ಬೆಂಗಳೂರು –
ರಾಜ್ಯದ ಸರ್ಕಾರಿ ನೌಕರರ ಬೇಡಿಕೆಗಳನ್ನು ಅವಧಿಯೊಳಗೆ ಈಡೇರಿಸಬೇಕು ಅವುಗಳನ್ನು ಈಡೇರಿಸದಿದ್ದರೆ ಹೋರಾಟ ಮಾಡೊದಾಗಿ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಯವರು ಹೇಳಿದ್ದಾರೆ ಬೆಂಗಳೂರಿನಲ್ಲಿ ಮಾತನಾಡಿದ ಅವರು ಗಡುವಿನೊಳಗೆ ಬೇಡಿಕೆ ಈಡೇರದಿದ್ದರೆ ರಾಜ್ಯವ್ಯಾಪಿ ಮುಷ್ಕರವನ್ನು ಮಾಡೊದಾಗಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ಸಂದೇಶವನ್ನು ರವಾನಿಸಿದರು.
ಕರ್ನಾಟಕದ ಸರ್ಕಾರದ ಮುಂದೆ ವಿವಿಧ ಬೇಡಿಕೆ ಗಳನ್ನು ಇಟ್ಟಿರುವ ಸರ್ಕಾರಿ ನೌಕರರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏಳನೇ ವೇತನ ಆಯೋಗದ ಜಾರಿ ಕುರಿತು ಭರವಸೆಗ ಳನ್ನು ಕೊಟ್ಟಿದ್ದಾರೆ.ಈ ಆಯೋಗ ಜಾರಿ ಮಾಡುವ ನಮ್ಮ ಬೇಡಿಕೆ ಈಡೇರಿಸದೇ ಹೋದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವುದು ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರು ಹೇಳಿದರು.
ಏಳನೇ ವೇತನ ಜಾರಿ ಕುರಿತು ಆಗ್ರಹಿಸಿರುವ ಅವರು ನೌಕರರು ಯಾವ ಕಾರಣಕ್ಕೂ ತಾಳ್ಮೆ ಕಳೆದುಕೊಳ್ಳಬಾರದು.ಸರ್ಕಾರ ನಮಗೆ ನೀಡಿ ರುವ ಗಡುವಿನ ವರೆಗೂ ನಾವು ಶಾಂತರಾಗಿ ಕಾಯೋಣ.ಗುಡುವಿನೊಳಗೆ ಬೇಡಿಕೆ ಈಡೇ ರಿಕೆಗೆ ಸೂಕ್ತ ನಿರ್ಧಾರವನ್ನು ಸರ್ಕಾರ ಕೈಗೊ ಳ್ಳದಿದ್ದರೆ ಅನಿರ್ದಿಷ್ಟಾವಧಿ ಹೋರಾಟದ ಎಚ್ಚರಿಕೆ ಸಂದೇಶವನ್ನು ಅವರು ಈ ಮೂಲಕ ರವಾನಿಸಿದರು.
ಹೋರಾಟಕ್ಕೆ ಸಮ್ಮೇಳನ ಮೊದಲ ಹೆಜ್ಜೆ ಯಾಗಿದೆ ಇದು ಮುನ್ನುಡಿಯನ್ನು ಕೂಡಾ ಬರೆದಿದ್ದು ರಾಜ್ಯ ಸರ್ಕಾರಕ್ಕೆ ಸರ್ಕಾರಿ ನೌಕರರ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ನಡೆಸು ತ್ತಿರುವ ಹೋರಾಟಕ್ಕೆ ಸದರಿ ಸಮ್ಮೇಳನ ಮೂಲಕ ಪ್ರಾಥಮಿಕ ಹೆಜ್ಜೆ ಇಡಲಾಗಿದೆ ಎಂಬ ಸಂದೇಶವನ್ನು ನೌಕರರಿಗೆ ಮತ್ತು ರಾಜ್ಯ ಸರ್ಕಾರಕ್ಕೆ ತಲುಪಿಸದರು.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..