ಹುಬ್ಬಳ್ಳಿ –
ಪೂರ್ಣಿಮಾ ಸವದತ್ತಿಯವರಿಗೆ ಹೊಸ ಜವಾಬ್ದಾರಿ ನೀಡಿದ JDS ವರಿಷ್ಠರು – ಉತ್ಸಾಹಿ ಮಹಿಳಾ ಲೀಡರ್ ಪೂರ್ಣಿಮಾ ಸವದತ್ತಿಗೆ ಮಹಿಳಾ ಘಟಕ ಅಧ್ಯಕ್ಷ ಜವಾಬ್ದಾರಿ….. ಕುಮಾರಸ್ವಾಮಿ ಯವರ ಆದೇಶದಂತೆ ನೇಮಕಾತಿ ಹೌದು
ಅಧಿಕಾರ ಇರಲಿ ಇಲ್ಲದಿರಲಿ ಜೆಡಿಎಸ್ ಪಕ್ಷ ಸಂಘಟನೆ ಮಾಡುತ್ತಾ ಸಮಸ್ಯೆಗಳು ಗಮನಕ್ಕೆ ಬಂದ ಕೂಡಲೇ ಸದಾ ಧ್ವನಿ ಎತ್ತುತ್ತಾ ಹೋರಾಟ ವನ್ನು ಮಾಡುತ್ತಿದ್ದಾರೆ ಪೂರ್ಣಿಮಾ ಸವದತ್ತಿ.
ಧಾರವಾಡ ಜಿಲ್ಲೆಯ ಖಡಕ್ ಮಹಿಳಾ ಹೋರಾಟ ಗಾರ್ತಿ ಜೆಡಿಎಸ್ ಪಕ್ಷದ ಮುಖಂಡೆಯಾಗಿರುವ ಪೂರ್ಣಿಮಾ ಸವದತ್ತಿಯವರ ಕೆಲಸ ಕಾರ್ಯಗ ಳನ್ನು ನೋಡಿ ಸಧ್ಯ ಅವರಿಗೆ ಪಕ್ಷದಲ್ಲಿ ಉನ್ನತ. ವಾದ ಸ್ಥಾನವನ್ನು ನೀಡಲಾಗಿದೆ.ಹೌದು ಸಧ್ಯ ಅವರನ್ನು ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಜನತಾದಳ ಜಾತ್ಯಾತೀತ ಪಕ್ಷದ ಮಹಿಳಾ ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ಪಕ್ಷದ ವರಿಷ್ಠರಾಗಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಸೂಚನೆಯಂತೆ ಪೂರ್ಣಿಮಾ ಸವದತ್ತಿಯವರಿಗೆ ಸಧ್ಯ ಹೊಸದಾದ ಹುದ್ದೆಯನ್ನು ನೀಡಲಾಗಿದೆ.ಸಧ್ಯ ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಜೆಡಿಎಸ್ ಪಕ್ಷದ ಮಹಿಳಾ ಘಟಕಕ್ಕೆ ಅಧ್ಯಕ್ಷರ ನ್ನಾಗಿ ನೇಮಕ ಮಾಡಿ ಆದೇಶ ಮಾಡಲಾಗಿದೆ
ಈ ಒಂದು ನೇಮಕಾತಿಯಿಂದಾಗಿ ಪಕ್ಷವು ನನ್ನ ಕೆಲಸ ಕಾರ್ಯಗಳನ್ನು ಗುರುತಿಸಿ ಮತ್ತಷ್ಟು ಪಕ್ಷದ ಸಂಘಟನೆ ಸೇರಿದಂತೆ ಹಲವಾರು ಕೆಲಸ ಕಾರ್ಯ ಗಳನ್ನು ಮಾಡಲು ಶಕ್ತಿಯನ್ನು ನೀಡಿದ್ದು ಸಂತೋಷವಾಗಿದೆ ಎಂದು ಪೂರ್ಣಿಮಾ ಸವದತ್ತಿ ಹೇಳಿದ್ದಾರೆ.
ಪಕ್ಷದ ವರಿಷ್ಠರ ಸೂಚನೆಯಂತೆ ಧಾರವಾಡ ಜಿಲ್ಲಾಧ್ಯಕ್ಷ ಗುರುರಾಜ ಹುಣಸಿಮರದ ಅವರು ಈ ಒಂದು ನೇಮಕಾತಿಯನ್ನು ಮಾಡಿ ಆದೇಶ ವನ್ನು ಮಾಡಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ……