ಬೆಂಗಳೂರು –
ಇಂದೇ ಸಲ್ಲಿಕೆಯಾಗಲಿದೆ 7ನೇ ವೇತನ ಆಯೋಗದ ವರದಿ – ನೀತಿ ಸಂಹಿತಿ ಮುನ್ನವೇ ರಾಜ್ಯ ಸರ್ಕಾರದ ಕೈ ಸೇರುತ್ತಿದೆ ರಾಜ್ಯ ಸರ್ಕಾರಿ ನೌಕರರ ಬಹು ನೀರಿಕ್ಷಿತ 7ನೇ ವೇತನ ಆಯೋಗದ ವರದಿ ಹೌದು
ಬಹು ನಿರೀಕ್ಷಿತ 7ನೇ ವೇತನ ಆಯೋಗದ ವರದಿ ಇಂದೇ ಸಲ್ಲಿಕೆಯಾಗಲಿದೆ.ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕ್ರರಣೆ ಕುರಿತಂತೆ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 2022 ರ ನವಂಬರ್ ಈ ಒಂದು ವೇತನ ಆಯೋಗ ವನ್ನು ರಚನೆ ಮಾಡಿದ್ದರು.
ಒಂದೂವರೆ ವರ್ಷದ ನಂತರ ರಾಜ್ಯದ ಸರ್ಕಾರಿ ನೌಕರರ ಬಿಡುವಿಲ್ಲದ ಒತ್ತಾಯ ಬೇಡಿಕೆಯ ನಂತರ ಈ ಒಂದು ವರದಿಯನ್ನು ಆಯೋಗದ ಅಧ್ಯಕ್ಷರಾಗಿರುವ ಸುಧಾಕರ್ ರಾವ್ ಅವರ ನೇತ್ರತ್ವದಲ್ಲಿನ ಟೀಮ್ ಮುಖ್ಯಮಂತ್ರಿ ಸಿದ್ದರಾ ಮಯ್ಯ ಅವರಿಗೆ ಸಲ್ಲಿಕೆಯನ್ನು ಮಾಡುತ್ತಿದ್ದಾರೆ
.ಹೌದು ಮಾರ್ಚ್ 16 ರಂದು ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಈ ಒಂದು ವರದಿಯನ್ನು ಆಯೋಗದ ನಿಯೋಗವು ಮುಖ್ಯಮಂತ್ರಿಯ ವರ ಕೈಗೆ ಹಸ್ತಾಂತರ ಮಾಡಲಿದ್ದಾರೆ.ಈ ಒಂದು ಕುರಿತಂತೆ ಮುಖ್ಯಮಂತ್ರಿ ಯವರ ಕಾರ್ಯ ಕಲಾಪದಲ್ಲಿ ಉಲ್ಲೇಖವನ್ನು ಮಾಡಲಾಗಿದೆ.
ಒಂದು ಕಡೆಗೆ ಲೋಕಸಭಾ ಚುನಾವಣೆಯ ಕಾವು ಮತ್ತೊಂದೆಡೆ ಗ್ಯಾರಂಟಿ ಯೋಜನೆಗಳನ್ನು ಸರಿಯಾಗಿ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ಕಾರ್ಯತಂತ್ರ,ಇನ್ನೊಂದೆಡೆ ಈಗಾಗಲೇ ಸಮಯಾವಕಾಶ ಹೀಗಿರುವಾಗ ಸಧ್ಯ ಕೊನೆಗೂ ರಾಜ್ಯದ ಸಮಸ್ತ ಸರ್ಕಾರಿ ನೌಕರರು ತುದಿಗಾಲಿ ನಲ್ಲಿ ನಿಂತುಕೊಂಡು ಕಾಯುತ್ತಿರುವ ಈ ಒಂದು ವರದಿಯನ್ನು ಆಯೋಗವು ಸಲ್ಲಿಕೆಯನ್ನು ಮಾಡುತ್ತಿದೆ.
ನೀತಿ ಸಂಹಿತೆಯ ಮುನ್ನವೇ ಈ ಒಂದು ವರದಿಯು ರಾಜ್ಯ ಸರ್ಕಾರದ ಕೈ ಸೇರಲಿದ್ದು ಜಾರಿಗೆ ಯಾವಾಗ ಬರಲಿದೆ ಎಂಬೊದನ್ನು ಕಾದು ನೋಡಬೇಕಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..