ಬೆಂಗಳೂರು –
ಬೇಸಿಗೆ ರಜೆಯಲ್ಲಿ ಶಿಕ್ಷಕರಿಗೆ ಹೊಸದೊಂದು ಕಾರ್ಯಕ್ರಮ ಆರಂಭ ಮಾಡಲು ಮುಂದಾದ ಶಿಕ್ಷಣ ಸಚಿವರು – ಬೇಸಿಗೆ ರಜೆಯಲ್ಲಿಯೇ ಆರಂಭವಾಗಲಿದೆ ನೂತನ ಯೋಜನೆ ಶಿಕ್ಷಕ ರಿಗಾಗಿ ಹೊಸದೊಂದು ಪ್ಲಾನ್ ಆರಂಭಕ್ಕೆ ಮುಂದಾದ ಶಿಕ್ಷಣ ಸಚಿವರು ಹೌದು
ರಾಜ್ಯದಲ್ಲಿನ ಸರ್ಕಾರಿ ಕನ್ನಡ ಶಾಲೆಗಳ ಗುಣ ಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಶಿಕ್ಷಣ ಸಚಿವರು ಹೊಸದೊಂದು ಯೋಜನೆ ಆರಂಭಕ್ಕೆ ಮುಂದಾಗಿದ್ದಾರೆ.ಹೌದು ಪ್ರತಿ ವರ್ಷ ಬೇಸಿಗೆ ರಜೆ ಬರುತ್ತಿದ್ದಂತೆ ಈ ಒಂದು ಅವಧಿಯಲ್ಲಿ ರಾಜ್ಯದ ಲ್ಲಿನ 20 ಸಾವಿರ ಶಿಕ್ಷಕರಿಗೆ ವಿಶೇಷವಾದ ತರಬೇತಿಯನ್ನು ಮಾಡಲಾಗುತ್ತದೆ ಎಂದಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಅವರು ಪ್ರತಿ ವರ್ಷ 20ಸಾವಿರ ಶಿಕ್ಷಕರಿಗೆ ಬೇಸಿಗೆ ಅವಧಿಯಲ್ಲಿ ತರಬೇತಿ ನೀಡಲು ಯೋಜಿಸಿದ್ದೇವೆ ಇದರಿಂದಾಗಿ ಕನ್ನಡ ಶಾಲೆಗಳಲ್ಲೂ ಗುಣಮಟ್ಟ ಕಾಯ್ದುಕೊಳ್ಳ ಲು ಅನುಕೂಲವಾಗಲಿದೆ ಎಂದರು.ಸರ್ಕಾರಿ ಶಾಲೆಗಳಲ್ಲಿರುವ ಶಿಕ್ಷಕರು ಬುದ್ಧಿವಂತರಾಗಿದ್ದು ಅವರಿಂದ ಬೋಧನೆ ಕೆಲಸವನ್ನು ನಾವು ಸರಿಯಾಗಿ ತೆಗೆದಿಲ್ಲ.
ಅದರಿಂದಾಗಿ ಕಲ್ಯಾಣದಲ್ಲಿ ಶಿಕ್ಷಣ ತೆವಳುತ್ತಿದೆ ಈಗ ಶಿಕ್ಷಕರ ಕ್ಷಮತೆ ಬಳಕೆ ಮಾಡಿಕೊಂಡು ಕನ್ನಡ,ಕೆಪಿಎಸ್ ಮತ್ತು ಆದರ್ಶ ಶಾಲೆಗಳನ್ನು ಬಲಗೊಳಿಸುತ್ತಿದ್ದೇವೆ.ಫಲಿತಾಂಶದಲ್ಲಿ ಈ ಭಾಗದ ಜಿಲ್ಲೆಗಳು ಮೇಲೇರುವಂತೆ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಹೀಗಾಗಿ ನಾವು ಈ ವರ್ಷದಿಂದಲೇ ಬೇಸಿಗೆ ರಜೆಯಲ್ಲಿ ಈ ಒಂದು ಹೊಸ ಪ್ರಯೋಗವನ್ನು ಆರಂಭ ಮಾಡಿ ಶಿಕ್ಷಕ ರನ್ನು ಮತ್ತಷ್ಟು ಆಕ್ಟಿವ್ ಮಾಡಿ ಶೈಕ್ಷಣಿಕ ಅಭಿವೃದ್ದಿಗೆ ಉತ್ತೇಜನವನ್ನು ನೀಡುವ ನಿಟ್ಟಿನಲ್ಲಿ ಈ ಒಂದು ಹೊಸ ಪ್ಲಾನ್ ಆರಂಭ ಮಾಡಲಾಗುತ್ತದೆ ಎಂದರು.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..