ಬೆಂಗಳೂರು –
ಅವಧಿ ಮುಗಿಯುತ್ತಾ ಬಂದರು 7ನೇ ವೇತನ ಆಯೋಗದ ಬಗ್ಗೆ ಮಾತೆ ಇಲ್ಲ – ಮೌನವಾಗಿದ್ದಾರೆ ಮುಖ್ಯಮಂತ್ರಿ ನಿರೀಕ್ಷೆಯಲ್ಲಿ ರಾಜ್ಯ ಸರ್ಕಾರಿ ನೌಕರರು ಹೌದು
ರಾಜ್ಯದ ಸರ್ಕಾರಿ ನೌಕರರಿಗೆ ಮತ್ತೆ ತುಟ್ಟಿ ಭತ್ಯೆಯನ್ನು ಹೆಚ್ಚಳ ಮಾಡಿದ ಬೆನ್ನಲ್ಲೇ ರಾಜ್ಯ ಸರ್ಕಾರದಿಂದ ನೌಕರರು ಮತ್ತೊಂದು ದೊಡ್ಡ ನಿರೀಕ್ಷೆಯಲ್ಲಿದ್ದಾರೆ.ಹೌದು ಸಮಸ್ತ ಸರ್ಕಾರಿ ನೌಕರರ ವೇತನ ಪರಿಷ್ಕ್ರರಣೆಗಾಗಿ 7ನೇ ವೇತನ ಆಯೋಗವನ್ನು ಈಗಾಗಲೇ ರಚನೆ ಮಾಡಲಾ ಗಿದೆ
ಆಯೋಗವು ಕೂಡಾ ವೇತನ ಪರಿಷ್ಕ್ರರಣೆ ಕುರಿತಂತೆ ಸಂಪೂರ್ಣವಾಗಿ ಮಾಹಿತಿಯೊಂದಿಗೆ ವರದಿಯನ್ನು ಸಿದ್ದ ಮಾಡಿದೆ.ಇದರ ನಡುವೆ ಸಧ್ಯ ಈಗಾಗಲೇ ಎರಡು ಬಾರಿ ಆಯೋಗದ ಅವಧಿ ಯನ್ನು ವಿಸ್ತರಣೆ ಮಾಡಿದ್ದು ಮಾರ್ಚ್ 15 ಕ್ಕೆ ಅವಧಿ ಕೂಡಾ ಮುಕ್ತಾಯವಾಗಲಿದ್ದು ಅವಧಿ ಮುಗಿಯುತ್ತಾ ಬಂದರು ಕೂಡಾ ಈವರೆಗೆ 7ನೇ ವೇತನ ಆಯೋಗದ ಮಾತೆ ಇಲ್ಲ
ಅವಧಿ ಮುಗಿಯುವ ಮುನ್ನವೇ ರಾಜ್ಯ ಸರ್ಕಾರಕ್ಕೆ ಆಯೋಗವು ವರದಿಯನ್ನು ಸಲ್ಲಿಕೆ ಮಾಡಿದರೆ ನೀತಿ ಸಂಹಿತೆ ಜಾರಿಯಾಗುವ ಮುನ್ನವೇ ವರದಿಯನ್ನು ಸ್ವೀಕಾರ ಮಾಡಿ ಜಾರಿಗೆ ತಗೆದುಕೊಂಡು ಬರಲಿ ಎಂಬ ದೊಡ್ಡ ನಿರೀಕ್ಷೆ ಯಲ್ಲಿ ರಾಜ್ಯ ಸರ್ಕಾರಿ ನೌಕರರಿದ್ದಾರೆ ಆದರೆ ರಾಜ್ಯ ಸರ್ಕಾರ ಮುಖ್ಯಮಂತ್ರಿ ಸೇರಿದಂತೆ ಸರ್ವರೂ ಕೂಡಾ ಮೌನವಾಗಿದ್ದಾರೆ
ಹೀಗಾಗಿ ನೌಕರರಿಗೆ ತುಟ್ಟಿ ಭತ್ಯೆಯನ್ನು ಹೆಚ್ಚಳ ಮಾಡಿರುವ ರಾಜ್ಯ ಸರ್ಕಾರ ಒಂದು ಗುಡ್ ನ್ಯೂಸ್ ನೀಡಿದೆ ಎಂದುಕೊಂಡರೆ 7ನೇ ವೇತನ ಆಯೋಗದ ನಿರೀಕ್ಷೆಯಲ್ಲಿರುವ ರಾಜ್ಯ ಸರ್ಕಾರಿ ನೌಕರರಿಗೆ ಮುಂದೇನು ಎಂಬ ದೊಡ್ಡ ಆತಂಕ ಎದುರಾಗಿದ್ದು ಅನಿವಾರ್ಯವಾಗಿ ಹೋರಾಟದ ಹಾದಿ ಹಿಡಿಯುವ ಮುನ್ನವೇ ಮುಖ್ಯಮಂತ್ರಿಯ ವರು ಈ ಕೂಡಲೇ ಆಯೋಗದಿಂದ ವರದಿ ಯನ್ನು ತರಿಸಿಕೊಂಡು ಜಾರಿಗೆ ಮಾಡಬೇಕಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..