ಬೆಂಗಳೂರು –
ಮಂಡ್ಯ, ಹಾಸನ, ಕೋಲಾರ ಅಭ್ಯರ್ಥಿಗಳನ್ನು ಘೋಷಿಸಿದ ಜೆಡಿಎಸ್ ಹೌದು ಜೆಡಿಎಸ್ ಕೊನೆಗೂ 3 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಫೈನಲ್ ಮಾಡಿದೆ.28 ಕ್ಷೇತ್ರಗಳ ಫೈಕಿ ಮೂರು ಕ್ಷೇತ್ರಗಳಾದ ಕೋಲಾರ, ಮಂಡ್ಯ ಮತ್ತು ಹಾಸನ ಲೋಕಸಭಾ ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಹೆಚ್.ಡಿ ಕುಮಾರ ಸ್ವಾಮಿ ಅವರೇ ಕಣಕ್ಕಿಳಿಯಲಿದ್ದಾರೆ. ಹಾಸನ ದಿಂದ ಪ್ರಜ್ವಲ್ ರೇವಣ್ಣ ಸ್ಪರ್ಧೆ ಮಾಡಲಿದ್ದಾರೆ. ಕೋಲಾರ ಲೋಕಸಭಾ ಕ್ಷೇತ್ರದ ಟಿಕೆಟ್ ಮಲ್ಲೇಶ್ ಬಾಬುಗೆ ನೀಡಲಾಗಿದೆ.
ಹಾಸನದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಮಾತನಾಡಿ ಮೂರು ಕ್ಷೇತ್ರಗಳ ಅಭ್ಯರ್ಥಿ ಆಯ್ಕೆಯ ಮಾಹಿತಿ ನೀಡಿದರು. ಕುಮಾರಸ್ವಾಮಿ ಗಿಂತ ಹೆಚ್ಚಾಗಿ ಮಂಡ್ಯದ ಜನ ಅವರನ್ನು ಬಿಡುತ್ತಿಲ್ಲ.ಜನ ಬಿಡ್ತಿಲ್ಲ,ನೀವೇ ಬನ್ನಿ ಅಂತಿದ್ದಾರೆ ಎಂದು ಮಂಡ್ಯದಿಂದ ಕುಮಾರ ಸ್ವಾಮಿ ಸ್ಪರ್ಧೆಯನ್ನು ಸಮರ್ಥಿಸಿದರು.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..