ಹುಬ್ಬಳ್ಳಿ
ಪಲ್ಸ್ ಪೋಲಿಯೋ ಅಭಿಯಾನವನ್ನು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಯಶಸ್ವಿಯಾಗಿ ಪೂರ್ಣಗೊಳಿಸಿದೆ ಹೌದು ಹುಧಾ ಮಹಾನಗರ ಪಾಲಿಕೆಯ ಆಯುಕ್ತರ ನೇತೃತ್ವದಲ್ಲಿ ನಡೆದ ಲಸಿಕಾ ಕಾರ್ಯಕ್ರಮ ಯಶಸ್ವಿ ಗೊಂಡಿತು
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಫಲ್ಸ್ ಪೋಲಿಯೋ ಅಭಿಯಾನದಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರದ ವ್ಯಾಪ್ತಿಯಲ್ಲಿ ಸುಮಾರು 125000 ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಪಲ್ಸ್ ಪೋಲಿಯೋ ಡ್ರಾಪ್ಸ್ ಹಾಕಲು ನಿರ್ಣಯ ಕೈಗೊಳ್ಳಲಾಗಿತ್ತು
ಸುಮಾರು 480 ಫಲ್ಸ್ ಪೋಲಿಯೋ ಕೇಂದ್ರ ಗಳನ್ನು ತೆರೆಯಲಾಗಿತ್ತು ಅಂದಾಜು 1700 ವೆಕ್ಸಿನೇಟರ್ಸ ಈ ಅಭಿಯಾನದಲ್ಲಿ ಕಾರ್ಯ ನಿರ್ವಹಿಸಿದ್ದರು.ಹಾಗೂ ಈ ಅಭಿಯಾನದಲ್ಲಿ ಕಾರ್ಯನಿರ್ವಹಿಸಲು ಬೇರೆ ಬೇರೆ ಇಲಾಖೆಗಳಿಗೆ ಸೂಚಿಸಲಾಗಿತ್ತು
HESCOM ಇವರಿಗೆ ಅಭಿಯಾನದ ಸಮಯ ದಲ್ಲಿ ವಿದ್ಯುತ್ ವ್ಯತ್ಯಯ ಆಗದಂತೆ ನೋಡಿ ಕೊಳ್ಳಲು ತಿಳಿಸಲಾಗಿತ್ತು, KSRTC ಯವರಿಗೆ ಅಭಿಯಾನದ ಕುರಿತು ಪ್ರಚಾರ ಮಾಡಲು ಹಾಗೂ ಟ್ರಾನ್ಸಿಟ್ ಪೋಲಿಯೋ ಕೇಂದ್ರಗಳನ್ನು ಬಸ ನಿಲ್ದಾಣಗಳಲ್ಲಿ ಹಾಗೂ ರೇಲ್ವೆ ಇಲಾಖೆಗೆ ರೇಲ್ವೆ ನಿಲ್ದಾಣಗಳಲ್ಲಿ ಕಾರ್ಯನಿರ್ವಹಿಸಲು ,DDPI ರವರಿಗೆ ಅಭಿಯಾನದ ದಿನ ಶಾಲೆಗಳನ್ನು ತೆರೆದಿಡುವಂತೆ
ಹಾಗೂ 5ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಪಾಲಕರಿಗೆ ಮಾಹಿತಿ ನೀಡುವಂತೆ ಹಾಗೂ CDPO ರವರಿಗೆ ICDS ಮತ್ತು NON ICDS ಅಂಗನವಾಡಿ ಪ್ರದೇಶಗಳಿಗೆ ಪಲ್ಸ್ ಪೋಲಿಯೋ ಡ್ರಾಪ್ಸ್ ನೀಡುವಂತೆ ಸೂಚಿಸಲಾಗಿತ್ತು. ಹಾಗೂ ಎಲ್ಲಾ ವಲಯ ಸಹಾಯಕ ಆಯುಕ್ತರು ಮತ್ತು ಆರೋಗ್ಯ ನಿರೀಕ್ಷಕರುಗಳಿಗೆ ಮಕ್ಕಳನ್ನು ಕರೆದು ಕೊಂಡು ಬರುವಂತೆ ಹಾಗೂ ಸ್ವಚ್ಚತೆಯನ್ನು ಕಾಪಾಡುವಂತೆ ನಿರ್ದೇಶನ ನೀಡಿಲಾಗಿತ್ತು.
ಅದರಂತೆ ಪ್ರತಿಯೊಬ್ಬರೂ ತಮಗೆ ವಹಿಸಿ ಕೊಟ್ಟ ಕೆಲಸವನ್ನು *ಪಾಲಿಕೆ ಆಯುಕ್ತರಾದ ಡಾ ಈಶ್ವರ ಉಳ್ಳಾಗಡ್ಡಿ ಹಾಗೂ ಆರೋಗ್ಯಾಧಿಕಾರಿ ಡಾ ಶ್ರೀಧರ ದಂಡಪ್ಫನವರರ ಮಾರ್ಗದರ್ಶನದಂತೆ ಅಚ್ಚುಕಟ್ಟಾಗಿ ನಿಭಾಯಿಸಿದ ಎಲ್ಲಾ ಅಧಿಕಾರಿ ಸಿಬ್ಬಂದಿಗಳನ್ನು ಆಯುಕ್ತರು ಅಭಿನಂದಿಸಿದರು .
ಆರೋಗ್ಯಾಧಿಕಾರಿ ಡಾ ಶ್ರೀಧರ ದಂಡಪ್ಫನವರರು ಮಾತನಾಡಿ ಪಾಲಿಕೆಯ ಆಯುಕ್ತರ ಮಾರ್ಗದ ರ್ಶನ ಹಾಗೂ ಆರೋಗ್ಯ ನಿರೀಕ್ಷಕರರ ಕಾರ್ಯ ವೈಖರಿಯಿಂದ ಈ ಅಭಿಯಾನವನ್ನು ಯಶಸ್ವಿ ಯಾಗಿ ಪೂರ್ಣಗೊಳಿಸಿದ್ದೇವೆ ಹಾಗೂಧಾರವಾಡ ನಗರದ ಗುರಿ
33562 ಸಾಧನೆ.33998
ಶೇಕಡಾವಾರು – 101.2 %
ಹುಬ್ಬಳ್ಳಿ ನಗರದ ಪಲ್ಸ್ ಪೋಲಿಯೋ ಗುರಿ – 87767
ಸಾಧನೆ – 89207
ಶೇಕಡಾವಾರು 101.64%ಆಗಿದ್ದು ನಮ್ಮ ಗುರಿ ಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಪಲ್ಸ್ ಪೋಲಿಯೋ ಡ್ರಾಪ್ಸ್ ನೀಡಲಾಗಿದೆ ಎಂದು ಹರ್ಷ ವ್ಯಕ್ತಪಡಿಸಿ ದರು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..