ಹುಬ್ಬಳ್ಳಿ –
ಚಿಗರಿ ಬಸ್ ಗಳ ಕಾಡತಾ ಇದೆ ರೇಡಿಯೇಟರ್ ಸಮಸ್ಯೆ – ಹುಬ್ಬಳ್ಳಿಯಲ್ಲೊಮ್ಮೆ ಧಾರವಾಡದ ಲ್ಲೊಮ್ಮೆ ನೀರು ಹಾಕಿದ್ದೇ ಹಾಕಿದ್ದು ಚಾಲಕರ ಸಮಸ್ಯೆ ಯಾರಿಗೂ ಕಾಣುತ್ತಿಲ್ಲ ಕೇಳುತ್ತಿಲ್ಲ AC ಆಫೀಸ್ ನಲ್ಲಿ ಮೌನವಾಗಿದ್ದಾರೆ ಅಧಿಕಾರಿಗಳು
ಹುಬ್ಬಳ್ಳಿ ಧಾರವಾಡ ಅವಳಿ ನಗರದ ಮಧ್ಯೆ ತ್ವರಿತ ಸಾರಿಗೆ ಸಂಪರ್ಕ ಸಾರಿಗೆಯಾಗಿ ಚಿಗರಿ ಬಸ್ ಗಳು ಸಂಚಾರವನ್ನು ಮಾಡುತ್ತಿವೆ.ಎರಡು ನಗರಗಳ ಮಧ್ಯೆ ಈ ಒಂದು ಚಿಗರಿ ಬಸ್ ಗಳನ್ನು ಬಿಆರ್ ಟಿಎಸ್ ಸಂಸ್ಥೆ ಓಡಾಡಿಸುತ್ತಿದ್ದು ಹತ್ತಾರು ಸಮಸ್ಯೆಗಳ ನಡುವೆ ಈ ಒಂದು ಸಾರಿಗೆ ಸಾರ್ವ ಜನಿಕರಿಗೆ ಅನುಕೂಲದೊಂದಿಗೆ ಅನಾನೂಕೂಲ ವಾಗಿದೆ.
ಅವೈಜ್ಞಾನಿಕವಾಗಿರುವ ಈ ಒಂದು ಬಸ್ ಸೇವೆಗೆ ಸಾಕಷ್ಟು ಪ್ರಮಾಣದಲ್ಲಿ ವಿರೋಧ ಕೂಡಾ ಕಂಡು ಬರುತ್ತಿದೆ.ಇದಕ್ಕೆ ನೂರೆಂಟು ಕಾರಣಗ ಳಿದ್ದು ಇನ್ನೂ ಇದು ಒಂದೆಡೆಯಾದರೆ ಇನ್ನೂ ಚಾಲಕರಿಗೂ ಕೂಡಾ ಈ ಒಂದು ಚಿಗರಿ ಬಸ್ ಗಳು ದೊಡ್ಡ ಪ್ರಮಾಣದಲ್ಲಿ ದೊಡ್ಡ ತಲೆ ನೋವಾಗಿವೆ.
ಒಂದು ಕಡೆಗೆ ಸೆನ್ಸಾರ್ ಗಳ ಮೇಲೆ ನಡೆಯುತ್ತಿ ರುವ ಬಸ್ ಗಳನ್ನು ಇಲಾಖೆ ಸರಿಯಾಗಿ ಮೇಲಿಂದ ಮೇಲೆ ದುರಸ್ತಿ ಸೇರಿದಂತೆ ಏನು ಕೂಡಾ ಮಾಡುತ್ತಿಲ್ಲ ಹೀಗಾಗಿ ಆರಂಭಗೊಂಡು ಐದು ವರ್ಷಗಳಿಂದ ಈವರೆಗೆ ಕೂಡಾ ಇದೇ ಪರಸ್ಥಿತಿಯಲ್ಲಿ ಬಸ್ ಗಳು ಸಂಚಾರವನ್ನು ಮಾಡುತ್ತಿದ್ದು ಒಂದಿಷ್ಟು ಹಿರಿಯ ನುರಿತ ಚಾಲಕರು ಇರುವ ಹಿನ್ನಲೆಯಲ್ಲಿ ಸುಮ್ಮನೇ ತಳ್ಳುತ್ತಾ ಚಿಗರಿ ಬಸ್ ಗಳು ಹುಬ್ಬಳ್ಳಿ ಧಾರವಾಡ ಮಧ್ಯೆ ಸಂಚಾರವನ್ನು ಮಾಡುತ್ತಿವೆ.
ಇದೇಲ್ಲಾ ಒಂದು ವಿಚಾರವಾದರೆ ಇನ್ನೂ ಪ್ರಮುಖವಾಗಿ ಬಸ್ ಗಳ ವ್ಯವಸ್ಥೆ ಒಂದೆಡೆ ಇರಲಿ ಸಧ್ಯ ಸಿಕ್ಕಾಪಟ್ಟಿ ಬಿಸಿಲಿನ ತಾಪಮಾನ ಇದರ ನಡುವೆ ಬಿಡುವಿಲ್ಲದೇ ಸಂಚಾರವನ್ನು ಮಾಡುತ್ತಿರುವ ಈ ಒಂದು ಬಸ್ ಗಳನ್ನು ಯಂತ್ರ ಗಳು ಕೂಲ್ ಮಾಡುವ ವ್ಯವಸ್ಥೆ ಈ ಬಸ್ ನಲ್ಲಿ ರುವ ರೇಡಿಯೇಟರ್ .
