ಬೆಂಗಳೂರು –
CM ಭೇಟಿಯಾಗಿ ಅಭಿನಂದನೆಗಳನ್ನು ಸಲ್ಲಿಸಿದ ರಾಜ್ಯ ಸರ್ಕಾರಿ ನೌಕರರ ನಿಯೋಗ ರಾಜ್ಯಾಧ್ಯಕ್ಷ ಷಡಾಕ್ಷರಿಯವರ ನೇತೃತ್ವದಲ್ಲಿ ನಾಡದೊರೆಗೆ ಅಭಿನಂದನೆಗಳ ಸಲ್ಲಿಕೆ ಹೌದು ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆ ಹೆಚ್ಚಿಳ ಮಾಡಿದ ಹಿನ್ನೆಲೆ ಯಲ್ಲಿ ಮುಖ್ಯಮಂತ್ರಿ ಯವರನ್ನು ಭೇಟಿಯಾಗಿ ಅಭಿನಂದನೆಗಳನ್ನು ಸಲ್ಲಿಸಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ರಾದ ಸಿ,ಎಸ್ ಷಡಾಕ್ಷರಿ ಹಾಗೂ ಸಂಘದ ಪದಾಧಿಕಾರಿಗಳು ಬೆಂಗಳೂರಿನಲ್ಲಿ ಮುಖ್ಯ. ಮಂತ್ರಿಗಳನ್ನು ಗೃಹ ಕಚೇರಿಯಲ್ಲಿ ಭೇಟಿ ಮಾಡಿ ಒಂದೇ ದಿನದಲ್ಲಿ 3.75 % ತುಟಿ ಭತ್ಯೆ ಮಂಜೂರು ಮಾಡಿ ಆದೇಶ ಹೊರಡಿಸಿದ್ದಕ್ಕೆ ಸಮಸ್ತ ಸರ್ಕಾರಿ ನೌಕರರ ಪರವಾಗಿ ಅಭಿನಂದನೆ ಸಲ್ಲಿಸಿದರು
ರಾಜ್ಯ 7ನೇ ವೇತನ ಆಯೋಗದ ವರದಿಯನ್ನು ಪಡೆದು ಲೋಕಸಭಾ ಚುನಾವಣೆ ಪೂರ್ವದಲ್ಲಿ ಜಾರಿಗೊಳಿಸಲು ರಾಜ್ಯಾಧ್ಯಕ್ಷರು ಮನವಿ ಮಾಡಿದರು.ಆಯೋಗದ ಅಧ್ಯಕ್ಷರಾದ ಸುಧಾಕರ್ ರಾವ್ ಅವರೊಂದಿಗೆ ಇಂದು ಮಾತನಾಡಿ ವರದಿ ಪಡೆದುಕೊಂಡು ಅನುಷ್ಠಾನ ಗೊಳಿಸುವ ಭರವಸೆ ನೀಡಿದರು.
ಎರಡು ದಿನದೊಳಗಾಗಿ ಸರ್ಕಾರಕ್ಕೆ ವೇತನ ಆಯೋಗದ ವರದಿ ಸಲ್ಲಿಕೆಯಾಗುವ ವಿಶ್ವಾಸ ವಿದೆ. ಸಂಘಟನೆ ಸದೃಢವಾಗಿದೆ, ನೌಕರರ ಪರವಾಗಿದೆ ಎಂದು ಷಡಾಕ್ಷರಿ ಯವರು ಹೇಳಿದರು
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..