ಬೆಂಗಳೂರು –
6 ತಿಂಗಳ ವರದಿಗೆ ಒಂದೂವರೆ ವರ್ಷ ತಗೆದು ಕೊಂಡ 7ನೇ ವೇತನ ಆಯೋಗ – 2022 ರಲ್ಲಿ ರಚನೆಗೊಂಡು 2024 ರಲ್ಲಿ ವರದಿ ಸಲ್ಲಿಕೆ ಮಾಡುತ್ತಿರುವ 7ನೇ ವೇತನ ಆಯೋಗ
ಹೌದು ಕೊನೆಗೂ ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕ್ರರಣೆ ಗೆ ರಚನೆಗೊಂಡಿರುವ 7ನೇ ವೇತನ ಆಯೋಗದಿಂದ ವರದಿ ಸಲ್ಲಿಕೆಯಾಗು ತ್ತಿದೆ ಹಗ್ಗ ಜಗ್ಗಾಟದ ನಡುವೆಯೂ ಎರಡು ಬಾರಿ ಅವಧಿಯನ್ನು ವಿಸ್ತರಣೆ ಮಾಡಿದ ನಂತರವು ಮತ್ತೊಮ್ಮೆ ಅವಧಿಯನ್ನು ವಿಸ್ತರಣೆ ಮಾಡಲಾ ಗುತ್ತದೆ ಎಂದುಕೊಂಡಿರುವ ನಡುವೆಯೇ ಆಯೋಗವು ರಾಜ್ಯ ಸರ್ಕಾರಕ್ಕೆ 7ನೇ ವೇತನ ಆಯೋಗದ ವರದಿಯನ್ನು ಸಲ್ಲಿಕೆ ಮಾಡುತ್ತಿದೆ.
ಈಗಾಗಲೇ ಕಂಪ್ಲೀಟ್ ಆಗಿ ವರದಿಯನ್ನು ಸಿದ್ದತೆ ಮಾಡಿರುವ ನಿವೃತ್ತ ಐಎಎಸ್ ಅಧಿಕಾರಿ ಸುಧಾಕರ್ ರಾವ್ ನೇತ್ರತ್ವದಲ್ಲಿನ ನಿಯೋಗವು ಸಧ್ಯ ತಾವು ಸಿದ್ದ ಮಾಡಿರುವ 7ನೇ ವೇತನ ಆಯೋಗದ ವರದಿಯನ್ನು ಸಲ್ಲಿಕೆ ಮಾಡಲು ಮುಂದಾಗಿದೆ.2022 ರ ನವಂಬರ್ ನಲ್ಲಿ ರಚನೆ ಗೊಂಡಿರುವ ಈ ಒಂದು ಆಯೋಗವು 6 ತಿಂಗಳಲ್ಲಿ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಕೆ ಮಾಡಬೇಕು
ಹೀಗಿರುವಾಗ ಎರಡು ಬಾರಿ ಅವಧಿಯನ್ನು ವಿಸ್ತರಣೆಯನ್ನು ಮಾಡಿ ಸಧ್ಯ ಕೊನೆಗೂ ವರದಿಯನ್ನು ರಾಜ್ಯ ಸರ್ಕಾರಕ್ಕೆ ಆಯೋಗವು ನೀಡಲು ಮುಂದಾಗಿದೆ.ಮಾರ್ಚ್ 16 ರಂದು ಬೆಂಗಳೂರಿನಲ್ಲಿ ಮುಖ್ಮಮಂತ್ರಿ ಸಿದ್ದರಾಮಯ್ಯ ಅವರಿಗೆ ಆಯೋಗದ ಅಧ್ಯಕ್ಷರ ನೇತ್ರತ್ವದಲ್ಲಿ ವರದಿಯನ್ನು ಹಸ್ತಾಂತರ ಮಾಡಲಿದ್ದು ಮುಂದೇ ನಾಗಲಿದೆ ಎಂಬೊದನ್ನು ಕಾದು ನೋಡಬೇಕಿದೆ
ಒಟ್ಟಾರೆ 6 ತಿಂಗಳ ವರದಿಗೆ ಒಂದೂವರೆ ವರ್ಷ ತಗೆದುಕೊಂಡಿದ್ದು ದೊಡ್ಡ ದುರಂತವಾಗಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..