ಈ ಒಂದು ರೇಡಿಯೇಟರ್ ಗಳ ಸರಿಯಾದ ಮೆಂಟೆನನ್ಸ್ ಇಲ್ಲದ ಕಾರಣ ರೇಡಿಯೇಟರ್ ಗಳಿಗೆ ಚಾಲಕರು ನೀರು ಹಾಕಿದ್ದೇ ಹಾಕಿದ್ದು ಹುಬ್ಬಳ್ಳಿಯಿಂದ ಧಾರವಾಡ ಗೆ ಬಂದರೆ ಧಾರವಾಡದಿಂದ ಹುಬ್ಬಳ್ಳಿಗೆ ಹೋದರೆ ನೀರು ಹಾಕಬೇಕು.
ಹುಬ್ಬಳ್ಳಿಯ ರೈಲ್ವೆ ನಿಲ್ದಾಣದಲ್ಲಿ ತಾಂತ್ರಿಕ ಬಸ್ ಶೆಲ್ಟರ್ ನ್ನು ಬಿಟ್ಟರೆ ಯಾವುದೇ ನೀರಿನ ಸೌಲಭ್ಯ ಗಳಿಲ್ಲ ಹೀಗಾಗಿ ಚಾಲಕರಿಗೆ ದೊಡ್ಡ ಸಮಸ್ಯೆ ಯಾಗಿದ್ದು ತಾವು ಕುಡಿಯಲು ತಗೆದುಕೊಂಡು ಬಂದಿರುವ ನೀರನ್ನು ಹಾಕಿಕೊಂಡು ಬಸ್ ಗಳನ್ನು ಕೂಲ್ ಕೂಲ್ ಮಾಡುತ್ತಾ ಕರ್ತವ್ಯವನ್ನು ಮಾಡುತ್ತಿದ್ದಾರೆ.
ಒಂದು ಟ್ರೀಪ್ ಗೆ 10 ಲೀಟರ್ ಗಳ ಅವಶ್ಯಕತೆ ಇದ್ದು ಈ ಒಂದು ರೇಡಿಯೇಟರ್ ಗಳು ಕುಡಿಯು ತ್ತಿದ್ದು ಹೀಗಾಗಿ ಇದೊಂದು ಚಿಗರಿ ಬಸ್ ಚಾಲಕ ರಿಗೆ ದೊಡ್ಡ ಸಮಸ್ಯೆಯೊಂದಿಗೆ ತಲೆನೋವಾಗಿದೆ. ಈ ಒಂದು ಕುರಿತಂತೆ ಚಾಲಕರು ಡೂಟಿ ಮುಗಿದ ಮೇಲೆ ತಮ್ಮ ತಮ್ಮ ಲಾಗ್ ಶೀಟ್ ನಲ್ಲಿ ಉಲ್ಲೇಖ ವನ್ನು ಮಾಡಿ ಹೋದರು ಕೂಡಾ ಯಾರು ಕೂಡಾ ತಲೆ ಕೆಡಿಸಿಕೊಳ್ಳುತ್ತಿಲ್ಲ ಕಣ್ತೇರೆದು ನೋಡುತ್ತಿಲ್ಲ
ಎಸಿ ಯ ನಡುವೆ ಕಚೇರಿಯಲ್ಲಿ ಕುಳಿತುಕೊಳ್ಳುವ ಇಲಾಖೆಯ ಅಧಿಕಾರಿಗಳು ಇನ್ನಾದರೂ ಈ ಒಂದು ಕುರಿತಂತೆ ನೋಡಿ ಚುರು ಚುರು ಎನ್ನುವ ಬಿಸಿಲಿನ ನಡುವೆ ಈ ಒಂದು ದೊಡ್ಡ ರೇಡಿಯೇ ಟರ್ ಸಮಸ್ಯೆಗೆ ಮುಕ್ತಿ ನೀಡಿ ಬಿಡುವಿಲ್ಲದ ಕರ್ತವ್ಯದ ನಡುವೆಯೂ ಧಾರವಾಡದಲ್ಲೊಮ್ಮೆ ಹುಬ್ಬಳ್ಳಿಯಲ್ಲೊಮ್ಮೆ ನೀರು ಹಾಕುವುದನ್ನೇ ದೊಡ್ಡ ತಲನೋವಾಗಿ ಮಾಡಿಕೊಂಡಿದ್ದ ಚಾಲಕರಿಗೆ ಒಂದಿಷ್ಟು ಕೂಲ್ ಮಾಡಬೇಕಿದೆ
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ ಧಾರವಾಡ…..