ರಾಜ್ಯಮಟ್ಟದ ಭಿತ್ತಿಪತ್ರ ಚಿತ್ರಕಲಾ ಸ್ಪರ್ಧೆಯಲ್ಲಿ ಧಾರವಾಡದ ಲೋಹಿತ್ ಹಿರೇಮಠ ಪ್ರಥಮ

Suddi Sante Desk

ಧಾರವಾಡ –

ಭಾರತ ಚುನಾವಣಾ ಆಯೋಗದಿಂದ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಮತದಾರರ ಜಾಗೃತಿ ಕುರಿತ ಭಿತ್ತಿಪತ್ರ ಚಿತ್ರಕಲಾ ಸ್ಪರ್ಧೆಯಲ್ಲಿ ಧಾರವಾಡ ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯ ವಿದ್ಯಾರ್ಥಿ ಲೋಹಿತ್ ಹಿರೇಮಠ ಪ್ರಥಮ ಸ್ಥಾನ ಪಡೆದಿದ್ದಾನೆ.

ಬೆಂಗಳೂರಿನ ಪುಟ್ಟಣ್ಣ ಚೆಟ್ಟಿ ಪುರಭವನದಲ್ಲಿ ಜ.25 ರ ರಾಷ್ಟ್ರೀಯ ಮತದಾರರ ದಿನಾಚರಣೆ ನಿಮಿತ್ಯ ರಾಜ್ಯಚುನಾವಣಾ ಆಯೋಗ ಆಯೋಜಿಸಿದ್ದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿಜೇತ ಲೋಹಿತ್ ಹಿರೇಮಠ ಅವರಿಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ ಅವರು ಪ್ರಶಸ್ತಿ ಪ್ರಧಾನ ಮಾಡಿದರು.

ಈ ಸಂದರ್ಭದಲ್ಲಿ ರಾಜ್ಯ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತರಾದ ಡಾ:ಸಂಜೀವಕುಮಾರ್, ಬಿಬಿಎಂಪಿ ಆಯುಕ್ತ ಎಂ.ಮಂಜುನಾಥ, ಧಾರವಾಡ ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯದ ಮುಖ್ಯಸ್ಥ ಡಾ ಬಸವರಾಜ ಕುರಿಯವರ, ಪ್ರಶಸ್ತಿ ವಿಜೇತ ಲೋಹಿತ ಹಿರೇಮಠ ತಂದೆ ಮಂಜುನಾಥ ಹಿರೇಮಠ ಉಪಸ್ಥಿತರಿದ್ದರು.

ಇನ್ನೂ ಪ್ರಮುಖವಾಗಿ ಈಗಷ್ಟೇ ಧಾರವಾಡದ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಪ್ರವೇಶವನ್ನು ಪಡೆದುಕೊಂಡು ಮೊದಲ ಸ್ಪರ್ಧೆಯಲ್ಲಿ ಬಹುಮಾನ ಪಡೆದಿದ್ದು ಸಂತೋಷವಾಗಿದ್ದು ಇನ್ನೂ ಪ್ರಶಸ್ತಿ ಸ್ವೀಕರಿಸು ಮುನ್ನ ಕಾರ್ಯಕ್ರಮದ ವೇದಿಕೆಯನ್ನು ನಮಸ್ಕಾರ ಮಾಡಿ ಹತ್ತಿದ್ದು ವಿಶೇಷವಾಗಿ ಕಂಡು ಬಂದಿತು ‌

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.