ಚಿತ್ರದುರ್ದ –
ಕೇಂದ್ರ ಸಚಿವ ಸದಾನಂದಗೌಡರು
ಪಿಟ್ಸ್ ಬಂದು ಮೂರ್ಚೆಹೋಗಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.

ಪಿಟ್ಸ್ ಬರುತ್ತಿದ್ದಂತೆ ಕೂಡಲೇ ಕೇಂದ್ರ ಸಚಿವ ಸದಾನಂದಗೌಡರನ್ನು ಆಸ್ಪತ್ರೆಗೆ ಕೂಡಲೇ ಅಂಗ ರಕ್ಷಕರು ಕರೆದುಕೊಂಡು ಹೋದರು.

ಅವರೊಂದಿಗೆ ಇದ್ದ ಕೇಂದ್ರ ಸಚಿವರ ಅಂಗರಕ್ಷಕರು ಸದಾನಂದಗೌಡರನ್ನು ಕೂಡಲೇ ಅಂಬ್ಯೂಲನ್ಸ್ ಮೂಲಕ ಕರೆದುಕೊಂಡು ಹೋದರು.
ಚಿತ್ರದುರ್ಗದ ನವೀನ್ ರೆಸಿಡೆನ್ಸಿ ಬಳಿ ಈ ಒಂದು ಘಟನೆ ನಡೆದಿದೆ.

ಶಿವಮೊಗ್ಗದಲ್ಲಿ ನಡೆದ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿ ಶಿವಮೊಗ್ಗದಿಂದ ಚಿತ್ರದುರ್ಗಕ್ಕೆ ಬಂದಿದ್ದರು ಡಿವಿಎಸ್.ಕಾರಿನಿಂದ ಇಳಿಯುತ್ತಿದ್ದ ವೇಳೆ ಪಿಟ್ಸ್ ಬಂದು ಮೂರ್ಚೆ ಹೋದರು.
ತಕ್ಷಣ ಎಸ್ಕಾರ್ಟ್ ವಾಹನದಲ್ಲಿ ಕೇಂದ್ರ ಸಚಿವರನ್ನು ಸ್ಥಳದಿಂದ ಅಂಗರಕ್ಷಕರು ಬಸವೇಶ್ವರ ಆಸ್ಪತ್ರೆಗೆ ಕರೆದೋಯ್ದರು. ಸಧ್ಯ ಚಿತ್ರದುರ್ಗದ ಬಸವೇಶ್ವರ ಆಸ್ಪತ್ರೆಗೆ ಕೇಂದ್ರ ಸಚಿವರು ದಾಖಲಾಗಿದ್ದು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.