ಹುಬ್ಬಳ್ಳಿ –
ಮತದಾನ ಪ್ರಮಾಣ ಹೆಚ್ಚಳಕ್ಕೆ ಮಹಾನಗರ ಪಾಲಿಕೆಯ ಆಯುಕ್ತ ಡಾ ಈಶ್ವರ ಉಳ್ಳಾಗಡ್ಡಿ ಯವರ ಮಾಸ್ಟರ್ ಪ್ಲಾನ್ – ಮಾಲ್ ಗಳಲ್ಲಿ ಮತದಾನ ಹೆಚ್ಚಳಕ್ಕೆ ಜಾಗೃತಿ ಆರಂಭ ಹೌದು
ಜಿಲ್ಲಾಡಳಿತ, ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯಿಂದ ಹುಬ್ಬಳ್ಳಿ ಮಹಾನಗರದ ವಿವಿಧ ಪ್ರತಿಷ್ಠಿತ ಮಾಲ್ ಹಾಗೂ ಸೂಪರ್ ಮಾರ್ಕೆಟ್‍ಗಳಲ್ಲಿ ಮತದಾರ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳ ಲಾಗಿದೆ.
ಮತದಾನದ ಕುರಿತು ಸೆಲ್ಫಿ ಪಾಯಿಂಟ್ ಹಾಗೂ ಸ್ಟ್ಯಾಂಡ್ ಗಳನ್ನು (ಸ್ಟ್ಯಾಂಡೀಸ್)ಹುಬ್ಬಳ್ಳಿಯ ಯು ಮಾಲ್, ಲಕ್ಷ್ಮೀ ಮಾಲ್, ಓಯಾಸಿಸ್ ಮಾಲ್, ಸ್ಟೆಲ್ಲರ್ ಮಾಲ್, ಸ್ಯಾಟ್‍ಲೈಟ್ ಕಾಂಪ್ಲೆಕ್ಸ್ ಗಳಲ್ಲಿ ಅಳವಡಿಸಲಾಗಿದೆ ಹುಬ್ಬಳ್ಳಿ ಜನತೆಯ ಈ ಸೆಲ್ಫೀ ಪಾಯಿಂಟ್‍ಗಳಲ್ಲಿ ಸೆಲ್ಫೀ ತೆಗೆದುಕೊಳ್ಳುತ್ತಿದ್ದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತ ಈಶ್ವರ ಉಳಾಗಡ್ಡಿ ಈ ಒಂದು ಪ್ಲಾನ್ ಮಾಡಿದ್ದಾರೆ
ಮಹಾನಗರ ಪಾಲಿಕೆಯ ಮತದಾನದ ಕುರಿತು ಈ ಸೆಲ್ಫೀ ಪಾಯಿಂಟ್‍ಗಳ ಮೂಲಕ ವಿನೂತ ನವಾಗಿ ಮತದಾನ ಜಾಗೃತಿ ಮೂಡಿಸಲಾಗುತ್ತಿದೆ. ಹುಬ್ಬಳ್ಳಿ-ಧಾರವಾಡ ಮಹಾನಗರ ವ್ಯಾಪ್ತಿಯ 82 ವಾರ್ಡ್ ಗಳಲ್ಲಿ ಮತದಾನ ಪ್ರಚಾರಕ್ಕಾಗಿ ಟ್ಯಾಬ್ಲೊ ವಾಹನ ಸಂಚರಿಸಲಿದೆ ಇದರ ಜೊತೆ ಯಲ್ಲಿ ಎಲ್.ಇ.ಡಿ ವಾಹನ ಸಹ ಎಲ್ಲಾ ವಾರ್ಡ್ ಗಳಲ್ಲಿ ಸಂಚರಿಸಲಿದೆ.
ಸ್ಮಾರ್ಟ್ ಸಿಟಿ ಯೋಜನೆಡಿಯ 36 ಡಿಜಿಟಲ್ ಡಿಸ್‍ಪ್ಲೈ ಬೋರ್ಡ್‍ಗಳಲ್ಲಿ ಮತದಾನ ಜಾಗೃತಿ ಕುರಿತು ವಿಡಿಯೋಗಳನ್ನು ಪ್ರಸಾರ ಮಾಡಲಾ ಗುತ್ತಿದೆ. 15 ಹೋಲ್ಡಿಂಗ್ಸ್ ಗಳನ್ನು ಅಳವಡಿಸ ಲಾಗಿದೆ, ಪ್ರತಿದಿನ ಮನೆ-ಮನೆಗೆ ಹೋಗಿ ಕಸ ಹೊತ್ಯೊಯುವ ವಾಹನಗಳಲ್ಲಿ ಮತದಾನ ಜಾಗೃತಿ ಜಿಂಗಲ್ಸ್‍ಗಳನ್ನು ಅಳವಡಿಸಲಾಗಿದೆ ಎಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತ ಈಶ್ವರ ಉಳಾಗಡ್ಡಿ ಅವರು ತಿಳಿಸಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..