‘ತಂದೆಯಾದ’ ಅಂತರಾಷ್ಟ್ರೀಯ ಕುಸ್ತಿ ಪಟು ‘ರಫೀಕ್ ಹೋಳಿ’ – ಪೈಲ್ವಾನ್ ಮಗನ ಆಗಮನ

Suddi Sante Desk

ಧಾರವಾಡ –

ಅಂತರರಾಷ್ಟ್ರೀಯ ಕುಸ್ತಿ ಪಟು ದೇಶದ ಸೈನಿಕ ಧಾರವಾಡದ ಹೆಮ್ಮೆಯ ಪೈಲ್ವಾನ್ ರಫೀಕ್ ಹೊಳಿ ತಂದೆಯಾಗಿದ್ದಾರೆ.

ಧಾರವಾಡ ಜಿಲ್ಲೆಯ ಸಿಂಗನಹಳ್ಳಿ ನಿವಾಸಿಯಾಗಿ ರುವ ಮಹಮ್ಮದ್ ರಫೀಕ್ ಹೋಳಿ ಪೂನಾದಲ್ಲಿ ಸಧ್ಯ ಭಾರತೀಯ ಸೈನ್ಯ ದಲ್ಲಿ ಇದ್ದಾರೆ‌.

ಈಗಾಗಲೇ ದೇಶ ವಿದೇಶಗಳಲ್ಲಿ ಕುಸ್ತಿ ಪಂದ್ಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸಾಧನೆ ಮಾಡಿ ಹತ್ತು ಹಲವಾರು ಪ್ರಶಸ್ತಿಯನ್ನು ಮಡಿಲಿಗೆ ಹಾಕಿಕೊಂಡು ನಾಡಿನ ದೇಶದ ತವರಿನ ಕೀರ್ತಿ ಪತಾಕೆಯನ್ನು ಬಾನೆತ್ತರಕ್ಕೆ ಹಾರಿಸಿದ್ದಾರೆ ರಫೀಕ್ ಹೋಳಿ

ಅಲ್ಲದೇ ಪ್ರತಿಷ್ಠಿತ ಏಕಲವ್ಯ ಪ್ರಶಸ್ತಿ ವಿಜೇತರಾಗಿದ್ದು ಇವರು ಈಗ ತಂದೆಯಾಗಿದ್ದಾರೆ. ಮಗ ಹುಟ್ಟಿದ್ದು ಭಾರತೀಯ ಸೈನಿಕ ಕುಸ್ತಿ ಪಟು ರಫೀಕ್ ಹೋಳಿಗೆ ಪೈಲ್ವಾನ್ ಬಂದಿದ್ದಾರೆ ಆದರೆ ನೋಡಬೇಕು ಅಂದರೆ ಸಮಯವಿಲ್ಲದ ಪರಿಸ್ಥಿತಿ ಇವದ್ದಾಗಿದೆ.

ಒಂದು ವಾರದ ಹಿಂದೆಯಷ್ಟೇ ಮಗ ಹುಟ್ಟಿದ್ದು ಇದರಿಂದ ಸಖತ್ ಸಂತಸಗೊಂಡಿದ್ದಾರೆ ರಫೀಕ್ ಹೋಳಿ. ಮಗನನ್ನು ನೋಡಲು ಬರಬೇಕು ಅಂದರೆ ಇದೆ ಫೆಬ್ರವರಿ 20 ಗೆ ರಾಷ್ಟ ಮಟ್ಟದ ಕುಸ್ತಿ ಪಂದ್ಯಾವಳಿ ಹೀಗಾಗಿ ಅದರಲ್ಲಿ ಬ್ಯೂಜಿಯಾಗಿದ್ದಾರೆ.

ಒಂದು ಕಡೆ ಬಿಡುವಿಲ್ಲದ ಕರ್ತವ್ಯ ಮತ್ತೊಂದು ಕಡೆ ಕುಸ್ತಿ ಪಂದ್ಯದ ತಯಾರಿ ಹೀಗಾಗಿ ಬರಲು ಸಮಯವಿಲ್ಲ ಇವೆಲ್ಲದರ ನಡುವೆ ವಿಡಿಯೋ ಕಾಲ್ ಮಾಡಿ ಮೊಬೈಲ್ ನಲ್ಲಿಯೇ ಮಗನನ್ನು ನೋಡಿ ಕಣ್ತುಂಬಿಕೊಂಡಿದ್ದಾರೆ

ಇ‌ನ್ನೂ ರಫೀಕ್ ಹೋಳಿ ತಂದೆಯಾದ ಸುದ್ದಿ ತಿಳಿದು ಹೆಸರಾಂತ ದೇಶದ ಕುಸ್ತಿ ಪಟುಗಳಾದ ಸುಶೀಲ ಕುಮಾರ್ ಸೇರಿದಂತೆ ಹಲವರು ರಫೀಕ್ ಹೋಳಿ ಅವರಿಗೆ ಅಭಿನಂದನೆಗಳನ್ನು ಹೇಳಿದ್ದಾರೆ.

https://youtu.be/wXZHncE_7Y0

ಅಲ್ಲದೆ ಪೂನಾದಲ್ಲಿ ರಫೀಕ್ ಹೋಳಿ ತಮ್ಮೆಲ್ಲಾ ಗೆಳೆಯರಿಗೆ ಸಿಹಿ ಹಂಚಿ ಖುಷಿಯನ್ನು ಹಂಚಿಕೊಂಡರು

ಇತ್ತ ಗ್ರಾಮದಲ್ಲೂ ಕೂಡಾ ಕುಟುಂಬದವರು ಕೂಡಾ ಮನೆಗೆ ಮತ್ತೊಬ್ಬ ಪೈಲ್ವಾನ್ ಬಂದ ಖುಷಿಯಿಂದ ಊರಿನ ತುಂಬೆಲ್ಲಾ ಸಿಹಿ ಹಂಚಿದರು

ಒಂದು ಕಡೆ ಊರಿನ ಹೆಮ್ಮೆಯ ರಫೀಕ್ ಗೆ ತಂದೆಯಾದ ಖುಷಿ ಮನೆಗೆ ಮತ್ತೊಬ್ಬ ಪೈಲ್ವಾನ್ ಬಂದ ಸಂತಸ ಕಣ್ಣು ತುಂಬಾ ನೋಡಬೇಕು ಎಂದರೆ ಮತ್ತೊಂದು ಕುಸ್ತಿ ಪಂದ್ಯದ ತಯಾರಿ ಹೀಗಾಗಿ ವಿಡಿಯೋ ಕಾಲ್ ನಲ್ಲಿಯೇ ದಿನ ನೋಡಿದ್ದಾರೆ‌. ಏನೇ ಆಗಲಿ ತಂದೆಯಾದ ನಾಡಿನ ಹೆಸರಾಂತ ಕುಸ್ತಿ ಪಟು ದೇಶದ ಹೆಮ್ಮೆಯ ಪೈಲ್ವಾನ್ ರಫೀಕ್ ಹೋಳಿ ಗೆ ಅಭಿನಂದನೆಗಳು ಸಧ್ಯ ಮತ್ತೊಂದು ದೊಡ್ಡ ಕುಸ್ತಿ ಪಂದ್ಯದ ತಯಾರಿಯಲ್ಲಿರುವ ಇವರು ಮತ್ತೊಂದು ಪ್ರಶಸ್ತಿ ಗೆದ್ದುಕೊಂಡ ಬಂದು ಮಗನನ್ನು ಬೇಗನೆ ನೋಡಿ ಖುಷಿ ಪಡಲಿ .

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.