ಬೆಂಗಳೂರು –
ಮತ್ತೆ ಗೊಂದಲದಲ್ಲಿ 5,8,9ನೇ ತರಗತಿ ಪರೀಕ್ಷೆ ಗಳು – ಆಡೋಣಾ ಬಾ ಕೆಡಿಸೋಣಾ ಬಾ ಪರೀಕ್ಷೆಯಲ್ಲಿ ಗೊಂದಲವೊ ಗೊಂದಲ ಪರೀಕ್ಷೆ ಮುಂದೂಡಿಕೆ ಶಿಕ್ಷಣ ಇಲಾಖೆ ಆದೇಶ ಹೌದು
ಹೌದು 5,8 ಮತ್ತು 9ನೇ ತರಗತಿಯ ಮೌಲ್ಯಾಂ ಕನ ಪರೀಕ್ಷೆಗಳನ್ನು ಶಾಲಾ ಶಿಕ್ಷಣ ಇಲಾಖೆ ಮತ್ತೆ ಮುಂದೂಡಿದೆ.ಹೌದು ಸರ್ವೋಚ್ಚ ನ್ಯಾಯಾಲ ಯದ ಆದೇಶದಂತೆ 5, 8, 9ನೇ ತರಗತಿ ಪರೀಕ್ಷೆ ನಡೆಸಲು ತಡೆ ನೀಡಿದ ಹಿನ್ನೆಲೆಯಲ್ಲಿ ಈಗಾಗಲೇ ನಡೆಯುತ್ತಿರುವ ಪರೀಕ್ಷೆಗಳನ್ನು ಶಾಲಾ ಶಿಕ್ಷಣ ಇಲಾಖೆ ಮುಂದೂಡಿದೆ. ಶಾಲಾ ಶಿಕ್ಷಣ ಇಲಾಖೆ ಆಯುಕ್ತರಾದ ಕಾವೇರಿ ಅವರು ಪರೀಕ್ಷೆ ಮಂದೂಡಿ ಆದೇಶ ಹೊರಡಿಸಿದ್ದಾರೆ.
ಮಾರ್ಚ್ 11 ರಿಂದ 5, 8, 9ನೇ ತರಗತಿ ಮಕ್ಕಳಿಗೆ ರಾಜ್ಯಾದ್ಯಂತ ಮೌಲ್ಯಾಂಕನ ಪರೀಕ್ಷೆ ಆರಂಭ ವಾಗಿತ್ತು.ದಿಢೀರ್ ಬೆಳವಣಿಗೆಯಲ್ಲಿ ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ಮುಂದೂಡಲಾಗಿದೆ.ಈಗಾಗಲೇ ಮಕ್ಕಳು ಪ್ರಥಮ ಭಾಷೆ ಮತ್ತು ದ್ವಿತೀಯ ಭಾಷೆ ಪರೀಕ್ಷೆ ಗಳನ್ನು ಬರೆದಿದ್ದಾರೆ.ಈ ಹಂತದಲ್ಲಿ ಪರೀಕ್ಷೆ ಗಳನ್ನು ಮತ್ತೆ ಮುಂದೂಡಲಾಗಿದ್ದು ಪೋಷಕರು ಮತ್ತು ವಿದ್ಯಾರ್ಥಿಗಳಲ್ಲಿ ಗೊಂದಲ ಉಂಟಾಗಿದೆ
ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದ ಹಿನ್ನೆಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ರಾಜ್ಯ ಪಠ್ಯಕ್ರಮದ ಸರ್ಕಾರಿ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ಮಾ 13 ರಿಂದ ನಡೆಯಬೇಕಿದ್ದ 5,8 ಮತ್ತು 9ನೇ ತರಗತಿ ಬೋರ್ಡ್ ಪರೀಕ್ಷೆಗಳನ್ನು ಮುಂದೂಡಲಾಗಿದ್ದು ಏನೇನಾಗುತ್ತದೆ ಎಂಬೊದನ್ನು ಕಾದು ನೋಡ ಬೇಕಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..