ವಿಜಯಪುರ –
ಇನ್ನೂ ಕೈ ಸೇರದ ಶಿಕ್ಷಕರ ಸಂಬಳ – BEO,ಕಚೇರಿ ಯ ಸಿಬ್ಬಂದಿ ಗಳ ನಡುವಿನ ಜಗಳದಿಂದ ಸಂಬಳ ಒಲ್ಲದೆ ಪರದಾಡುತ್ತಿರುವ ಶಿಕ್ಷಕರು ಹೌದು ಇಂತಹ ದೊಂದು ಪರಿಸ್ಥಿತಿ ಯನ್ನು ವಿಜಯಪುರ ಗ್ರಾಮೀಣ ಶಿಕ್ಷಕರು ಅನುಭವಿ ಸುತ್ತಿದ್ದಾರೆ.
ಶಿಕ್ಷಕರು ನೀಡಿದ ಟ್ಯಾಕ್ಸ ಮಾಹಿತಿ ಸರಿಯಿಲ್ಲ ವೆಂದು ಪ್ರತಿ ಕರಣಿಕರು ಮುಚ್ಚಳಿಕೆ ಬರೆದು ಕೊಟ್ಟರೆ ಮಾತ್ರ,ಕರಣಿಕರು ತಯಾರಿಸಿದ ಶಿಕ್ಷಕರ ವೇತನ ಬಿಲ್ಲುಗಳಿಗೆ ಸಹಿ ಮಾಡುವದಾಗಿ ಬಿಇಓ ಪಟ್ಟು ಹಿಡಿದಿದ್ದಾರೆ
ಈ ಒಂದು ಪರಿಣಾಮವಾಗಿ ಕಳೆದ 10-12 ದಿನಗಳಿಂದ ವಿಜಯಪುರ ಗ್ರಾಮೀಣವಲಯದ ಶಿಕ್ಷಕರು ವೇತನಕ್ಕಾಗಿ ಪರದಾಡುತ್ತಿದ್ದಾರೆ. ಸರ್ಕಾರದಿಂದ ಬಜೆಟ್ ಒದಗಿಸಲಾಗಿದೆ. ಹಣಕಾಸಿನ ತೊಂದರೆಯಿಲ್ಲ ಆದರೆ ಬಿಇಓ ಹಾಗೂ ಸಿಬ್ಬಂದಿಗಳ ಪರಸ್ಪರ ಕಚ್ಚಾಟದಿಂದ ಗಂಡ-ಹೆಂಡತಿ ಜಗಳದಲ್ಲಿ ಕೂಸು ಅನುಭವಿ ಸುವ ಬಡವಾದಂತೆ, ಶಿಕ್ಷಕರ ಸ್ಥಿತಿ ಉಂಟಾಗಿದೆ.
ಪ್ರತಿ ವರ್ಷ ಪೆಬ್ರವರಿಯಲ್ಲಿ ಟ್ಯಾಕ್ಸ್ ಸಂಭಂದಿಸಿ ದಂತೆ ಪಾರ್ಮ ನಂ-16 ಸಲ್ಲಿಸಬೇಕಾಗುವದು ಅದನ್ನು ಆಧರಿಸಿ ಒಂದು ವರ್ಷದ ಟ್ಯಾಕ್ಸ್ ಕಟಾವಣೆ ಮಾಡುವರು.ಶಿಕ್ಷಕರು ವೈಯಕ್ತಿಯ ವಾಗಿ ಆದಾಯದ ಕುರಿತು ನೀಡಿದ ಮಾಹಿತಿಗೆ ನಾವ್ಯಾಕೆ ಜವಾಬ್ದಾರಿ ವೆಂಬುದು ಕ್ಲರ್ಕ್ ಗಳ ವಾದ.
ನೀವು ಜವಾಬ್ದಾರಿ ವಹಿಸಿರುವದಾಗಿ ಮುಚ್ಚಳಿಕೆ ಬರೆದುಕೊಟ್ಟರೆ ಮಾತ್ರ ಶಿಕ್ಷಕರ ಕುರಿತು ಸಿಬ್ಬಂದಿ ತಯಾರಿಸಿದ ವೇತನ ಬಿಲ್ಲುಗಳಿಗೆ ಸಹಿ ಮಾಡು ವು ದಾಗಿ ಬಿಇಒ ಹಠ.ಬೀದಿ ರಂಪಾಟದ ಪರಿ ಣಾಮ ಜಿಲ್ಲೆಯಲ್ಲಿ ಗ್ರಾಮೀಣವಲಯದ ಶಿಕ್ಷಕರು ವೇತನವಿಲ್ಲದೆ ಪರದಾಡುತ್ತಿದ್ದಾರೆ.
ಜಿಲ್ಲೆಯ ವಿವಿಧ ತಾಲೂಕಿನ ಶಿಕ್ಷಕರು ಇಗಾಗಲೇ ವೇತನ ಪಡೆದುಕೊಂಡು 8-10 ದಿನಗಳಾಗಿದ್ದು ಗ್ರಾಮೀಣ ಪ್ರದೇಶದ ಶಿಕ್ಷಕರ ನರಕಯಾತನೆ ಬಿಇಓ ಮತ್ತು ಸಿಬ್ಬಂದಿ ಗಳ ಚೆಲ್ಲಾಟದಿಂದಾಗಿ ಸಂಬಳವಿಲ್ಲದೆ ಪರದಾಡುತ್ತಿದ್ದಾರೆ.
ಸುದ್ದಿ ಸಂತೆ ನ್ಯೂಸ್ ವಿಜಯಪುರ……