭರವಸೆ ಇಡಿ ನಂಬಿಕೆ ಇಡಿ ಹೇಳಿ ದಂತೆ ನಾನು ನಡೆದುಕೊಳ್ಳುವ ಮನುಷ್ಯ ಈ ಹಿಂದೆಯೂ ಕೂಡಾ 6ನೇ ವೇತನ ಆಯೋಗ ವನ್ನು ಜಾರಿಗೆ ತಗೆದುಕೊಂಡಿದ್ದು ಬಂದಿದ್ದು
ನಾನೇ ಘೋಷಣೆ ಮಾಡಿದ್ದು ನಾನೇ ಈ ಕೂಡಲೇ 7ನೇ ವೇತನ ಆಯೋಗದ ಅಧ್ಯಕ್ಷ ರೊಂದಿಗೆ ಮಾತನಾಡಿ ವರದಿ ನೀಡುವಂತೆ ಹೇಳುತ್ತೇನೆ ವರದಿ ಬಂದ ಕೂಡಲೇ ನಿಮ್ಮೊಂದಿಗೆ ಮಾತನಾಡಿ ಘೋಷಣೆ ಮಾಡುತ್ತೇನೆ ಎಂದರು ಇನ್ನೂಳಿದಂತೆ ನಿಮ್ಮೊಂದಿಗೆ ಸರ್ಕಾರ ಇದೆ ಎನ್ನುತ್ತಾ ವೇದಿಕೆಯಿಂದ ತೆರಳಿದರು.ಇನ್ನೂ ನಂತರ ಮತ್ತೆ ವೇದಿಕೆಯ ಮೇಲೆ ಬಂದ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿಯವರು ನೀವು ಯಾವತ್ತೂ ಆತಂಕ ಗೊಳ್ಳದಿರಿ ನಿಮ್ಮೊಂದಿಗೆ ನಾನು ಸಂಘಟನೆ ಇದೆ ಒಂದು ತಿಂಗಳ ಸಮಯಾಕಾಶವನ್ನು ರಾಜ್ಯ ಸರ್ಕಾರಕ್ಕೆ ನೀಡುತ್ತೇವೆ ಘೋಷಣೆ ಮಾಡದಿದ್ದರೆ
ಖಂಡಿತವಾಗಿಯೂ ಹೋರಾಟಕ್ಕೆ ಕರೆ ಕೊಡು ತ್ತೇನೆ ನಿವೇಲ್ಲರೂ ಬನ್ನಿ ಎಂದು ರಾಜ್ಯ ಸರ್ಕಾರಿ ನೌಕರರಿಗೆ ಸಂದೇಶವನ್ನು ನೀಡಿದರು.ಒಟ್ಟಾರೆ ಏನೇ ಆಗಲಿ ಮಹಾ ಸಮ್ಮೇಳನದಲ್ಲಿ ಮಹಾ ನಿರೀಕ್ಷೆಯನ್ನು ಇಟ್ಟುಕೊಂಡು ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ್ದ ರಾಜ್ಯ ಸರ್ಕಾರಿ ನೌಕರರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೊನೆಗೂ ಮಹಾನ್ ನಿರೀಕ್ಷೆಯನ್ನು ಹುಸಿ ಮಾಡಿದ್ದಾರೆ ಹೀಗಾಗಿ ಬೇಸರಗೊಂಡ ನೌಕರರು ಊರಿನತ್ತ ತೆರಳುತ್ತಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..