ಧಾರವಾಡ –
ಧಾರವಾಡ ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟಕ್ಕೆ,ಸಾಂಸ್ಕ್ರತಿಕ ಸ್ಪರ್ಧೆಗಳಿಗೆ ಚಾಲನೆ ಸಚಿವ ಸಂತೋಷ ಲಾಡ್,ಶಾಸಕ NH ಕೋನರಡ್ಡಿ ಚಾಲನೆ – ಎರಡು ದಿನಗಳ ಕ್ರೀಡಾ ಕೂಟದಲ್ಲಿ ಜಿಲ್ಲೆಯ ಸರ್ಕಾರಿ ನೌಕರರ ಭಾಗಿ
ಧಾರವಾಡ ಜಿಲ್ಲಾ ಸರ್ಕಾರಿ ನೌಕರರ ಕ್ರೀಡಾ ಕೂಟ ಮತ್ತು ಸಾಂಸ್ಕ್ರತಿಕ ಸ್ಪರ್ಧೆಗಳು ಆರಂಭ ಗೊಂಡಿವೆ.ನಗರದ ಆರ್ ಎನ್ ಶೆಟ್ಟಿ ಮೈದಾನ ದಲ್ಲಿ ಎರಡು ದಿನಗಳ ಜಿಲ್ಲಾ ಮಟ್ಟದ ಕ್ರೀಡಾ ಕೂಟ ಮತ್ತು ಸಾಂಸ್ಕ್ರತಿಕ ಸ್ಪರ್ಧೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ನವಲಗುಂದ ವಿಧಾನ ಸಭಾ ಕ್ಷೇತ್ರದ ಶಾಸಕ ಎನ್ ಹೆಚ್ ಕೋನರಡ್ಡಿ ಚಾಲನೆ ನೀಡಿದರು.
ಜಿಲ್ಲಾಡಳಿತ,ಜಿಲ್ಲಾ ಪಂಚಾಯತ,ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ,ಮತ್ತು ಜಿಲ್ಲಾ ಸರ್ಕಾರಿ ನೌಕರರ ಸಂಘಟನೆಯಿಂದ ಈ ಒಂದು ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗಿದೆ ಕ್ರೀಡಾ ಜ್ಯೋತಿಯನ್ನು ಕ್ರೀಡಾಪಟುಗಳಿಂದ ತಗೆದುಕೊಳ್ಳುವ ಮೂಲಕ ಸಚಿವ ಸಂತೋಷ ಲಾಡ್ ಶಾಸಕ ಎನ್ ಹೆಚ್ ಕೋನರಡ್ಡಿಯವರು ಚಾಲನೆ ನೀಡಿದರು.
ಇನ್ನೂ ಎರಡು ದಿನಗಳ ಕಾಲ ಈ ಒಂದು ಕ್ರೀಡಾ ಕೂಟಗಳು ಮತ್ತು ಸಾಂಸ್ಕ್ರತಿಕ ಸ್ಪರ್ಧೆಗಳು ನಡೆಯಲಿದ್ದು.ಈ ಒಂದು ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧ ಇಲಾಖೆಗಳ ಸರ್ಕಾರಿ ನೌಕರ ಕ್ರೀಡಾಪಟು ಗಳು ಪಾಲ್ಗೊಂಡಿದ್ದು ಕ್ರೀಡಾ ಪ್ರತಿಭೆಯೊಂದಿಗೆ ಸಾಂಸ್ಕ್ಪ್ರತಿಕ ಪ್ರತಿಭೆಯನ್ನು ನೌಕರರು ಪ್ರದರ್ಶನ ಮಾಡಲಿದ್ದಾರೆ.ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್,ಶಾಸಕರಾದ ಎನ್ ಹೆಚ್ ಕೋನರೆಡ್ಡಿ,ಜಿಲ್ಲಾಧಿಕಾರಿಗಳಾದ ದಿವ್ಯ ಪ್ರಭು ಜಿ ಆರ್ ಜೆ,
ಸರ್ಕಾರಿ ನೌಕರರ ಧಾರವಾಡ ಜಿಲ್ಲಾಧ್ಯಕ್ಷರಾದ ಎಸ್ ಎಫ್ ಸಿದ್ದನಗೌಡರ,ಆರ್ ಬಿ ಲಿಂಗದಾಳ, ಮಲ್ಲಿಕಾರ್ಜುನ ಸೋಲಗಿ,ದೇವಿದಾಸ ಶಾಂತಿಕರ ರಾಜಶೇಖರ ಬಾಣದ,ಮಂಜುನಾಥ ಯಡಳ್ಳಿ ಗಿರೀಶ ಚೌಡಕಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಧಾರವಾಡ…..