ಬೆಂಗಳೂರು –
ಬದಲಾಯಿತು ಶಾಲಾ ವೇಳಾಪಟ್ಟಿ – ಶಾಲಾ ವೇಳಾಪಟ್ಟಿಯನ್ನು ಸಡಿಲಿಕೆ ಮಾಡಿ ಸುತ್ತೋಲೆ ಹೊರಡಿಸಿತು ಶಿಕ್ಷಣ ಇಲಾಖೆ ಹೌದು
ರಂಜಾನ್ ಆಚರಣೆ ಹಿನ್ನಲೆಯಲ್ಲಿ ಶಿಕ್ಷಣ ಇಲಾಖೆ ರಾಜ್ಯದಲ್ಲಿನ ಉರ್ದು ಶಾಲೆಗಳ ವೇಳಾಪಟ್ಟಿ ಯನ್ನು ಬಿಡುಗಡೆ ಮಾಡಿದೆ.ಹೌದು ಶಾಲಾ ವೇಳಾಪಟ್ಟಿಯಲ್ಲಿ ಕೆಲವೊಂದಿಷ್ಟು ಸಡಿಲಿಕೆ ಯನ್ನು ಮಾಡಿರುವ ರಾಜ್ಯ ಸರ್ಕಾರ ಸುತ್ತೋಲೆ ಯನ್ನು ಹೊರಡಿಸಿದೆ.ಹೌದು ರಂಜಾನ್ ಆಚರಣೆ ಹಿನ್ನೆಲೆಯಲ್ಲಿ ಅಲ್ಪಸಂಖ್ಯಾತ ಶಾಲಾ ವೇಳಾಪಟ್ಟಿ ಸಡಿಲಿಕೆ ಮಾಡಿ ಶಿಕ್ಷಣ ಇಲಾಖೆ ಆದೇಶವನ್ನು ಹೊರಡಿಸಿದೆ.
ರಾಜ್ಯದ ಉರ್ದು ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಶಾಲಾ ಅವಧಿ ಬದಲಾವಣೆ ಮಾಡಿ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ.ಪಾಠದ ಅವಧಿಯಲ್ಲಿ ವ್ಯತ್ಯಯವಾಗಲಿದ್ದು ಇದನ್ನು ಸರ್ಕಾರಿ ರಜಾ ದಿನಗಳಲ್ಲಿ ಹೊಂದಾಣಿಕೆ ಮಾಡಿ ಕೊಳ್ಳುವಂತೆ ಆದೇಶದಲ್ಲಿ ಸೂಚಿಸಲಾಗಿದೆ.
ಇದರ ಅನುಸಾರ ಈ ಆದೇಶವು ರಂಜಾನ್ ತಿಂಗಳಿಗೆ ಮಾತ್ರ ಅನ್ವಯ ಆಗಲಿದೆ. ಶಾಸಕ ರಿಜ್ವಾನ್ ಅರ್ಷದ್ ಸೇರಿ ಸಮುದಾಯದ ಹಲವು ಮುಖಂಡರ ಮನವಿ ಮಾಡಿದ್ದರು.ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ 2023-24ನೇ ಸಾಲಿನ ಶೈಕ್ಷಣಿಕ ವರ್ಷದ ಚಟುವಟಿಕೆಗಳ ಕ್ರಿಯಾ ಯೋಜನೆ ಅನುಷ್ಠಾನಗೊಳಿಸುವ ಬಗ್ಗೆ ನಿರ್ದೇಶನವಿರುತ್ತದೆ.ಅದರಂತೆ ಶಾಲೆಗಳ ದೈನಂದಿನ ಶೈಕ್ಷಣಿಕ ಚಟುವಟಿಕೆಗಳ ನಿರ್ವಹಣೆಗೆ ಸಲಹಾತ್ಮಕ ವೇಳಾಪಟ್ಟಿಯಲ್ಲಿ ಬೆಳಗ್ಗೆ 10 ಗಂಟೆ ಯಿಂದ ಸಂಜೆ 4.20ರವರೆಗೆ ಶಾಲಾ ಅವಧಿ ನಿಗದಿಪಡಿಸಲಾಗಿರುತ್ತದೆ.
ರಂಜಾನ್ ಮಾಸದ ಪ್ರಯುಕ್ತ ರಾಜ್ಯದಲ್ಲಿನ ಉರ್ದು ಮಾಧ್ಯಮದ ಕಿರಿಯ, ಹಿರಿಯ ಮತ್ತು ಪ್ರೌಢಶಾಲೆಗಳನ್ನು ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 12.45 ರವರೆಗೆ ರಂಜಾನ್ ತಿಂಗಳು ಪ್ರಾರಂಭವಾದ ದಿನಾಂಕದಿಂದ ಒಂದು ತಿಂಗಳ ವರೆಗೆ ಮಾತ್ರ ನಡೆಸಲು ಈ ಹಿಂದೆ ದಿನಾಂಕ 31/10/2002ರಲ್ಲಿ ಹೊರಡಿಸಲಾಗಿದ್ದ ಸ್ಟ್ಯಾಂಡಿಂಗ್ ಆರ್ಡರ್ ಅನ್ನು ಯಥಾವತ್ತು ಹೊರಡಿಸಲು
ಸ್ವೀಕೃತವಾದ ಮನವಿಗಳನ್ನು ನಿಯಮಾನುಸಾರ ಪರಿಶೀಲಿಸಿ ಅಗತ್ಯ ಕ್ರಮವಹಿಸುವಂತೆ ಸೂಚಿಸ ಲಾಗಿರುತ್ತದೆ.2023-24ನೇ ಶೈಕ್ಷಣಿಕ ಸಾಲಿನಲ್ಲಿ ರಾಜ್ಯದ ಎಲ್ಲ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಉರ್ದು ಮಾಧ್ಯಮದ ಕಿರಿಯ, ಹಿರಿಯ ಹಾಗೂ ಪ್ರೌಢಶಾಲೆಗಳು ರಂಜಾನ್ ತಿಂಗಳು ಪ್ರಾರಂಭವಾದ ದಿನಾಂಕದಿಂದ ದಿನಾಂಕ 10/04/2024ರವರೆಗೆ ಮಾತ್ರ ಶಾಲಾ ಅವಧಿಯ ವೇಳಾಪಟ್ಟಿಯ ಬದಲಾವಣೆಯ ವಿವರಗಳು ಎಂದು ಮಾಹಿತಿ ನೀಡಲಾಗಿದೆ.
ಶಾಲಾ ಸಮಯದ ಪಟ್ಟಿ ಇಂತಿದೆ
ಬೆಳಗ್ಗೆ 8 ಗಂಟೆಯಿಂದ 8.40ರವರೆಗೆ
8.40 ರಿಂದ 9.20 ರವರೆಗೆ
9.20 ರಿಂದ 10.00 ರವರೆಗೆ
10.00 ರಿಂದ 10.15 ರವರೆಗೆ ವಿರಾಮ
10.15 ರಿಂದ 10.55 ರವರೆಗೆ
10.55 ರಿಂದ 11.35 ರವರೆಗೆ
11.35 ರಿಂದ 12.10 ರವರೆಗೆ
12.10 ರಿಂದ 12.45 ರವರೆಗೆ
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..