ಬೆಂಗಳೂರು –
7ನೇ ವೇತನ ಆಯೋಗದ ಅವಧಿ ಮತ್ತೆ ವಿಸ್ತರಣೆಯಾಗಿಲ್ಲ – ಇದೊಂದು ಸುಳ್ಳು ಸುದ್ದಿ ಎನ್ನುತ್ತಾ ರಾಜ್ಯ ಸರ್ಕಾರಿ ನೌಕರರ ಸಂಘಟನೆ ನೀಡಿತು ಸ್ಪಷ್ಟನೆ ನಿಟ್ಟಿಸಿರು ಬಿಟ್ಟ ರಾಜ್ಯ ಸರ್ಕಾರಿ ನೌಕರರು
ರಾಜ್ಯದ ಸರ್ಕಾರಿ ನೌಕರರ ವೇತನ ಪರಿಷ್ಕ್ರರಣೆ ವಿಚಾರ ಕುರತಂತೆ ಈಗಾಗಲೇ ರಾಜ್ಯ ಸರ್ಕಾರ 7ನೇ ವೇತನ ಆಯೋಗವನ್ನು ರಚನೆ ಮಾಡಿದೆ. ಈಗಾಗಲೇ ಈ ಒಂದು ಆಯೋಗವು ಕೂಡಾ ವರದಿಯನ್ನು ಕಂಪ್ಲೀಟ್ ಆಗಿ ಸಿದ್ದತೆಯನ್ನು ಮಾಡಿಕೊಂಡಿದ್ದು ಸಲ್ಲಿಕೆ ಮಾಡಲು ಸಿದ್ದವಾಗಿದೆ
ಆದರೆ ರಾಜ್ಯ ಸರ್ಕಾರ ಮಾತ್ರ ಇದನ್ನು ಸ್ವೀಕಾರ ಮಾಡುತ್ತಿಲ್ಲ ಇದೇಲ್ಲದರ ನಡುವೆ ಮಾರ್ಚ್ 15 ಕ್ಕೆ ಈ ಒಂದು ವೇತನ ಆಯೋಗದ ಅವಧಿ ಮುಕ್ತಾಯವಾಗಲಿದ್ದು ಇದರ ನಡುವೆ 7ನೇ ವೇತನ ಆಯೋಗದ ಅವಧಿಯನ್ನು ಮತ್ತೆ ವಿಸ್ತರಣೆ ಮಾಡಲಾಗಿದೆ ಎಂಬ ಸುದ್ದಿ ಹರಿದಾ ಡುತ್ತಿದೆ ಹೌದು ಈ ಕುರಿತಂತೆ ಸಾಮಾಜಿಕ ಜಾಲ ತಾಣಗಳಲ್ಲಿ ಸುದ್ದಿಯೊಂದು ಹರಿದಾಡುತ್ತಿದೆ.
ಮತ್ತೆ 7ನೇ ವೇತನ ಆಯೋಗದ ಅವಧಿಯನ್ನು ಮೂರು ತಿಂಗಳ ಕಾಲ ವಿಸ್ತರಣೆ ಮಾಡಲಾಗಿದೆ ಎಂಬ ಸುದ್ದಿ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿತ್ತು. ಈ ಒಂದು ಸುದ್ದಿಯ ಬೆನ್ನಲ್ಲೇ ರಾಜ್ಯ ಸರ್ಕಾರಿ ನೌಕರರ ಸಂಘಟನೆ ಸ್ಪಷ್ಟನೆ ನೀಡಿದ್ದು ಇದೊಂದು ಸುಳ್ಳು ಸುದ್ದಿಯಾಗಿದ್ದು ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರವು ಈವರೆಗೆ 7ನೇ ವೇತನ ಆಯೋಗದ ಅವಧಿ ಯನ್ನು ವಿಸ್ತರಣೆ ಮಾಡಿಲ್ಲ
ಇದನ್ನು ಸರ್ಕಾರಿ ನೌಕರರು ನಂಬಬಾರದು ಎಂದು ಸ್ಪಷ್ಟನೆ ನೀಡಿದ್ದು ಈ ಒಂದು ಸಂದೇಶ ದಿಂದಾಗಿ ಆತಂಕದಲ್ಲಿದ್ದ ರಾಜ್ಯ ಸರ್ಕಾರಿ ನೌಕರರ ಮೊಗದಲ್ಲಿ ಹೊಸ ಭರವಸೆಯ ನಿರೀಕ್ಷೆಯ ಭಾವನೆಗಳು ಮೂಡಿದ್ದು ನೀತಿ ಸಂಹಿತೆ ಜಾರಿಯಾಗುವ ಮುನ್ನವೇ ಅವಧಿ ಮುಕ್ತಾಯವಾಗುವ ಮುನ್ನವೇ
ರಾಜ್ಯ ಸರ್ಕಾರ ಈ ಕೂಡಲೇ 7ನೇ ವೇತನ ಆಯೋಗದ ವರದಿಯನ್ನು ಸ್ವೀಕಾರ ಮಾಡಿ ಜಾರಿಗೆ ತಗೆದುಕೊಂಡು ಬಂದು ಸಮಸ್ತ ರಾಜ್ಯ ಸರ್ಕಾರಿ ನೌಕರರಿಗೆ ಸಂತೋಷದ ಸುದ್ದಿಯನ್ನು ನೀಡಿಲಿ ಎಂಬೊದು ಸುದ್ದಿ ಸಂತೆ ಬಳಗದ ಆಶಯವಾಗಿದ್ದು ಈ ಒಂದು ನಿರೀಕ್ಷೆಯಲ್ಲಿ ಸಮಸ್ತ ರಾಜ್ಯ ಸರ್ಕಾರಿ ನೌಕರರಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..