ದೊಡ್ಡ ದೊಡ್ಡ ಪರೀಕ್ಷೆಗಳಿಲ್ಲದ CCtv ಕ್ಯಾಮೆರಾ SSLC ಪರೀಕ್ಷೆಗೆ ಏಕೆ – ಹುಟ್ಟುಕೊಂಡಿವೆ ಹಲವು ಪ್ರಶ್ನೆಗಳು ವಿಚಿತ್ರವಾಗಿ ನಡೆದುಕೊಳ್ಳುತ್ತಿರುವ ಪರೀಕ್ಷಾ ಮಂಡಳಿ ವಿರುದ್ದ ಸಾರ್ವಜನಿಕರ ಅಸಮಾಧಾನ ಹೌದು
ಸಾಮಾನ್ಯವಾಗಿ ಇಂದು ಯಾವುದೇ ಪರೀಕ್ಷೆ ಯನ್ನು ನಡೆಸುವುದು ಎಂದರೆ ಸುಲಭದ ಮಾತಲ್ಲ.ಎಷ್ಟೇ ಕಟ್ಟು ನಿಟ್ಟಾಗಿ ಪರೀಕ್ಷೆ ಮಾಡಿದ್ರು ಕೂಡಾ ಏನಾದರೂ ಒಂದಿಲ್ಲ ಒಂದು ಎಡವಟ್ಟು ಗಳಾಗುತ್ತವೆ.ಅದರಲ್ಲೂ ದೊಡ್ಡ ದೊಡ್ಡ ಪರೀಕ್ಷೆ ಗಳಲ್ಲೂ ಇದು ಕಂಡು ಬರುತ್ತಿದ್ದು ಹೀಗಿರುವಾಗ ಈ ಒಂದು ದೊಡ್ಡ ಪರೀಕ್ಷೆಗಳಿಗೆ ಸಿಸಿ ಟಿವಿ ಕ್ಯಾಮೆರಾ ಗಳನ್ನು ಹಾಕುವ ಬದಲಾಗಿ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಈ ಒಂದು ಸಿಸಿ ಟಿವಿ ಕ್ಯಾಮೆರಾ ಕಡ್ಡಾಯ ಮಾಡಿದ್ದು ಹಲವರ ಅಸಮಾಧಾನಕ್ಕೆ ಕಾರಣವಾಗಿದೆ.
ಹೌದು ಇತ್ತೀಚಿಗೆ ನಡೆಯುತ್ತಿರುವ ಪ್ರತಿಯೊಂದು ಪರೀಕ್ಷೆಗಳಿಗೆ ಇಂದಿನ ಯಾವುದೇ ದೊಡ್ಡ ಪರೀಕ್ಷೆ ಗಳಿಲ್ಲದ ಸಿಸಿ ಕ್ಯಾಮೆರಾ ಮತ್ತು ವೆಬ್ ಕ್ಯಾಮೆರಾ ಗಳು ಎಸ್ಸೆಸ್ಸೆಲ್ಸಿ ಪರೀಕ್ಷಾ ಕೊಠಡಿಗಳಲ್ಲಿ ಕಡ್ಡಾಯ ಮಾಡಿರುವುದು ಏಕೆ ಎಂದು ರೂಪ್ಸಾ ಸಂಘಟನೆ ಪ್ರಶ್ನಿಸಿದೆ.ಈ ಕುರಿತು ಸಂಘಟನೆಯ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಪತ್ರಿಕಾ ಹೇಳಿಕೆ ನೀಡಿದ್ದು ಶಿಕ್ಷಣ ಇಲಾಖೆ ಹಾಗೂ ಪ್ರೌಢಶಾಲಾ ಪರೀಕ್ಷಾ ಮಂಡಳಿ ಇತ್ತೀಚಿನ ದಿನಗಳಲ್ಲಿ ವಿಚಿತ್ರವಾಗಿ ನಡೆದುಕೊಳ್ಳುತ್ತಿದೆ ಎಂದು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಐಎಎಸ್, ನೀಟ್, ಜೆಇಇ, ಪಿಯುಸಿ ಇತ್ಯಾದಿ ಯಾವುದೇ ಪರೀಕ್ಷೆಗೆ ಇಲ್ಲದ ಕಣ್ಗಾವಲು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಯಾಕೆ ಇಂಥ ಕೆಟ್ಟ ಅಸಂಪ್ರದಾಯಿಕ ಪದ್ಧತಿಗಳನ್ನು ರೂಪಿಸುವ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕೆಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು.ಇನ್ನೂ ಪ್ರತಿ ಕೊಠಡಿಗೆ ಸಿಸಿ ಕ್ಯಾಮೆರಾ ಅಳವಡಿಸಿ ಅವುಗಳನ್ನು ವೆಬ್ ಲಿಂಕ್ಗೆರ ಜೋಡಿಸಿ
ಸ್ಥಳೀಯ ಪೊಲೀಸ್ ಸ್ಟೇಷನ್ ಜಿಲ್ಲಾ ಪಂಚಾಯತ್ ಹಾಗೂ ಸಾರ್ವಜನಿಕರಿಗೆ ನೇರ ಸಂಪರ್ಕಕ್ಕೆ ಸಿಗುವಂತೆ ಮಾಡುವ ನಿರ್ಧಾರ ಮಾಡಿ ಮೂರು ದಿನದಲ್ಲಿ ಪರೀಕ್ಷೆ ನಡೆಯುವ ಎಲ್ಲಾ ಕೇಂದ್ರಗಳಿಗೆ ಸಿಸಿ ಕ್ಯಾಮೆರಾ ಅಳವಡಿ ಸಲೇಬೇಕು ಎಂಬ ಮಕ್ಕಳಿಗೆ ಭಯ ಹುಟ್ಟಿಸು ವಂತಹ ದುಬಾರಿ ನಿರ್ಣಯ ಮಾಡಲಾಗಿದೆ ಎಂದರು.
ಇನ್ನೂ ಮಕ್ಕಳ ಮನಸ್ಸು ಅತ್ಯಂತ ಸೂಕ್ಷ್ಮ,ಪರೀಕ್ಷಾ ಕೊಠಡಿಗಳಲ್ಲಿ ನಿರ್ಭೀತಿಯಿಂದ ಪರೀಕ್ಷೆ ಬರೆ ಯುವಂತಹ ವಾತಾವರಣ ಸೃಷ್ಟಿ ಮಾಡುವ ಬದಲು ದೊಡ್ಡ ಅಪರಾಧ ತಡೆಯುವರಂತೆ ಈ ರೀತಿ ಮಾಡುವ ಕ್ರಮ ಖಂಡನೀಯ ಎಂದು ಅವರು ಹೇಳಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..