ಬೆಂಗಳೂರು –
ಬಾಲಕಿಯ ಜೀವ ಉಳಿಸಿದ ಸಂಚಾರಿ ಪೊಲೀಸ್ ಠಾಣೆಯ ಸಬ್ ಇನ್ಸಪೆಕ್ಟರ್ – ಕರ್ತವ್ಯ ಮುಗಿಸಿ ಕೊಂಡು ಮನೆಯತ್ತ ಹೊರಟಿದ್ದ ಪೊಲೀಸ್ ಅಧಿಕಾರಿ ನಾಗರಾಜ್ ರಿಂದ ಉಳಿಯಿತು ಮಗುವೊಂದರ ಪ್ರಾಣ ಹೌದು
ಪೊಲೀಸರು ಅಂದರೆ ಅವರು ಹಾಗೆ ಹೀಗೆ ಅನ್ನುವವರೇ ಹೆಚ್ಚು.ಹೀಗಿರುವಾಗ ಕರ್ತವ್ಯದ ನಡುವೆಯೂ ಪೊಲೀಸರು ಸಾಮಾಜಿಕ ಜವಾ ಬ್ದಾರಿ ಇದೆ ಎಂಬೊದನ್ನು ಆಗಾಗ್ಗೆ ತೋರಿಸಿಕೊ ಡುತ್ತಾರೆ ಎಂಬೊದಕ್ಕೆ ಬೆಂಗಳೂರಿನ ಸಂಚಾರಿ ಪೊಲೀಸ್ ಠಾಣೆಯ ಸಬ್ ಇನ್ಸಪೆಕ್ಟರ್ ನಾಗರಾಜ್ ಅವರೇ ಸಾಕ್ಷಿ.
ಕರ್ತವ್ಯವನ್ನು ಮುಗಿಸಿಕೊಂಡು ಮನೆಯತ್ತ ಹೊರಟಿದ್ದ ಪೊಲೀಸ್ ಅಧಿಕಾರಿ ನಾಗರಾಜ್ ಅವರಿಗೆ ಮಗವೊಂದು 10 ಅಡಿ ಆಳದ ನೀರಿನ ತೊಟ್ಟಿಗೆ ಬಿದ್ದಿರುವ ವಿಚಾರವನ್ನು ತಿಳಿಸಿದ್ದಾರೆ. ಮಗು ಬಿದ್ದು ಪ್ರಜ್ಞೆಯನ್ನು ತಪ್ಪಿ ಇನ್ನೇನು ಒಂದಿಷ್ಟು ಸಮಯ ಕಳೆದಿದ್ದರೆ ತಡ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದ ಆ ಮಗುವಿನ ಜೀವವನ್ನು ಉಳಿಸಿದ್ದಾರೆ.
ಬ್ಯಾಡರಹಳ್ಳಿಯ ಬಿ.ಇ.ಎಲ್ ಬಡಾವಣೆಯಲ್ಲಿ ಈ ಒಂದು ಘಟನೆ ಕಂಡು ಬಂದಿದೆ.ಕರ್ತವ್ಯ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಸಬ್-ಇನ್‌ಸ್ಪೆಕ್ಟರ್ ನಾಗರಾಜ್ ಅವರು ಅಕಸ್ಮಾತ್ತಾಗಿ 10 ಅಡಿಯ ನೀರಿನ ತೊಟ್ಟಿಗೆ ಜಾರಿ ಬಿದ್ದಿದ್ದ 2.5 ವರ್ಷದ ಮಗುವನ್ನು ರಕ್ಷಿಸಿದ್ದಾರೆ.ಸಮವಸ್ತ್ರದ ಮೇಲೆಯೇ ನೀರಿನ ತೊಟ್ಟಿಗೆ ಇಳಿದು ಮಗುವಿನ ಪ್ರಾಣ ರಕ್ಷಿಸಿ ಪ್ರಜ್ಞೆ ತಪ್ಪಿದ ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮಗುವಿನ ಜೀವ ಉಳಿಸಿದ ಶ್ರೇಯ ನಮ್ಮ ಹೆಮ್ಮೆಯ ಆರಕ್ಷಕರಿಗೆ ಸಲ್ಲುತ್ತದೆ ಎಂಬ ಮೆಚ್ಚು ಗೆಯ ಮಾತುಗಳನ್ನು ಕುಟುಂಬದವರು ಸಾರ್ವ ಜನಿಕರು ಮಾತನಾಡುತ್ತಿದ್ದಾರೆ.ಸಮಯ ಪ್ರಜ್ಞೆ ತೋರಿ ಸಾರ್ವಜನಿಕರ ಹಿತಕ್ಕಾಗಿ ಸದಾಕಾಲವೂ ದುಡಿಯುವ ಅಧಿಕಾರಿಗಳಿಗೆ ನಮ್ಮ ಅನಂತಾ ನಂತ ಧನ್ಯವಾದಗಳು ಎಂದು ಹೇಳಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..