ಬೆಂಗಳೂರು –
ಬೆಂಗಳೂರಿನಲ್ಲಿ ನಡೆಯಿತು ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಕಾರ್ಯಕಾರಣಿ ಸಭೆ – ಎಸ್ ವೈ ಸೊರಟಿ ಯವರ ನೇತ್ರತ್ವದಲ್ಲಿ ನಡೆದ ಸಭೆಯಲ್ಲಿ ತಗೆದುಕೊಂಡ ತೀರ್ಮಾನ ನಿರ್ಣಯಗಳೇನು ನೋಡಿ…..
ಬೆಂಗಳೂರಿನಲ್ಲಿ ರಾಜ್ಯ ಸರ್ಕಾರಿ ನೌಕರರ ಮಹಾ ಸಮ್ಮೇಳನದ ಬೆನ್ನಲ್ಲೇ ಇತ್ತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಧ ರಾಜ್ಯ ಕಾರ್ಯಕಾರಣಿ ಸಭೆ ನಡೆಯಿತು.ಹೌದು ನಗರದ ಸರಕಾರಿ ನೌಕರರ ಭವನದಲ್ಲಿ ರಾಜ್ಯಾಧ್ಯಕ್ಷರಾದ ಎಸ್.ವಾಯ್.ಸೊರಟಿ ಅವರ ನೇತೃತ್ವದಲ್ಲಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಕಾರ್ಯಕಾರಣಿ ಸಭೆ ನಡೆಯಿತು.
ಸಭೆಯಲ್ಲಿ ರಾಜ್ಯ ಸರಕಾರಿ ನೌಕರರ ಸಂಘದ ಗೌರವ ಅಧ್ಯಕ್ಷರು ಸೇರಿದಂತೆ ಹಲವರು ಭಾಗವ ಹಿಸಿದ್ದು ಹಲವಾರು ವಿಚಾರಗಳ ಕುರಿತಂತೆ ಗಂಭೀರವಾದ ಚರ್ಚೆಯನ್ನು ಮಾಡಲಾಯಿತು. ಪದವಿ ಹೊಂದಿದ PST ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಶಿಕ್ಷಕರನ್ನು ಸೇವಾ ಜೇಷ್ಠಯೊಂದಿಗೆ GPT ಹಾಗೂ ಪ್ರೌಢಶಾಲಾ ಶಾಲಾ ಶಿಕ್ಷಕರಾ ಗುವಂತೆ ಕಡತವನ್ನು ಸಚಿವ ಸಂಪುಟದಲ್ಲಿ ಅನುಮೋದನೆ ಮಾಡಿಸಲು ಸೂಕ್ತವಾದ ರೂಪರೇಷೆಯನ್ನು ಮಾಡುವುದು.
ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು(6-8ನೇ ತರಗತಿ)ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿಗೆ ಒತ್ತಾಯವನ್ನು ಮಾಡುವುದು. ಪ್ರೌಢಶಾಲಾ ಸಹ ಶಿಕ್ಷಕರ ಗ್ರೇಡ್-2 ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿಯನ್ನು ಮಾಡುವುದು.ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರು ಹಾಗೂ ಹಿರಿಯ ಮುಖ್ಯ ಶಿಕ್ಷಕರು ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ಯನ್ನು ಮಾಡುವುದು.ಹೀಗೆ ಕೆಲವೊಂದಿಷ್ಟು ಪ್ರಮುಖವಾಗಿ ತುರ್ತಾಗಿ ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಈ ಒಂದು ಸಭೆಯಲ್ಲಿ ಸಾವಿತ್ರಿಭಾಯಿ ಪುಲೆ ಶಿಕ್ಷಕಿಯರ ಸಂಘದ ಅಧ್ಯಕ್ಷರಾದ ಶ್ರೀಮತಿ ಲತಾ ಮುಳ್ಳೂರ,ರಾಜ್ಯ ಸಂಘದ ರಾಜ್ಯಾಧ್ಯಕ್ಷರಾದ ಎಸ್.ವಾಯ್.ಸೊರಟಿ ರಾಜ್ಯ ಪ್ರಧಾನ ಕಾರ್ಯ ದರ್ಶಿಗಳಾದ ಶಶಿಕುಮಾರ್ (ಕೆಂಪೇಗೌಡ) ರಾಜ್ಯ ಸಂಘಟನಾ ಕಾರ್ಯರ್ದಶಿಗಳಾದ ರಾಮ ಮೂರ್ತಿ ಕೊಲ್ಲಾರ,ರಾಜ್ಯ ಉಪಾಧ್ಯಕ್ಷರಾದ ಶ್ರೀಮತಿ ರೂಪಾ ಬಾಗಲಕೊಟಿ ಜಿಲ್ಲಾ ಅಧ್ಯಕ್ಷ ರಾದ ಬಿ.ಜಿ ಗೌಡರ.ರಾಜ್ಯ ಎನ್.ಪಿ.ಎಸ್ ಪ್ರಧಾನ ಕಾರ್ಯದರ್ಶಿಗಳಾದ ರವೀಂದ್ರ ಹೂಗಾರ,
ಬಬಲೇಶ್ವರ ಕೆ.ಎಸ್.ಪಿ.ಎಸ್.ಟಿ ಅಧ್ಯಕ್ಷರಾದ ಎಚ್.ಎನ್.ಚಿತ್ತರಗಿ ವಿಜಯಪೂರ ಜಿಲ್ಲಾ ಅಧ್ಯಕ್ಷರಾದ ಈರಣ್ಣ ಹೊಸಟ್ಟಿ,ಕೋಲ್ಹಾರ ತಾಲೂಕಾ ಅಧ್ಯಕ್ಷರಾದ ಶ್ರೀಧರ ಪಾರಶಟ್ಟಿ, ಬಬಲೇಶ್ವರ ತಾಲೂಕಾ ಅಧ್ಯಕ್ಷರಾದ ಉದಯ ಕೋಟ್ಯಾಳ,ಬಾಗೇವಾಡಿ ಪ್ರಧಾನ ಕಾರ್ಯ ದರ್ಶಿಗಳಾದ ಈರಣ್ಷ ಬಿರಾದಾರ ಹಾಗೂ ವಿಜಯಪೂರ ದಿಂದ ಸುರೇಶ ಬಿರಾದಾರ,
ಬಿ.ಡಿ.ಕುಂಭಾರ.ಎಂ.ಸಿ.ಬಿರಾದಾರ ಜಾಮಗೊಂಡ ಸುರೇಶ ಮಾಕಾಳಿ.ರಾಜ್ಯದ ಹಾಗೂ ವಿವಿಧ ಜಿಲ್ಲೆಗಳ ಮತ್ತು ತಾಲೂಕಾ ಅಧ್ಯಕ್ಷರು ಪ್ರಧಾನ ಕಾರ್ಯದರ್ಶಿಗಳು ಹಾಗೂ ಶಿಕ್ಷಕರು ಭಾಗವಹಿಸಿದದ್ದರು.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..